ಕನ್ನಡದ ‘ದಿ ವಿಲನ್’ (The Villain Film) ನಟಿ ಆ್ಯಮಿ ಜಾಕ್ಸನ್ (Amy Jackson) ಅವರು ಮಗ ಹುಟ್ಟಿದ 6 ವರ್ಷದ ನಂತರ ಬಹುಕಾಲದ ಗೆಳೆಯ ಎಡ್ ವೆಸ್ಟ್‌ವಿಕ್ (Ed Westwick) ಜೊತೆ ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸುಂದರ ಫೋಟೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- Advertisement -
ಇದೀಗ ‘ಪಯಣ ಶುರುವಾಗಿದೆ’ ಅಡಿಬರಹ ನೀಡಿ ಪತಿ ಜೊತೆಗಿನ ಫೋಟೋವನ್ನು ಆ್ಯಮಿ ಹಂಚಿಕೊಂಡಿದ್ದಾರೆ. ಇಬ್ಬರೂ ಬಿಳಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ನವಜೋಡಿಗೆ ಬಾಲಿವುಡ್, ಹಾಲಿವುಡ್ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದಲ್ಲಿ ಬ್ರಿಟೀಷ್ ನಟ: ಬೆಂಗಳೂರಿಗೆ ಬಂದಿಳಿದ ತಾರಾ ದಂಡು
- Advertisement -
View this post on Instagram
- Advertisement -
ಅಂದಹಾಗೆ, ಎಂಗೇಜ್‌ಮೆಂಟ್ ಬಳಿಕ ಜೂನ್‌ನಲ್ಲಿ ನಟಿ ಬ್ಯಾಚುರಲ್ ಪಾರ್ಟಿ ಮಾಡಿದ್ದರು. ಖಾಸಗಿ ಜೆಟ್‌ನಲ್ಲಿ ನಡೆಯ ಪಾರ್ಟಿ ಫೋಟೋಗಳನ್ನು ಆ್ಯಮಿ ಹಂಚಿಕೊಂಡಿದ್ದರು.
- Advertisement -
2019ರಲ್ಲಿ ನಟ ಜಾರ್ಜ್ ಎಂಬುವವರ ಜೊತೆ ಆ್ಯಮಿ ಡೇಟಿಂಗ್ ಮಾಡುತ್ತಿದ್ದರು. 2019ರ ಸೆಪ್ಟೆಂಬರ್‌ನಲ್ಲಿ ಗಂಡು ಮಗುವನ್ನು ಈ ಜೋಡಿ ಸ್ವಾಗತಿಸಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಜಾರ್ಜ್ ಜೊತೆ ನಟಿ ಬ್ರೇಕಪ್ ಮಾಡಿಕೊಂಡರು. ಜಾರ್ಜ್ ಜೊತೆಗಿನ ಅಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದರು. ಬಳಿಕ ಮಾಜಿ ಬಾಯ್ ಫ್ರೆಂಡ್‌ಗೆ ಮಗನ ಜವಾಬ್ದಾರಿಯನ್ನು ಬಿಟ್ಟು ಕೊಡದೇ ತಾವೇ ನೋಡಿಕೊಳ್ತಿದ್ದಾರೆ.
ಇನ್ನೂ ಶಿವರಾಜ್ ಕುಮಾರ್, ಸುದೀಪ್ ನಟನೆಯ `ದಿ ವಿಲನ್’ ಸಿನಿಮಾದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನ ಮಾಡಿದರು.