ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಸಂಕಷ್ಟ ಎದುರಾಗಿದೆ. ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ನೀಡುವ ಪರಿಹಾರ ಕಡಿತ ಮಾಡಿದ್ದು, ಕಂದಾಯ ಇಲಾಖೆ ಸೂಕ್ತ ದಾಖಲೆ ಕೊರತೆ ಎಂದು ಪರಿಹಾರ ನಿರಾಕರಿಸಿದೆ.
ಈ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಸಾಕಷ್ಟು ಅನಾಹುತ ತಂದೊಡ್ಡಿತ್ತು. ನದಿ ಪ್ರವಾಹ, ಭೂ ಕುಸಿತ, ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಸಾವಿರಾರು ಕುಟುಂಬಗಳು ಬೀದಿಗೆ ಬರುವಂತಾಗಿತ್ತು. ಮಳೆಯ ಅಬ್ಬರಕ್ಕೆ ಅಂಕೋಲಾದ ಶಿರೂರಿನಲ್ಲಿ ಭೂ ಕುಸಿತದಿಂದ ಮೃತರಾದ ಇಬ್ಬರ ಶವ ಈವರೆಗೂ ದೊರೆತಿಲ್ಲ. ಗಂಗಾವಳಿ ನದಿ ಪ್ರವಾಹಕ್ಕೆ 25ಕ್ಕೂ ಹೆಚ್ಚು ಗ್ರಾಮಗಳು ನೀರು ತುಂಬಿ ಹಾನಿಯಾಗಿದ್ದವು. ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದರು. ಆದರೆ ಗಂಗಾವಳಿ ನದಿಪಾತ್ರದ ಬಿಳೆಹೊಂಗೆ, ಬೆಳಂಬರ ಸೇರಿದಂತೆ ಹಲವು ಗ್ರಾಮದ ಪ್ರವಾಹ ಸಂತ್ರಸ್ತರ ಮನೆಗೆ ನೀರು ನುಗ್ಗಿದ ಫೋಟೋ ಕಾಪಿ ಇಲ್ಲ. ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿಲ್ಲ ಎಂಬ ನೆಪವೊಡ್ಡಿ ಪರಿಹಾರದ ಹಣವನ್ನು ನೀಡಲು ನಿರಾಕರಿಸಿದ್ದು, ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಆಪರೇಷನ್‌ಗೆ ದರ್ಶನ್ ಹಿಂದೇಟು- 10 ದಿನ ಮುಂದುವರಿಯುತ್ತೆ ಕನ್ಸರ್ವೇಟಿವ್ ಚಿಕಿತ್ಸೆ
ಜಿಲ್ಲೆಯಲ್ಲಿ ಅಂಕೋಲಾದ (Ankola) 90ಕ್ಕೂ ಹೆಚ್ಚು ಕುಟುಂಬಗಳಿಗೆ ಪರಿಹಾರ ಹಣ ನಿರಾಕರಿಸಿ ಅರ್ಜಿ ನೀಡಿದವರಿಗೆ ಕಂದಾಯ ಇಲಾಖೆ ಹಿಂಬರಹ ನೀಡಿದೆ. ಉಳಿದಂತೆ ಇತರೆ ತಾಲೂಕಿನಲ್ಲಿ ಪರಿಹಾರ ವಿತರಿಸಲಾಗಿದೆ. ಪ್ರವಾಹ ಬಂದಾಗ ಗ್ರಾಮ ಆಡಳಿತಾಧಿಕಾರಿ, ಪಿಡಿಓ ಮೂಲಕ ವರದಿ ಪಡೆದು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ (SDRF) ನಿಯಮಾವಳಿ ಪ್ರಕಾರ 48 ತಾಸುಗಳು ನೀರು ನಿಂತ ಮನೆಗಳಿಗೆ 5,000 ರೂ. ಪರಿಹಾರ ನೀಡಲಾಗುತ್ತದೆ. ಹಲವು ಭಾಗದಲ್ಲಿ ನೀರು ನಿಂತ ದಾಖಲೆಗಳಿದ್ದರೂ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿಲ್ಲ ಎಂದು ತಿರಸ್ಕರಿಸಲಾಗುತ್ತಿದೆ. ಇದನ್ನೂ ಓದಿ: ಶಾರುಖ್ ಖಾನ್‌ಗೆ ಬೆದರಿಕೆ: ಕೃತ್ಯದ ಹಿಂದೆ ನಟನ ವಿರುದ್ಧ ದೂರು ನೀಡಿದ್ದ ವಕೀಲನ ಫೋನ್!
ರಾಜ್ಯ ಸರ್ಕಾರ ಪ್ರವಾಹ (Flood) ಸಂತ್ರಸ್ತರಿಗೆ ನೀಡುವ ಹಣವನ್ನೂ ಸಹ ಮೊಟಕುಗೊಳಿಸಿದೆ. ಈ ಹಿಂದೆ ಮನೆ ಹಾನಿಗೆ 5 ಲಕ್ಷ ರೂ. ಇದ್ದರೆ, ಮನೆಗಳಿಗೆ ನೀರು ನುಗ್ಗಿದರೇ 10,000 ಪರಿಹಾರ ನೀಡುತ್ತಿತ್ತು. ಇದೀಗ ಮನೆ ಹಾನಿಗೆ 1.20 ಲಕ್ಷ ರೂ., ವಸತಿ ಯೋಜನೆಯಡಿ ಮನೆ ಹಾಗೂ ಮನೆಗೆ ನೀರು ನುಗ್ಗಿದರೆ 5,000 ರೂ. ಪರಿಹಾರ ನೀಡುತ್ತಿದೆ. ಈ ಮೂಲಕ ಸರ್ಕಾರ ಪರಿಹಾರ ಹಣಕ್ಕೂ ಕತ್ತರಿ ಹಾಕಿದೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್‌ಗೆ ರಷ್ಯಾ ಅಧ್ಯಕ್ಷ ಪುಟಿನ್ ವಿಶ್ – ಮಾತುಕತೆಗೆ ಸಿದ್ಧ ಎಂದ ನಾಯಕರು