ಬೀದರ್: ಕಳ್ಳರನ್ನು ಹಿಡಿಯಲು ರಾಜ್ಯದಲ್ಲೇ ಮೊದಲ ಬಾರಿಗೆ ಬಹುಮಾನ ಹಾಗೂ ಸನ್ಮಾನ ಮಾಡುವುದಾಗಿ ಗ್ರಾಮ ಪಂಚಾಯಿತಿಯೊಂದು ಘೋಷಿಸಿದೆ. ದಸರಾ ಸೇರಿದಂತೆ ಪಮುಖ ಹಬ್ಬಗಳು ಬಂದಾಗ ಕಳ್ಳರು ಉದ್ದೇಶ ಪೂರ್ವಕವಾಗಿ ಮಾಡುತ್ತಿರುವ ಕೃತ್ಯ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಿದ್ದೆಗೆಡಿಸಿದೆ. ಹೀಗಾಗಿ ಕಳ್ಳರನ್ನು ಹಿಡಿದು ಕೊಟ್ಟವರಿಗೆ ಬಹುಮಾನ ಹಾಗೂ ಸನ್ಮಾನ ಎಂಬ ವಿಚಿತ್ರ ಘೋಷಣೆ ಮಾಡಿದೆ.
Advertisement
ಒಂದು ಕಡೆ ಕುಡಿಯುವ ನೀರಿನ ಘಟಕದ ಸಂಪರ್ಕಿಸುವ ವಿದ್ಯುತ್ ಸಂಪರ್ಕ ಕಟ್ ಮಾಡಿದ್ದರೆ, ಮೊತ್ತೊಂದೆಡೆ ಪದೇ, ಪದೇ ವಿದ್ಯುತ್ ಸಂಪರ್ಕದ ವೈರ್ ಅನ್ನು ಕಳ್ಳರು ಕಟ್ ಮಾಡಿದ್ದಾರೆ. ರಾಜ್ಯದಲ್ಲೇ ಇದು ವಿಚಿತ್ರ ಘಟನೆಯಾಗಿದ್ದರೂ ಸತ್ಯವಾಗಿದೆ. ಇದನ್ನೂ ಓದಿ: ದೇಶಾದ್ಯಂತ ಹವಾ ಸೃಷ್ಟಿಸಿದ ಸಂಸ್ಕೃತದಲ್ಲಿನ ಕ್ರಿಕೆಟ್ ಕಾಮೆಂಟರಿ- ಪ್ರಧಾನಿ ಮೋದಿ ಭಾರೀ ಮೆಚ್ಚುಗೆ
Advertisement
Advertisement
ಹೌದು, ಬೀದರ್ ತಾಲೂಕಿನ ಚಿಕ್ಕಪೇಟೆ ಗ್ರಾಮಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ವಿದ್ಯುತ್ ವೈರ್‍ನ್ನು ಕಿಡಿಗೇಡಿಗಳು ಉದೇಶಪೂರ್ವಕವಾಗಿ ಪದೇ, ಪದೇ ಕಟ್ ಮಾಡುತ್ತಿದ್ದಾರೆ. ಯಾರೋ ಕಿಡಿಗೇಡಿ ಕಳ್ಳರು ಉದ್ದೇಶ ಪೂರ್ವಕವಾಗಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ವಿದ್ಯುತ್ ವೈರ್ ಕಟ್ ಮಾಡುತ್ತಿರುವುದರಿಂದ ಕೃತಕವಾಗಿ ಗ್ರಾಮದಲ್ಲಿ ನೀರಿನ ಸಮಸ್ಯೆಗೆ ಕಾರಣವಾಗುತ್ತಿದೆ. ಪದೇ ಪದೇ ಈ ರೀತಿ ಕಿಡಿಗೇಡಿಗಳು ಮಾಡುತ್ತಿರುವುದರಿಂದ ಬೇಸತ್ತ ಮರಕಲ್ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಕಳ್ಳರನ್ನು ಹಿಡಿದುಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.
Advertisement
ರಾತ್ರೋರಾತ್ರಿ ವಿದ್ಯುತ್ ವೈರ್ ಕಟ್ ಮಾಡಿ ಕಳ್ಳತನ ಮಾಡುತ್ತಿರುವ ಕಳ್ಳರನ್ನು ಸಾರ್ವಜನರಿಗೆ ಹಿಡಿದು ಕೊಟ್ಟರೆ ಗ್ರಾಮ ಪಂಚಾಯಿತಿಯಿಂದ 1 ಸಾವಿರ ಹಾಗೂ ಗ್ರಾಮಸ್ಥರಿಂದ 2 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಇದೇ ಮೊಲದ ಬಾರಿಗೆ ಕಳ್ಳರನ್ನು ಹಿಡಿಯಲು ಗ್ರಾಪಂ ಹಾಗೂ ಗ್ರಾಮಸ್ಥರು ಬಹುಮಾನ ಘೋಷಣೆ ಮಾಡಿದ ವಿಚಾರ ಭಾರೀ ಸದ್ದು ಮಾಡುತ್ತಿದೆ. ಹಬ್ಬದ ದಿನಗಳಲ್ಲಿ ಯಾರೋ ಕಿಡಿಗೇಡಿಗಳು ಹಲವು ತಿಂಗಳಿಂದ ಪದೇ ಪದೇ ಉದ್ದೇಶ ಪೂರ್ವಕವಾಗಿ ಕಳ್ಳತನ ಮಾಡುತ್ತಿದ್ದಾರೆ. ಹೀಗಾಗಿ ಬೇಸತ್ತು ನಾವು ಸಾರ್ವಜನಿಕರ ಸಹಾಯದಿಂದ ಕಳ್ಳರನ್ನು ಹಿಡಿಯಲು ಬಹುಮಾನ ಹಾಗೂ ಸನ್ಮಾನ ಘೋಷಣೆ ಮಾಡಿದ್ದೇವೆ ಎಂದು ಗ್ರಾಮ ಪಂಚಾಯತಿ ಪಿಡಿಓ ಹೇಳಿದ್ದಾರೆ.
ಕಿಡಿಗೇಡಿ ಕಳ್ಳರು ಕೇವಲ 10 ತಿಂಗಳಲ್ಲಿ ಬರೋಬ್ಬರಿ 6 ರಿಂದ 7 ಬಾರಿ ಕುಡಿಯುವ ನೀರಿನ ವಿದ್ಯುತ್ ಸಂಪರ್ಕದ ವೈರ್ ಅನ್ನು ಕಟ್ ಮಾಡಿದ್ದಾರೆ. ಪ್ರತಿ ಬಾರಿ ವಿದ್ಯೂತ್ ವೈರ್ ಕಟ್ ಮಾಡಿದಾಗ ಅದನ್ನು ದುರಸ್ಥಿ ಮಾಡಲು ಗ್ರಾ.ಪಂ.ಯಿಂದ 15 ರಿಂದ 20 ಸಾವಿರ ಹಣ ಖರ್ಚಾಗುತ್ತಿದೆ. ಜೊತೆಗೆ ಹಬ್ಬದ ದಿನಗಳಲ್ಲಿ ಚಿಕ್ಕಪೇಟೆ ಗ್ರಾಮಕ್ಕೆ ನೀರಿನ ಸಮಸ್ಯೆಯಾಗಿ ಅಧಿಕಾರಿಗಳಿಗೆ ಹಿಡಿಶಾಪ ಹಾಕತ್ತಾರೆ. ಹೀಗಾಗೀ ಕಿಡಿಗೇಡಿ ಕಳ್ಳರಿಂದ ಬೇಸತ್ತ ಗ್ರಾ.ಪಂ. ಅಧಿಕಾರಿಗಳು ಹಾಗೂ ಗ್ರಾಮಸ್ಥರು ಈ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಲೇ ಹಲವು ಬಾರಿ ಬೀದರ್ ಗ್ರಾಮೀಣ ಠಾಣೆ ಹಾಗೂ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲು ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಜೊತೆಗೆ ಅಗ್ಗದ ವೈರ್ ಕಟ್ ಮಾಡಿ ಗ್ರಾಮಸ್ಥರಿಗೆ ತೊಂದರೆ ಕೊಡುತ್ತಾ ಗ್ರಾಪಂಗೆ ಕೆಟ್ಟ ಹೆಸರು ತರಲು ಕಿಡಿಗೇಡಿಗಳು ಈ ರೀತಿ ಮಾಡುತ್ತಿದ್ದಾರೆ.
ಉದ್ದೇಶಪೂರ್ವಕವಾಗಿ ಕಳ್ಳತನ ಮಾಡುವ ವ್ಯಕ್ತಿಗಳನ್ನು ಹುಡುಕಿ ಕೊಟ್ಟವರಿಗೆ ಬಹುಮಾನ, ಸನ್ಮಾನ ಹಾಗೂ ಅಂಥವರ ಹೆಸರನ್ನು ಗೌಪ್ಯವಾಗಿ ಹಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಪಂಯವರು ಒಂದು ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ. ಆದರೆ ನಾವು 2 ಸಾವಿರ ಬಹುಮಾನ ಘೋಷಣೆ ಮಾಡುತ್ತೇವೆ. ರಾಜಕೀಯ ದುರುದ್ದೇಶದಿಂದ ಈ ರೀತಿ ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಇದನ್ನೂ ಓದಿ: ಎಲ್ಲರೂ ಉದ್ಯೋಗದ ಹಿಂದೆ ಓಡುತ್ತಿದ್ದಾರೆ, ಎಷ್ಟು ಜನರಿಗೆ ಉದ್ಯೋಗ ನೀಡಲು ಸಾಧ್ಯ: ಮೋಹನ್ ಭಾಗವತ್ ಪ್ರಶ್ನೆ
ದಸರಾ ಹಬ್ಬ ಸೇರಿದಂತೆ ಪ್ರಮುಖ ಹಬ್ಬಗಳಲ್ಲಿ ಉದ್ದೇಶಪೂರ್ವಕವಾಗಿ ವೈರ್ ಕಟ್ ಮಾಡಿ ಗ್ರಾಮಸ್ಥರನ್ನು ಸಮಸ್ಯೆಗೆ ದುಡುತ್ತಿರುವುದು ಬೇಸರದ ಸಂಗತಿಯಾಗಿದೆ. ಇದಕ್ಕೆ ಬೇಸತ್ತು ಕಳ್ಳರನ್ನ ಹಿಡಿದುಕೊಟ್ಟ ಸಾರ್ವಜನಿಕರಿಗೆ ಗ್ರಾಪಂ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಬಹುಮಾನ ಹಾಗೂ ಸನ್ಮಾನ ಘೋಷಣೆ ಮಾಡಿದ್ದು ಡಿಫರೆಂಟ್ ಐಡಿಯಾವಾಗಿದೆ. ಬಹುಮಾನ ಘೋಷಣೆ ಬೆನ್ನಲ್ಲೆ ಸಾರ್ವಜನಿಕರು ಕಳ್ಳರಿಗಾಗಿ ಬಲೆ ಬಿಸಿ ಸಮಸ್ಯೆಗೆ ಬ್ರೇಕ್ ಹಾಕತ್ತಾರಾ ಎಂದು ನಾವು ನೀವು ಕಾದೂ ನೋಡಬೇಕಿದೆ.