ರಾಯಚೂರು: ರಾಷ್ಟ್ರ ರಾಜಕಾರಣ ಒಂದು ರೀತಿ ಕವಲು ದಾರಿಯಲ್ಲಿದೆ. ಕಳೆದ 10-11 ವರ್ಷಗಳಿಂದ ಅತ್ಯಂತ ದುರ್ಬಲ ಪ್ರಧಾನಿ ಈ ದೇಶವನ್ನು ಮುನ್ನಡೆಸುತ್ತಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ದಾಳಿ ಪ್ರಕರಣ ಹಿನ್ನೆಲೆ ಪ್ರಧಾನಿ ಮೋದಿ (Narendra Modi) ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕು ಎಂದು ಮಾಜಿ ಸಂಸದ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ (VS Ugrappa) ಹೇಳಿದ್ದಾರೆ.
ರಾಯಚೂರಿನಲ್ಲಿ (Raichur) ಮಾತನಾಡಿದ ಅವರು, ಸಿಂಹಾವಲೋಕನ ಮಾಡಿದರೆ ಮೋದಿ ಅವಧಿಯಲ್ಲಿ ಅವರ ಸರ್ಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ. 2014ರಿಂದ ದೇಶದ ಮೇಲೆ 3,982 ಸಾರಿ ಭಯೋತ್ಪಾದಕರ ದಾಳಿ ಆಗಿದೆ. ಕಾಶ್ಮೀರದಲ್ಲಿ ನಡೆದ ಘಟನೆಗೆ ಕೇಂದ್ರ ಸರ್ಕಾರದ ಬೇಹುಗಾರಿಕೆ, ಭದ್ರತಾ ವೈಫಲ್ಯ ಕಾರಣ. ಪ್ರಧಾನಿಯನ್ನು ಭಾರಿ ಬಿಂಬಿಸುತ್ತಾರೆ. ಇದೇನಾ ಅಚ್ಚಾ ದಿನ್? ಪ್ರಧಾನಿಯಾಗಿ ಮುಂದುವರೆಯಲು ಮೋದಿಗೆ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೂರು ಜಿಲ್ಲೆ, 9 ಠಾಣೆ, 13 ಸ್ಪೀಡ್ ಬೋಟ್ ಗಸ್ತು – ಅಲರ್ಟ್ ಬಗ್ಗೆ ಕರಾವಳಿ ಕಾವಲು ಪಡೆ ಎಸ್‌ಪಿ ಹೇಳಿದ್ದೇನು?
ದೇಶದ ರಕ್ಷಣೆ ವಿಚಾರದಲ್ಲಿ ಎಂದೂ ಕಾಂಗ್ರೆಸ್ ರಾಜಿ ಮಾಡಿಕೊಳ್ಳುವ ಪ್ರಶ್ನೆಯಿಲ್ಲ. ಉಗ್ರರನ್ನು ಸದೆಬಡೆಯಲು ಕಾಂಗ್ರೆಸ್ ತ್ಯಾಗ, ಬಲಿದಾನ ಮಾಡುತ್ತಾ ಬಂದಿದೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ ಗಾಂಧಿ ಬಲಿದಾನವಾಗಿದೆ. ದೇಶದ ರಕ್ಷಣೆಗೊಸ್ಕರ ಕಾಂಗ್ರೆಸ್ ಸದಾ ಸಿದ್ಧವಿದೆ. ಪ್ರಧಾನಿ, ಕೇಂದ್ರ ಸರ್ಕಾರ ಏನೇ ತೀರ್ಮಾನ ತೆಗೆದುಕೊಂಡರೂ ಬದ್ಧರಿದ್ದೇವೆ. ಆದರೆ ನಿಮ್ಮ ಲೋಪ, ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ಜನರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಆಲಿಕಲ್ಲು ಮಳೆಗೆ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಹಾಳು – ಕಂಗಲಾದ ಕಂಪ್ಲಿಯ ರೈತರು