ಮೈಸೂರು: ಸ್ಯಾಂಡಲ್ ವುಡ್ ನ ಬಹುನೀರಿಕ್ಷಿತ ಚಿತ್ರ ದಿ ವಿಲ್ ಸಿನಿಮಾ ಗುರುವಾರ ರಿಲೀಸ್ ಆಗಿದ್ದು, ಚಿತ್ರ ವೀಕ್ಷಿಸಿದ ಬಳಿಕ ಶಿವಣ್ಣ ಅಭಿಮಾನಿಗಳು ನಿರ್ದೇಶಕ ಪ್ರೇಮ್ ವಿರುದ್ಧ ಕೆಂಡಾಲರಾಗಿದ್ದರು. ಈ ಬೆನ್ನಲ್ಲೇ ಮೈಸೂರಿನಲ್ಲಿ ಥಿಯೇಟರ್ ಒಂದನ್ನು ಧ್ವಂಸಗೊಳಿಸಲಾಗಿದೆ.
ಮೈಸೂರಿನ ತಿ.ನರಸೀಪುರ ತಾಲೂಕಿನಲ್ಲಿರೋ ಮುರುಗನ್ ಚಿತ್ರಮಂದಿರವನ್ನು ದಿ ವಿಲನ್ ಚಿತ್ರದ ಅಭಿಮಾನಿಗಳು ಪುಡಿಗೈದಿದ್ದಾರೆ. ಶುಕ್ರವಾರ ರಾತ್ರಿಯ ಶೋ ವೇಳೆ ಈ ಘಟನೆ ನಡೆದಿದೆ.
Advertisement
Advertisement
ಧ್ವಂಸಗೊಳಿಸಿದ್ದು ಯಾಕೆ?:
ಶುಕ್ರವಾರ ರಾತ್ರಿ ದಿ ವಿಲನ್ ಚಿತ್ರದ ಸೆಕೆಂಡ್ ಶೋ ನಡೆಯುತ್ತಿತ್ತು. ಈ ವೇಳೆ ಥಿಯೇಟರ್ ನಲ್ಲಿ ಸರಿಯಾಗಿ ಸೌಂಡ್ ಹಾಗೂ ಚಿತ್ರ ಪ್ರದರ್ಶನ ಆಗುತ್ತಿಲ್ಲವೆಂದು ಚಿತ್ರದ ಅಭಿಮಾನಿಗಳು ಗಲಾಟೆ ಶುರುಮಾಡಿಕೊಂಡಿದ್ದರು. ಈ ಜಗಳ ತಾರಕಕ್ಕೇರಿ ವಿಲನ್ ಫ್ಯಾನ್ಸ್ ಥಿಯೇಟರ್ ನಿಂದ ಹೊರಬಂದು ಕಲ್ಲು ತೂರಾಟ ನಡೆಸಿದ್ದಾರೆ.
Advertisement
ಅಭಿಮಾನಿಗಳ ರೊಚ್ಚಿಗೆ ಚಿತ್ರಮಂದಿರದ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ಕೂಡಲೇ ಥಿಯೇಟರ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿ ತಿ.ನರಸೀಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Advertisement
ಶಿವಣ್ಣ ಅಭಿಮಾನಿಗಳಿಗೆ ಪ್ರೇಮ್ ಸ್ಪಷ್ಟನೆ:
ಚಿತ್ರದಲ್ಲಿ ಶಿವಣ್ಣ ಅವರಿಗೆ ಅವಮಾನಿಸಲಾಗಿದೆ, ಕಾಸ್ಟ್ಯೂಮ್ ನಿಂದ ಹಿಡಿದು ಎಲ್ಲಾ ಪಾತ್ರಗಳಲ್ಲಿಯೂ ಶಿವರಾಜ್ ಕುಮಾರ್ ಅವರಿಗೆ ಅವಮಾನ ಮಾಡಲಾಗಿದೆ ಅಂತ ಅಭಿಮಾನಿಗಳು ಪ್ರೇಮ್ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಪ್ರಸಿದ್ಧ ಚಿತ್ರಮಂದಿರ ನರ್ತಕಿ ಥಿಯೇಟರ್ ಮುಂದೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರೇಮ್, ಸಿನಿಮಾನ ಸಿನಿಮಾ ಥರ ನೋಡಿ. ನಿಮ್ಮನ್ನ ನೋಯಿಸುವುದು ನನ್ನ ಉದ್ದೇಶವಲ್ಲ. ಶಿವಣ್ಣನ ಮುಗ್ಧತೆಯನ್ನು ಆ ಸೀನ್‍ನಲ್ಲಿ ತೋರಿಸಲಾಗಿದೆ. ಆ ಸೀನ್ ನಲ್ಲಿ ಶಿವಣ್ಣ ಅವರ ಅಭಿನಯವೇ ಪ್ರಮುಖ. ಆದ್ದರಿಂದಲೇ ಅಷ್ಟು ಚೆನ್ನಾಗಿ ಮೂಡಿ ಬಂದಿದೆ. ಶಿವಣ್ಣ ಪಾತ್ರ ಒಂದೊಮ್ಮೆ ಫೈಟ್ ಮಾಡಿದ್ದರೆ, ಅಲ್ಲಿ ಅರ್ಥವೇ ಕೆಟ್ಟು ಹೋಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಿನಿಮಾ ಗೆಲ್ಲಲು ಅಭಿಮಾನಿಗಳೇ ಕಾರಣ. ನಿಮ್ಮಿಂದಲೇ ಸಿನಿಮಾ ಗೆಲುವು ಪಡೆದಿದೆ. ಬೇರೆ ಭಾಷೆಯ ಸಿನಿಮಾ ಕ್ಷೇತ್ರದ ಜನರು ತಿರುಗಿ ನೀಡುವಂತೆ ಮಾಡಿದ್ದೀರಿ. ಅದ್ದರಿಂದ ಸಿನಿಮಾವನ್ನು ಹಾಗೆಯೇ ನೋಡಿ. ಈ ಕುರಿತು ಕ್ಷಮೆ ಇರಲಿ ಎಂದು ತಿಳಿಸಿದ್ದಾರೆ. ಆದರೆ ಅಭಿಮಾನಿಗಳ ಬೇಡಿಕೆಯಾದ ಫೈಟ್ ದೃಶ್ಯ ಕತ್ತರಿ ಹಾಕುವ ಬಗ್ಗೆ ಯಾವುದೇ ಮಾತುಗಳನ್ನಾಡಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv