ರಾಯಚೂರು: ಗ್ರಾಮ ಪಂಚಾಯತಿಯನ್ನು ಸ್ವಚ್ಛತೆ ಕಾಪಾಡಿ ಎಂದು ಎಷ್ಟೇ ಕೇಳಿಕೊಂಡರು ಅಧಿಕಾರಿಗಳು ತಲೆ ಕೆಡಿಸಿಕೊಳ್ಳದ ಹಿನ್ನೆಲೆ ಗ್ರಾಮದ ಜನರೇ ಸ್ಥಳವನ್ನು ಸ್ವಚ್ಛ ಮಾಡುವ ಮೂಲಕ ಪಂಚಾಯ್ತಿಗೆ ಪಾಠ ಕಲಿಸಿದ್ದಾರೆ.
Advertisement
ಜಿಲ್ಲೆಯ ಸಿರವಾರ ತಾಲೂಕಿನ ಚಾಗಭಾವಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಎಷ್ಟೇ ಮನವಿ ಮಾಡಿದರೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕ್ರಮಕೈಗೊಂಡಿರಲಿಲ್ಲ. ಈ ಹಿನ್ನೆಲೆ ಗ್ರಾಮಸ್ಥರೇ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ, ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉನ್ನತ ಶಿಕ್ಷಣ ಸಚಿವರು ನಮಗೆ ಕೊಟ್ಟಿದ್ದು ಸಿಹಿಯಲ್ಲ, ಕಹಿ: ಅತಿಥಿ ಉಪನ್ಯಾಸಕರ ಆಕ್ರೋಶ
Advertisement
Advertisement
ಈ ಮೂಲಕ ಗ್ರಾಮಸ್ಥರು ಪಂಚಾಯ್ತಿಗೆ ಒಂದು ವಾರದ ಗಡುವು ನೀಡಿದ್ದು, ಶಾಲಾ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಒತ್ತಾಯಿಸಿದ್ದಾರೆ. ಬಹುದಿನಗಳಿಂದ ಕಸದಿಂದ ತಿಪ್ಪೆಯಂತಾಗಿದ್ದ ಶಾಲಾ ಆವರಣ ಸ್ವಚ್ಛಗೊಳಿಸುವಂತೆ ಚಾಗಭಾವಿ ಗ್ರಾಮ ಪಂಚಾಯ್ತಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ.
Advertisement
ಹೀಗಾಗಿ ಗ್ರಾಮದ ಯುವಕರು, ಶಿಕ್ಷಣ ಪ್ರೇಮಿಗಳು, ವಿವಿಧ ಸಂಘಟನೆಗಳು ಸೇರಿ ಶಾಲಾ ಆವರಣವನ್ನ ಸ್ವಚ್ಛಗೊಳಿಸಿದ್ದಾರೆ. ಶಾಲೆಗೆ ಅಗತ್ಯವಾದ ಕುಡಿಯುವ ನೀರು, ಶೌಚಾಲಯ ಸೇರಿ ಇತರ ಅಗತ್ಯ ಸೌಕರ್ಯಗಳನ್ನ ಒಂದು ವಾರದಲ್ಲಿ ಕಲ್ಪಿಸದಿದ್ದರೆ ಪಂಚಾಯ್ತಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಜನರಿಗೆ 14 ಕೋಟಿ ರೂ. ವಂಚಿಸಿದ ಆಫೀಸರ್ ಅರೆಸ್ಟ್