ಚಿಕ್ಕಬಳ್ಳಾಪುರ: ಅದು ಸರ್ಕಾರಿ ಕಚೇರಿ ಅದ್ರಲ್ಲೂ ಎಸಿ ಕಚೇರಿ (AC Office), ಎಸಿ ಸೇರಿದಂತೆ ಅಧಿಕಾರಿ ಸಿಬ್ಬಂದಿ ಎಂದಿನಂತೆ ತಮ್ಮ ಕರ್ತವ್ಯಕ್ಕೆ ಹಾಜರಾಗಿ ತಮ್ಮ ಚೇರ್ ಗಳಲ್ಲಿ ಕೂತು ಬೆಳ್ಳಂಬೆಳಗ್ಗೆ ತಮ್ಮ ಕೆಲಸ ಕಾರ್ಯ ನಿರ್ವಹಿಸುತ್ತಿದ್ರು… ಆದ್ರೆ ಆ ಕಚೇರಿಗೆ ಬಂದ 10 ಮಂದಿ ಎಸಿ ಕೂತಿದ್ದ ಚೇರ್ ಸೇರಿದಂತೆ ಅಧಿಕಾರಿ ಸಿಬ್ಬಂದಿ ಕೂತಿದ್ದ ಚೇರ್‌ಗಳನ್ನೇ ಹೊತ್ತೊಯಿದ್ದರು… ಅಂದಹಾಗೆ ಇಂತಹ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ (Chikkaballapura) ಎಸಿ ಕಚೇರಿಯಲ್ಲಿ.
ಯಾಕೆ ಅಂದ್ರೆ 2011 ರಲ್ಲಿ ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಾದ ಡಿವಿಜಿ ರಸ್ತೆಯನ್ನ ಅಗಲೀಕರಣ ಮಾಡಲಾಗಿತ್ತು. ಹಾಗಾಗಿ ಅಂದು ನೂರಾರು ಮಂದಿ ಮುಖ್ಯರಸ್ತೆಯಲ್ಲಿದ್ದ ಅಂಗಡಿಗಳನ್ನ ಜಾಗಗಳನ್ನ ಕಳೆದುಕೊಂಡಿದ್ರು. ಆದ್ರೆ ಸರ್ಕಾರ ಅಂದು ಭೂ ಸ್ವಾಧೀನ ಮಾಡಿಕೊಂಡ ಜಾಗಕ್ಕೆ ಅಡಿಗೆ 240 ರೂ. ಪರಿಹಾರ ನೀಡಿ ಕೈತೊಳೆದುಕೊಂಡಿತ್ತು. ಆದ್ರೆ ಈ ಪರಿಹಾರದ ಹಣ ನಮಗೆ ಸಾಕಾಗಲ್ಲ ಅಂತ ನೂರಾರು ಮಂದಿ ನ್ಯಾಯಾಲಯದ ಮೆಟ್ಟಿಲೇರಿದ್ರು. ಈಗ ನ್ಯಾಯಾಲಯ ಅಂದು ನೀಡಿದ್ದ 240 ರೂ. ಬದಲು ಅಡಿಗೆ 890 ರೂ. ಪರಿಹಾರ ನೀಡುವಂತೆ ಎಸಿಯವರಿಗೆ ಆದೇಶ ಮಾಡಿತ್ತು. ಆದ್ರೆ ಆದೇಶ ನೀಡಿ 2 ತಿಂಗಳು ಕಳೆದಿದ್ದರೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಆದೇಶದ ಮೇರೆಗೆ ಎಸಿ ಕಚೇರಿ ಪಿಠೋಪಕರಣ ಜಪ್ತಿ ಮಾಡಲಾಯಿತು. ಇದನ್ನೂ ಓದಿ: ಅಮೆರಿಕದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಬದ್ಧ, 15,000 ಉದ್ಯೋಗ ಸೃಷ್ಟಿ ಗುರಿ: ಅದಾನಿ
ಇನ್ನೂ ಎಸಿ ಕಚೇರಿಗೆ ಆಗಮಿಸಿದ ನ್ಯಾಯಾಲಯದ ದಾವೆ ಹೂಡಿದ್ದ ಶ್ರೀನಿವಾಸ್ ರೆಡ್ಡಿ, ಸತೀಶ್ ಬಾಬು, ನರಸಿಂಹನಾಯಡು, ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಕೂಲಿಯಾಳುಗಳ ಸಮೇತ ಆಗಮಿಸಿ ಎಸಿ ಕಚೇರಿಯಲ್ಲಿ ಕೈಗೆ ಸಿಕ್ಕ ಸಿಕ್ಕ ಚೇರ್, ಟೇಬಲ್ ಕಂಪ್ಯೂಟರ್ ಸೇರಿದಂತೆ ಪಿಠೋಪಕರಣಗಳನ್ನ ಎತ್ತೊಯ್ದರು, ಇದ್ರಿಂದ ಇರುಸು ಮುರಾಸಾದ ಎಸಿ ಅಶ್ವಿನ್ ಕೂರಲು ಚೇರ್ ಇಲ್ಲದೆ ಪ್ರತ್ಯೇಕ ಕೊಠಡಿ ಸೇರಿದ್ರೆ ಇತ್ತ ಅಧಿಕಾರಿ ಸಿಬ್ಬಂದಿ ನಿಂತಲ್ಲೇ ನಿಲ್ಲುವಂತಾಯಿತು. ಇದನ್ನೂ ಓದಿ: ಉದ್ಧವ್ ಠಾಕ್ರೆ ಬ್ಯಾಗ್ ಗದ್ದಲದ ನಡುವೆ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಹೆಲಿಕಾಪ್ಟರ್ ತಪಾಸಣೆ
ಇನ್ನೂ ಎರಡು ತಿಂಗಳ ಹಿಂದೆಯೇ ನ್ಯಾಯಾಲಯ ಆದೇಶ ಮಾಡಿದ್ರೂ ಎಸಿಯವರು ಪರಿಹಾರ ನೀಡಿಲ್ಲ, ಹೀಗಾಗಿ ಪಿಠೋಪಕರಣ ಜಪ್ತಿ ಮಾಡಲಾಗಿದ್ರೆ ಕೊನೆಗೆ ಮತ್ತೆ ಎಸಿಯವರು ಎರಡು ತಿಂಗಳು ಕಾಲಾವಕಾಶ ಗಡುವು ನೀಡುವಂತೆ ಮನವಿ ಮಾಡಿಕೊಂಡಿರೋದ್ರಿಂದ ಪುನಃ ಚೇರ್ ಹಾಗೂ ಪಿಠೋಪಕರಣ ವಾಪಾಸ್ ನೀಡಲಾಗಿದೆ. ಜಾಗ ಕಳೆದುಕೊಂಡವರು ಪರಿಹಾರಕ್ಕಾಗಿ ಎಸಿ ಕಚೇರಿ ಪಿಠೋಪಕರಣಗಳು ಸೇರಿದಂತೆ ಸ್ವತಃ ಎಸಿಯವರ ಚೇರನ್ನೇ ಹೊತ್ತೊಯ್ದದ್ದರಿಂದ ಸಾರ್ವಜನಿಕರ ಎದುರು ಸ್ವತಃ ಎಸಿ ಹಾಗೂ ಸರ್ಕಾರಿ ಅಧಿಕಾರಿಗಳು ಮುಜುಗರಕ್ಕೊಳಗಾಗಿ ನಗೆಪಾಟೀಲಿಗೀಡಾದರು.
ಇನ್ನೂ ಈ ಪ್ರಕರಣ ಈಗಾಗಲೇ ಹೈಕೋರ್ಟ್ ಮೆಟ್ಟೇಲೇರಿದ್ದು ಮುಂದಾಗಿದ್ದು ಮುಂದೆನಾಗಲಿದೆಯೋ ಕಾದು ನೋಡಬೇಕಿದೆ. ಇದನ್ನೂ ಓದಿ: 5 ಕೋಟಿಗೆ ಮಾಜಿ ಸಿಎಂ ದಿ.ಎಸ್ ನಿಜಲಿಂಗಪ್ಪ ಮನೆ ಖರೀದಿಸಿದ ಸರ್ಕಾರ