ಉಡುಪಿ: ಉಡುಪಿ (Udupi) ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಏಕೈಕ ಘಟನೆ ಅಲ್ಲ, ಇದು ಏಳೆಂಟು ತಿಂಗಳಿಂದ ನಡೆಯುತ್ತಿದೆ ಎಂಬ ಸಂಶಯ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ (Suresh Nayak) ಅನುಮಾನ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ ಸಂತ್ರಸ್ತರ ಬಾಯಿ ಮುಚ್ಚಿಸುವ ಕೆಲಸ ಪೊಲೀಸರಿಂದ ಆಗಿದೆ. ಹಿಜಾಬ್ (Hijab) ವಿವಾದಕ್ಕಿಂತ ಇದು ಹೇಯ ಕೃತ್ಯ. ಈ ಬಗ್ಗೆ ಪ್ರಶ್ನಿಸುವವರನ್ನು ಧಮನಿಸಲಾಗಿದೆ. ವಿಡಿಯೋ ಎಲ್ಲೆಲ್ಲಿ ಹರಿದಾಡಿದೆ ಎಂಬುದನ್ನು ತನಿಖೆ ಮಾಡಬೇಕು. ಮುಸ್ಲಿಂ ಯುವತಿಯರ ಜೊತೆ ಮುಸ್ಲಿಂ ಯುವಕರು ಒಳಗೊಂಡಿದ್ದಾರೆ. ಇದು ಉಡುಪಿಗೆ ಕಳಂಕ. ಪೊಲೀಸ್ ಇಲಾಖೆಯ ವರ್ತನೆ ಸರಿ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಉಡುಪಿ ವಿಡಿಯೋ ಚಿತ್ರೀಕರಣ ಕೇಸ್ – ವಿದ್ಯಾರ್ಥಿನಿಯರು, ಕಾಲೇಜ್ ವಿರುದ್ಧ ಎಫ್‌ಐಆರ್ ದಾಖಲು
Advertisement
Advertisement
ಬಿಜೆಪಿ (BJP) ಪಕ್ಷ ಶುಕ್ರವಾರ ಉಡುಪಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಿದೆ. ಎಸ್ಪಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಇದು ಕೇರಳ ಸ್ಟೋರಿ ಮಾದರಿಯ ಘಟನೆ. ವಿಶೇಷ ತಂಡ, ಎಸ್‌ಐಟಿ ರಚನೆ ಮಾಡಿ ತನಿಖೆ ಮಾಡಿ. ಉಡುಪಿ ಎಸ್‌ಪಿ ನೇತೃತ್ವದಲ್ಲಿ ತನಿಖೆ ಬೇಡ ಎಂದು ಆಗ್ರಹಿಸಿದರು. ಇದನ್ನೂ ಓದಿ: ಯಾವ ಕೋಮಿನ ಬಗ್ಗೆಯೂ ಹೇಳಿಲ್ಲ, ಅಮಾಯಕರ ಬಿಡುಗಡೆಗೆ ಪ್ರಸ್ತಾಪ: ತನ್ವೀರ್ ಸೇಠ್
Advertisement
ಕಾಂಗ್ರೆಸ್‌ಗೆ (Congress) ಅವರ ಮೇಲೆ ಅಷ್ಟು ಪ್ರೀತಿ ಯಾಕೆ? ಕಾಂಗ್ರೆಸ್‌ನವರು ಅವರ ಮನೆಯ ಮಕ್ಕಳನ್ನು ಶೂಟಿಂಗ್ ಮಾಡಲಿ. ಮೂರು ವಿದ್ಯಾರ್ಥಿನಿಯರನ್ನು ಸಸ್ಪೆಂಡ್ ಮಾಡಿದ್ದು ಯಾಕೆ? ಅದು ಸಾಮಾನ್ಯ ಮೊಬೈಲ್ ಅಲ್ಲ. ಒಂದು ಲಕ್ಷ ಮೌಲ್ಯದ ಮೊಬೈಲ್ ಅದು. ಅವರಿಗೆ ದುಬಾರಿ ಮೊಬೈಲ್ ಕೊಟ್ಟವರು ಯಾರು? ಎಸ್‌ಐಟಿ ಮೂಲಕ ಇದನ್ನು ತನಿಖೆ ಮಾಡಬಹುದು. ರಾಜ್ಯ ಸರ್ಕಾರ ಮಾಡದಿದ್ದರೆ ಕೇಂದ್ರದ ಗಮನ ಸೆಳೆಯುತ್ತೇವೆ. ಇದು ತಮಾಷೆಗೆ ಆದ ಘಟನೆ ಅಲ್ಲ. ಏಳೆಂಟು ತಿಂಗಳಿಂದ ಈ ರೀತಿ ಆಗುತ್ತಿದೆ. ಇದು ಗಂಭೀರ ವಿಚಾರವಾಗಿದ್ದು, ವಿದ್ಯಾರ್ಥಿನಿಯರು ಭಯ ಪಡುತ್ತಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ತನ್ವಿರ್ ಸೇಠ್ ಪತ್ರ ಬರೆದಿರುವುದು ನನಗೆ ಗೊತ್ತಿಲ್ಲ: ಪರಮೇಶ್ವರ್
Advertisement
ಈ ಘಟನೆಯ ಹಿಂದೆ ಯಾವ ಶಕ್ತಿ ಇದೆ ಎಂದು ತನಿಖೆ ಆಗಬೇಕು. ರಾಜ್ಯ ಸರ್ಕಾರ ಪ್ರಕರಣ ಹಳ್ಳಹಿಡಿಸುವ ಪ್ರಯತ್ನ ಮಾಡುತ್ತಿದೆ. ಬೆಂಗಳೂರು (Bengaluru) ಭಯೋತ್ಪಾದಕರಿಗೆ (Terrorists) ಗೃಹ ಸಚಿವರು ಯಾವ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಗೊತ್ತು. ಗೃಹ ಸಚಿವರು ಈ ಪ್ರಕರಣದಲ್ಲಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದಾರೆ. ಪರಮೇಶ್ವರ್ (G.Parameshwara) ಹೇಳುವಷ್ಟು ಸಣ್ಣ ವಿಚಾರ ಇದಲ್ಲ. ಅವರಲ್ಲಿ ಇದಕ್ಕಿಂತ ದೊಡ್ಡ ವಿಚಾರಗಳಿರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರ ಮುಸ್ಲಿಂ ಓಲೈಕೆಗೆ ಸಂವಿಧಾನಬಾಹಿರವಾಗಿ ವರ್ತಿಸಿದ್ರೆ ಪರಿಣಾಮ ನೆಟ್ಟಗಿರಲ್ಲ: ಸುನೀಲ್ ಕುಮಾರ್
ಬಳಿಕ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna), ಘಟನೆ ನಡೆದು ಒಂದು ವಾರದ ಬಳಿಕ ಪ್ರಕರಣ ಸಂಬಂಧ ಎಫ್‌ಐಆರ್ (FIR) ದಾಖಲಾಗಿದೆ. ವಿದ್ಯಾರ್ಥಿಗಳ ಎಲ್ಲಾ ಮೊಬೈಲ್ ವಶಕ್ಕೆ ಪಡೆದುಕೊಳ್ಳಬೇಕು. ಡಿಲೀಟ್ ಮಾಡಿದ ಫೋಟೋ ವಿಡಿಯೋಗಳನ್ನು ರಿಕವರ್ ಮಾಡಬೇಕು. ಹೈದರಾಬಾದ್‌ನಲ್ಲಿ ಇದಕ್ಕೆ ಸಂಬಂಧಪಟ್ಟ ಲ್ಯಾಬ್ ಇದೆ. ಮಹಿಳಾ ಆಯೋಗದ ಸೂಚನೆ ಮೇರೆಗೆ ಸೆಕ್ಷನ್ ಹಾಕಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ದೆಹಲಿ ಮೆಟ್ರೋದಲ್ಲಿ 2 ಮದ್ಯದ ಬಾಟಲಿ ಕೊಂಡ್ಯೊಯಲು ಅಬಕಾರಿ ಇಲಾಖೆಯ ಆಕ್ಷೇಪ
ರಾಜ್ಯ ಮತ್ತು ಕೇಂದ್ರ ಜಂಟಿಯಾಗಿ ತನಿಖೆ ಮಾಡಬೇಕು. ಕಾಲೇಜಿನ 10 ದಿನದ ಸಿಸಿಟಿವಿ ಫೂಟೇಜ್ ಪಡೆದುಕೊಳ್ಳಬೇಕು. ಸೈಬರ್ ಕ್ರೈಂ ಬಗ್ಗೆ ಕಾಲೇಜಿನಲ್ಲಿ ಪೊಲೀಸರು ಮಾಹಿತಿ ನೀಡಿದ್ದು ಯಾಕೆ? ಬಹಳ ಮಾಹಿತಿ ಲಭ್ಯವಾಗುತ್ತಿದೆ. ಮನೆಯಿಂದಲೂ ಮಾಹಿತಿ ಪಡೆಯುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ
Web Stories