ಮಂಡ್ಯ: ಮಡಿಕೇರಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆಆರ್ ಎಸ್ ಜಲಾಶಯದ ಒಳ ಹರಿವು ಹೆಚ್ಚಳ ಆಗಿದೆ. ಈಗಾಗಲೇ ಕೆಆರ್ ಎಸ್ ನೀರಿನ ಮಟ್ಟ 110 ಅಡಿ ದಾಟಿದ್ದು, ಜಲಾಶಯ ಭರ್ತಿ ಆಗಲು ಇನ್ನು ಕೇವಲ 13 ಅಡಿಗಳಷ್ಟೇ ಬಾಕಿ ಇದೆ.
ಮಡಿಕೇರಿಯಲ್ಲಿ ಮಳೆರಾಯನ ಅಬ್ಬರದಿಂದ ಕಾವೇರಿ ಕೊಳ್ಳದ ರೈತರಲ್ಲಿ ಸಂತಸ ಮನೆ ಮಾಡಿದೆ. ಇನ್ನು ಮಳೆಗಾಲ ಮುಗಿಯುವ ಒಂದು ತಿಂಗಳ ಮುಂಚಿತವಾಗಿಯೇ ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳ ಭರ್ತಿ ಆಗಲಿದೆ.
Advertisement
ಇಂದಿನಿಂದ 5 ದಿನಗಳ ಕಾಲ ರಾಜ್ಯಾದ್ಯಂತ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು, ಶಿವಮೊಗ್ಗದಲ್ಲಿ ಭಾರೀ ಮಳೆಯಾಗುತ್ತಿದ್ದು, ತೀರ್ಥಹಳ್ಳಿಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇತ್ತು ಉಡುಪಿ, ಕೊಡಗು, ಮಂಗೂರಿನಲ್ಲಿ ಜಿಟಿಜಿಟಿ ಮಳೆ ಹಾಗೆ ಮುಂದುವರಿದಿದ್ದು, ನೆರೆ ಕಡಿಮೆಯಾಗಿಲ್ಲ. ಇದನ್ನೂ ಓದಿ: ಕೆಆರ್ ಎಸ್ ಜಲಾಶಯದಲ್ಲಿ 100 ಅಡಿ ನೀರು ಸಂಗ್ರಹ- ರೈತರು ಫುಲ್ ಖುಷ್
Advertisement
Advertisement
ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳ ಸದ್ಯದ ನೀರಿನ ಪ್ರಮಾಣ ಇಂತಿದೆ:
Advertisement
ಕೆಆರ್ ಎಸ್ (ಮಂಡ್ಯ)
* ಇಂದಿನ ಮಟ್ಟ – 110.40 ಅಡಿ (ಗರಿಷ್ಠ 124.80 ಅಡಿ)
* ಒಳ ಹರಿವು – 22437 ಕ್ಯೂಸಕ್
* ಹೊರ ಹರಿವು – 3499 ಕ್ಯೂಸಕ್
ಕಬಿನಿ (ಮೈಸೂರಿನ ಎಚ್.ಡಿ.ಕೋಟೆಯ ಬೀಚನಹಳ್ಳಿಯಲ್ಲಿದೆ)
* ಇಂದಿನ ಮಟ್ಟ – 2282 ಅಡಿ ( ಗರಿಷ್ಠ 2,284 ಅಡಿ)
* ಒಳ ಹರಿವು – 32,635 ಕ್ಯೂಸೆಕ್
* ಹೊರ ಹರಿವು – 36,000 ಕ್ಯೂಸೆಕ್
ಹಾರಂಗಿ (ಕೊಡಗಿನ ಸೋಮವಾರಪೇಟೆಯ ಹುದ್ಗೂರು)
* ಇಂದಿನ ಮಟ್ಟ – 2857.43 ಅಡಿ (ಗರಿಷ್ಠ 2,859 ಅಡಿ)
* ಒಳ ಹರಿವು – 11675 ಕ್ಯೂಸೆಕ್
* ಹೊರ ಹರಿವು – 8934 ಕ್ಯೂಸೆಕ್
ಹೇಮಾವತಿ (ಹಾಸನದ ಗೋರುರು)
* ಇಂದಿನ ಮಟ್ಟ – 2908.91 ಅಡಿ (ಗರಿಷ್ಠ 2922.00 ಅಡಿ)
* ಒಳ ಹರಿವು – 11001 ಕ್ಯೂಸೆಕ್
* ಹೊರ ಹರಿವು – 2730 ಕ್ಯೂಸೆಕ್
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.