ಬೀದರ್: ರೈತರ ಜಮೀನಾಯ್ತು, ಮಠ, ಮಂದಿರವಾಯ್ತು ಇದೀಗ ಸರ್ಕಾರಿ ಶಾಲೆ ಹಾಗೂ ಗ್ರಾಮಸ್ಥರ ಮನೆಗಳ ಮೇಲೆಯೂ ವಕ್ಫ್ ವಕ್ರದೃಷ್ಟಿ ಬಿದಿದ್ದು ಇಡೀ ಗ್ರಾಮಕ್ಕೆ ಗ್ರಾಮವೇ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸುಪರ್ದಿಗೆ ಸೆರಿಸಲಾಗಿದೆ.
ಬೀದರ್ (Bidar) ತಾಲೂಕಿನ ಧರ್ಮಾಪುರ (Dharmapura) ಗ್ರಾಮದ 2024ರ ಪಹಣಿ ಕಂಡು ಗ್ರಾಮಸ್ಥರು ತಬ್ಬಿಬ್ಬಾಗಿದ್ದು ಗ್ರಾಮದ ಸರ್ಕಾರಿ ಜಮೀನಿನ ಸರ್ವೆ ನಂಬರ್ 87ರ 26 ಎಕರೆ ಜಾಗಕ್ಕೆ ವಕ್ಫ್ ಸೇರಿದ್ದು ಜಾಗಕ್ಕೆ ನೀಷೇದ ಮಾಡಲಾಗಿದೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ರಣರಂಗ ಆಡಿದವರೆಲ್ಲಾ ಮುಗಿದು ಹೋಗಿದ್ದಾರೆ: ಡಿಕೆಶಿ
2013-14ರಿಂದ ಈಚೆಗೆ 26 ಎಕರೆ ಪ್ರದೇಶದ ಗ್ರಾಮದ ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹೆಸರು ಸೇರಿಸಲಾಗಿದ್ದು 200 ಕುಟುಂಬಗಳ 2000ಕ್ಕೂ ಅಧಿಕ ಜನರು ಬೀದಿಗೆ ಬಿದ್ದಿದ್ದಾರೆ. ಇದನ್ನೂ ಓದಿ: ಅನುಮತಿ ಇಲ್ಲದೆ ನೌಟಂಕಿ ಕಾರ್ಯಕ್ರಮ ಆಯೋಜನೆ – ಗ್ರಾಮ ಮುಖ್ಯಸ್ಥನ ಪ್ರತಿನಿಧಿಗೆ ಎಂಜಲು ನೆಕ್ಕಿಸಿದ ಪೊಲೀಸರು