ದಾವಣಗೆರೆ: ಜು.21 ಹಾಗೂ 22 ರಂದು ವೀರಶೈವ ಪೀಠಾಚಾರ್ಯರ ಶೃಂಗ ಸಭೆ ದಾವಣಗೆರೆಯಲ್ಲಿ (Davanagere) ಆಯೋಜನೆಯಾಗಿದೆ. ಈ ಸಭೆಯಲ್ಲಿ 40 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಪಂಚ ಪೀಠಾಚಾರ್ಯರರು (Pancha Peeta) ಸೇರಲಿದ್ದಾರೆ.
1967ರಲ್ಲಿ ಮುಕ್ತಿ ಮಂದಿರದಲ್ಲಿ ಕೂಡಿದ್ದ ಪಂಚಪೀಠಗಳ ಶ್ರೀಗಳು ಮತ್ತೆ ನಗರದ ರೇಣುಕಾಮಂದಿರದಲ್ಲಿ ಒಂದಾಗಲಿದ್ದಾರೆ. ಸಮ್ಮೇಳನ, ಸಂಸ್ಕøತಿ ಸಂವರ್ಧನೆಗಾಗಿ ಪಂಚ ಪೀಠಾಚಾರ್ಯರ ಪಾದಯಾತ್ರೆ ನಡೆಸಲಿದ್ದಾರೆ. ರಂಭಾಪುರಿ ಪೀಠ, ಉಜ್ಜೈನಿ ಪೀಠ, ಕೇದಾರಪೀಠ, ಕಾಶಿ ಪೀಠ, ಶ್ರೀ ಶೈಲ ಪೀಠದ ಶ್ರೀಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೇಶದೆಲ್ಲೆಡೆಯಿಂದ 500ಕ್ಕೂ ಅಧಿಕ ಮಠಾಧೀಶರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ – ಜಾರಕಿಹೊಳಿ ಬ್ರದರ್ಸ್ ಸೋಲಿಸಲು ಪಕ್ಷಾತೀತವಾಗಿ ಒಂದಾದ ಲಿಂಗಾಯತ ನಾಯಕರು
ರಾಜ್ಯದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುನ್ನುಡಿ ಬರೆಯಲು ವೀರಶೈವ ಲಿಂಗಾಯತ (Veerashaiva Lingayat) ಸಮುದಾಯ ಮುಂದಾಗಿದೆ. ಜಾತಿ ಸಮೀಕ್ಷೆ ವಿಚಾರದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಾತಿ ಗಣತಿ ವೇಳೆ ವೀರಶೈವ ಲಿಂಗಾಯತ ಎಂದು ಬರೆಸುವಂತೆ ಜಾಗೃತಿ ಮೂಡಿಸಲು ವೀರಶೈವ ಲಿಂಗಾಯತ ಮಹಾಸಭಾ ಮುಂದಾಗಿದೆ.
ಪಂಚಪೀಠದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಶೃಂಗ ಸಮ್ಮೇಳನ ನಡೆಯಲಿದ್ದು, ಪೀಠಾಚಾರ್ಯರು ಹಾಗೂ ಶಿವಾಚಾರ್ಯರನ್ನು ಒಂದೆಡೆ ಸೇರಿಸಿ ಜಾಗೃತಿ ಮೂಡಿಸಲಿದ್ದಾರೆ. ರಾಜ್ಯಾದ್ಯಂತ ಶೃಂಗ ಸಭೆ ಕುತೂಹಲ ಹೆಚ್ಚಿಸಿದೆ.
25 ಸಾವಿರಕ್ಕೂ ಅಧಿಕ ಜನ ಭಾಗಿಯಾಗಲಿದ್ದಾರೆ. ಊಟ, ವಾಸ್ತವ್ಯ, ಲಿಂಗಪೂಜೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಕೊಪ್ಪಳ | ಮಾಜಿ ಶಾಸಕ ದಡೇಸೂಗುರು ಕಾರಿಗೆ ಕಲ್ಲೆಸೆದ ಕಿಡಿಗೇಡಿಗಳು