ಬೆಂಗಳೂರು: ಫೆಬ್ರವರಿ ತಿಂಗಳಲ್ಲೇ ಬಿಸಿಲಿನ ಝಳಕ್ಕೆ ಜನ ತಂಪುಪಾನೀಯದ ಮೊರೆ ಹೋಗುತ್ತಿದ್ದಾರೆ. ಚಳಿಗಾಲದಲ್ಲೇ ಹೀಗೆ ಬಿಸಿಲಿದೆ, ಇನ್ನೂ ಬೇಸಿಗೆಯಲ್ಲಿ ಹೇಗೋ ಎಂಬ ಜನರ ಮಾತಿನಂತೆ ಹವಾಮಾನ ಇಲಾಖೆ (Meteorological Department) ಕೂಡ ಈ ಕುರಿತು ಎಚ್ಚರಿಕೆ ನೀಡಿದೆ.
ಕಳೆದ ವರ್ಷದ ಮಳೆಯ ಅಭಾವದ ಎಫೆಕ್ಟ್ ಇನ್ನೂ ಅನುಭವಿಸುತ್ತಿದ್ದೇವೆ. ನೀರಿಲ್ಲದೇ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿ ಬರದ ಪರಿಸ್ಥಿತಿ ಎದುರಾಗಿದೆ. ಇನ್ನೂ ಫೆಬ್ರವರಿ ತಿಂಗಳಲ್ಲೇ 34.2 ದಾಖಲೆ ಪ್ರಮಾಣದ ಉಷ್ಣಾಂಶ ರಾಜ್ಯದಲ್ಲಿ ದಾಖಲಾಗಿತ್ತು. ಈಗ ಮಾರ್ಚ್ 1ರಿಂದ ಬೇಸಿಗೆ (Summer) ಶುರುವಾಗಿದ್ದು, ಮೇ ಅಂತ್ಯದವರೆಗೆ ಬಿಸಿಲು ಜನರಿಗೆ ಕಾಟ ಕೊಡಲಿದೆ. ಇದನ್ನೂ ಓದಿ: 2022ರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ – ಮಂಡ್ಯ ಬಿಜೆಪಿ ಕಾರ್ಯಕರ್ತ ವಶಕ್ಕೆ
Advertisement
Advertisement
ಪೂರ್ವ ಭಾಗದ ಸಮುದ್ರದ ನೀರಿನ ಉಷ್ಣಾಂಶ 1.5 ಗಿಂತ ಹೆಚ್ಚಾಗುವ ಸಾಧ್ಯತೆ ಇದ್ದು, ಇದನ್ನು ಏಲಿನೋ ಎಂದು ಕರೆಯುತ್ತಾರೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಮೂರು ತಿಂಗಳು ವಾಡಿಕೆಗಿಂತ 70% ಹೆಚ್ಚು ಉಷ್ಣತೆ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಡೀ ರಾಜ್ಯದಲ್ಲೇ ವಾಡಿಕೆಗಿಂತ ಹೆಚ್ಚಿನ ತಾಪಮಾನ ಮುಂದಿನ ಮೂರು ತಿಂಗಳಲ್ಲಿ ಕಾಣಬಹುದಾಗಿದೆ. ಅದೇ ರೀತಿ ಮಾರ್ಚ್‌ನಿಂದ ಮೇ ವೇಳೆಯಲ್ಲಿ ವಾಡಿಕೆಗಿಂತ 70% ರಷ್ಟು ಮಳೆಯಾಗುವ ಸಾಧ್ಯತೆ ಕೂಡ ಇದೆ. ಇದನ್ನೂ ಓದಿ: ಮಂಡ್ಯದ ಬೇಬಿ ಬೆಟ್ಟದಲ್ಲಿ ಇಂದಿನಿಂದ 4 ದಿನ ಟ್ರಯಲ್ ಬ್ಲಾಸ್ಟ್ – ಕೆಆರ್‌ಎಸ್‌ಗೆ ಬಂದ ತಜ್ಞರ ತಂಡ
Advertisement
Advertisement
ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಈ ಬೇಸಿಗೆಯಲ್ಲಿ ವಾಡಿಕೆಗಿಂತ 2 ರಿಂದ 3 ಡಿಗ್ರಿಯವರೆಗೆ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಗರಿಷ್ಠ ತಾಪಮಾನ ಸರಾಸರಿ 37 ಡಿಗ್ರಿ ಇದ್ದರೇ ಉತ್ತರ ಒಳನಾಡಿನಲ್ಲಿ 39 ಡಿಗ್ರಿ ಇರಲಿದೆ. ಜೊತೆಗೆ ಉತ್ತರ ಒಳನಾಡಿನಲ್ಲಿ ಬಿಸಿಗಾಳಿಯ ಆತಂಕ ಕೂಡ ಎದುರಾಗಲಿದೆ. 4.5ಕ್ಕಿಂತ ಹೆಚ್ಚು ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಬಿಸಿಗಾಳಿಯ ವಾತಾವರಣ ಇರಲಿದೆ. ಇದನ್ನೂ ಓದಿ: ಸರ್, ನಾನು ನೂರಾರು ಕೋಟಿಗೆ ಬಾಳ್ತೀನಿ: ಪಾಕ್ ಪರ ಘೋಷಣೆ ಕೂಗಿದ್ದ ನಾಶಿಪುಡಿ ಯಾರು?
ಬೇಸಿಗೆಯಲ್ಲಿ ಜನರು ಎಚ್ಚರಿಕೆಯಿಂದ ಇರಬೇಕಾಗಿದ್ದು, ಆದಷ್ಟು ನೀರು ಕುಡಿಯುವುದರ ಜೊತೆಗೆ ಬೆಳಗ್ಗೆ 11 ರಿಂದ ಸಂಜೆ 3 ಗಂಟೆಯ ವೇಳೆಯಲ್ಲಿ ಹೊರಗೆ ಹೆಚ್ಚು ಸುತ್ತಾಡದೇ ಇದ್ದರೆ ಒಳ್ಳೆಯದು. ಛತ್ರಿಯನ್ನು ಬಳಸಿಕೊಂಡು ಸೂರ್ಯನ ಕಾಂತಿಯಿಂದ ದೂರ ಇರುವಂತೆ ಸೂಚಿಸಿದ್ದು, ಆದಷ್ಟು ಜೀರ್ಣವಾಗುವ ಲಘು ಆಹಾರವನ್ನು ಸೇವಿಸಬೇಕು. ಇದನ್ನೂ ಓದಿ: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗಳು ಮೂರು ದಿನ ಪೊಲೀಸ್ ಕಸ್ಟಡಿಗೆ
ಒಟ್ಟಾರೆ ಫೆಬ್ರವರಿಯಲ್ಲೇ ದಾಖಲೆ ಬರೆದಿರುವ ಸುಡು ಬಿಸಿಲು ಮೇ ಅಂತ್ಯದೊಳಗೆ ವಾಡಿಕೆಗಿಂತ ಹೆಚ್ಚಾಗೇ ಇರಲಿದ್ದು, ಸನ್ ಸ್ಟ್ರೋಕ್ ಕೊಡುವ ಸೂಚನೆ ಇದೆ. ಈ ಮೂರು ತಿಂಗಳಲ್ಲಿ ಆಗಾಗ ಗುಡುಗು ಸಹಿತ ಭಾರೀ ಮಳೆ ಕೂಡ ಆಗುವ ಸಾಧ್ಯತೆ ಸಹ ಇದ್ದು, ಜನ ಆರೋಗ್ಯದ ಕಡೆ ಗಮನವಹಿಸುವುದು ಉತ್ತಮ. ಇದನ್ನೂ ಓದಿ: ಕೇಂದ್ರದಲ್ಲಿ ಕಾಂಗ್ರೆಸ್ ಬಂದ್ರೆ ಮೋದಿ ನರ ಕಟ್- ತಲ್ವಾರ್ ಹಿಡಿದು ಅವಾಜ್ ಹಾಕಿದವನಿಗಾಗಿ ಶೋಧ