ನಶೆಯಲ್ಲಿ ತಮ್ಮನ ಪತ್ನಿಯೊಂದಿಗೆ ಅಣ್ಣನ ಅಸಭ್ಯ ವರ್ತನೆ-ತಮ್ಮನ ಪತ್ನಿಯನ್ನೆ ಅಣ್ಣನ ಜೊತೆ ಮದುವೆ ಮಾಡಿಸಿದ ಗ್ರಾಮಸ್ಥರು

Public TV
1 Min Read
MYS Marriage F

ಮೈಸೂರು: ಕುಡಿದ ಮತ್ತಿನಲ್ಲಿ ತಮ್ಮನ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದಕ್ಕೆ, ಗ್ರಾಮಸ್ಥರು ತಮ್ಮನ ಪತ್ನಿಯನ್ನೆ ಅಣ್ಣನ ಜೊತೆ ಮದುವೆ ಮಾಡಿಸಿರುವ ವಿಚಿತ್ರ ಘಟನೆ ಚನ್ನರಾಯಪಟ್ಟಣದ ಶಿವಪುರದಲ್ಲಿ ನಡೆದಿದೆ.

vlcsnap 2018 02 25 16h44m28s189

ಮೈಸೂರಿನ ಹೆಚ್.ಡಿ.ಕೋಟೆಯ ನಿವಾಸಿ ರಾಜೇಶ್ ಅಸಭ್ಯವಾಗಿ ವರ್ತಿಸಿದ ಅಣ್ಣ. ತಮ್ಮನ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಿಂದ ಡಿಸೆಂಬರ್ ನಲ್ಲಿ ಶಿವಪುರ ಗ್ರಾಮದ ಮುಖಂಡರು ಮದುವೆ ಮಾಡಿಸಿದ್ರು. ಆದ್ರೆ ಮದುವೆಯ ಬಳಿಕ ರಾಜೇಶ್ ತಮ್ಮನ ಪತ್ನಿಯೊಂದಿಗೆ ಸಂಸಾರ ನಡೆಸಲು ನಿರಾಕರಿಸಿದ್ದನು. ಒಂದು ವೇಳೆ ಸಂಸಾರ ನಡೆಸದೇ ಇದ್ದರೆ ಎರಡೂವರೆ ಲಕ್ಷ ರೂ. ದಂಡ ನೀಡಬೇಕು ಎಂದು ಗ್ರಾಮಸ್ಥರು ಒತ್ತಡ ಹಾಕಿದ್ದರು ಎನ್ನಲಾಗಿದೆ.

vlcsnap 2018 02 25 16h44m18s67

ರಾಜೇಶ್ ಈ ಮೊದಲೇ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ. ಶಿವಪುರ ಗ್ರಾಮಸ್ಥರ ಒತ್ತಡದಿಂದಾಗಿ ಡೆತ್ ನೋಟ್ ಬರೆದಿಟ್ಟು ರಾಜೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ರಾಜೇಶ್‍ರನ್ನ ಹೆಚ್.ಡಿ .ಕೋಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ರಾಜೇಶ್ ಪತ್ನಿ ಶಿವಪುರ ಗ್ರಾಮಸ್ಥರ ವಿರುದ್ಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳದಲ್ಲಿಯೂ ರಾಜೇಶ್ ತಮ್ಮನೂ ಸಹ ಇದ್ದು, ತನ್ನ ಅಕ್ರಮ ಸಂಬಂಧವನ್ನು ಮರೆ ಮಾಚಲು ಪತ್ನಿಯನ್ನು ಅಣ್ಣನೊಂದಿಗೆ ಮದುವೆ ಮಾಡಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

vlcsnap 2018 02 25 16h43m47s34

Share This Article
Leave a Comment

Leave a Reply

Your email address will not be published. Required fields are marked *