ಬೆಂಗಳೂರು: ಬಹುನಿರೀಕ್ಷಿತ `ದಿ ವಿಲನ್’ ಚಿತ್ರದ 2 ಟೀಸರ್ ರಿಲೀಸ್ ಆಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ‘ದಿ ವಿಲನ್’ ಟೀಸರ್ ಬಿಡುಗಡೆ ಮಾಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಪಾತ್ರ ಪರಿಚಯದ ಒಂದು ಟೀಸರ್ ಹಾಗೂ ಸುದೀಪ್ ಪಾತ್ರ ಪರಿಚಯದ ಇನ್ನೊಂದು ಟೀಸರ್ ರಿಲೀಸ್ ಆಗಿದೆ.
ಅನೆಬಂತೊಂದಾನೆ ಅನ್ನುವ ಧ್ವನಿಯಲ್ಲಿ ಕಿಚ್ಚ ಡೈಲಾಗ್ ಅಬ್ಬರಿಸಿ ಬೊಬ್ಬಿರೆದ್ರೆ, ಶಿವರಾಜ್‍ಕುಮಾರ್ ನಾನ್ ಸೈಲೆಂಟಾಗಿದ್ರೆ ರಾಮಾ, ವೈಲೆಂಟಾದ್ರೆ ರಾವಣ ಎಂಬುದಾಗಿ ಡೈಲಾಗ್ ಹೊಡೆದಿದ್ದಾರೆ. ಇಬ್ಬರ ಪಾತ್ರದಲ್ಲೂ ಸಖತ್ ಕ್ಯೂರಿಯಾಸಿಟಿ ಸೃಷ್ಟಿಸಿದ್ದಾರೆ ನಿರ್ದೇಶಕ ಪ್ರೇಮ್.
Advertisement
Thank u for these words my friend… huggs @ShyamSPrasad https://t.co/d3F15k8suP
— Kichcha Sudeepa (@KicchaSudeep) June 28, 2018
Advertisement
ವಿಲನ್ ಟೀಸರ್ ಅರ್ಧಗಂಟೆಯಲ್ಲೇ ಲಕ್ಷ ವೀವರ್ಸ್ ದಾಟಿದೆ. ಗಂಟೆ ಗಂಟೆಗೂ ವೀವ್ಸ್ ದ್ವಿಗುಣಗೊಳ್ಳುತ್ತಲೇ ಇದೆ. ಅಂದಹಾಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ನಗರದ ಜಿ ಟಿ ಮಾಲ್‍ನಲ್ಲಿ `ದಿ ವಿಲನ್’ ಚಿತ್ರದ ಎರಡೂ ಟೀಸರ್ ಅಧಿಕೃತವಾಗಿ ರಿಲೀಸ್ ಮಾಡಿದ್ದಾರೆ.
Advertisement
ಶೂಟಿಂಗ್ ನಿಮಿತ್ತ ಸರ್ಬಿಯ ದೇಶಕ್ಕೆ ತೆರಳಿರುವ ನಟ ಸುದೀಪ್ ಟ್ವಿಟ್ಟರ್ ಲೈವ್ ಮುಖೇನ ತಂಡಕ್ಕೆ ಶುಭ ಕೋರಿದರು. ಇನ್ನು `ದಿ ವಿಲನ್’ ಚಿತ್ರಕ್ಕೆ ಟೈಮೆಕ್ಸ್ ವಾಚ್ ಕಂಪೆನಿ ಪ್ರಾಯೋಜಕತ್ವ ನೀಡಿದೆ. ದಕ್ಷಿಣ ಭಾರತದಲ್ಲೇ ಕನ್ನಡ ಚಿತ್ರಕ್ಕೆ ಮೊದಲ ಬಾರಿಗ ಪ್ರಾಯೋಜಕತ್ವ ನೀಡಿದೆ. ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಶಿವರಾಜ್ ಕುಮಾರ್, ನಿರ್ದೇಶಕ ಪ್ರೇಮ್ ಅವರಿಗೆ ಟೈಮೆಕ್ಸ್ ಕಂಪೆನಿ ಮಾಲೀಕರು ವಾಚ್ ಕಟ್ಟಿದರು. ಅಲ್ಲದೇ `ದಿ ವಿಲನ್’ ಡೈರಿ ಡೇ ಐಸ್ ಕ್ರೀಂ ಬಿಡುಗಡೆ ಮಾಡಿದರು.
Advertisement
Here are the fabulous teasers of #TheVillain. It's celebration time for Shivanna and @KicchaSudeep Sir's fans. Best wishes to @directorprems https://t.co/vVMWOQzyKYhttps://t.co/uPZD5dM9o1
— Rishab Shetty (@shetty_rishab) June 28, 2018
ಧನ ಸಹಾಯ: ಒಂದು ಟಿಕೆಟ್‍ಗೆ 500 ರೂ. ಪಡೆದು ಟೀಸರ್ ತೋರಿಸಿರುವ ಪ್ರೇಮ್, ಟಿಕೆಟ್‍ನಿಂದ ಬಂದಂತಹ ಹಣವನ್ನು ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿರುವ ಕನ್ನಡದ ನಿರ್ದೇಶಕರಿಗೆ ವಿತರಿಸಿದ್ದಾರೆ. ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನವಿದ್ದು, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಏಮಿಜಾಕ್ಸನ್, ಮಿಥುನ್ ಚಕ್ರವರ್ತಿ ಸೇರಿದಂತೆ ಅತೀ ದೊಡ್ಡತಾರಾಗಣ ಈ ಸಿನಿಮಾದಲ್ಲಿದೆ. ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಸಿಎಂ ಕುಮಾರಸ್ವಾಮಿ ಅವರಿಂದ ನಿರ್ದೇಶಕರಾದ ಬೂದಾಳ್ ಕೃಷ್ಣಮೂರ್ತಿ, ಹಿರೇಮಠ್, ಆನಂದ್ ಪಿ ರಾಜು, ಎ.ಟಿ.ರಘು ಅವರಿಗೆ ಸಹಾಯಧನ ವಿತರಣೆ ಮಾಡಿದರು.