ದಿ ವ್ಯಾಕ್ಸಿನ್ ವಾರ್ : ಉಚಿತ ಟಿಕೆಟ್ ಘೋಷಣೆ ಮಾಡಿದ ಟೀಮ್

Public TV
2 Min Read
the vaccine wa

ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನ ಮಾಡಿರುವ ದಿ ವ್ಯಾಕ್ಸಿನ್ ವಾರ್ (The Vaccine War) ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಬಾಕ್ಸ್ ಆಫೀಸಿನಲ್ಲಿ (Box Office) ಈ ಸಲವೂ ನಿರ್ದೇಶಕ ವಿವೇಕ್ ಭರ್ಜರಿ ಬ್ಯಾಟಿಂಗ್ ಮಾಡಲಿದ್ದಾರೆ ಎನ್ನುವ ನಿರೀಕ್ಷೆಯೂ ಇತ್ತು. ಸಾಲು ಸಾಲು ರಜೆಗಳು ಕೂಡ ಬಂದಿದ್ದರಿಂದ ಕೋಟಿ ಕೋಟಿ ಕಲೆಕ್ಷನ್ ಹರಿದು ಬರಲಿದೆ ಎಂದು ನಂಬಲಾಗಿತ್ತು. ಆದರೆ, ಈ ನಂಬಿಕೆಯೆಲ್ಲ ಹುಸಿಯಾಗಿದೆ.

Vaccine War 1

ಸಿನಿ ಪಂಡಿತರ ಲೆಕ್ಕಾಚಾರದಂತೆ ಮೊದಲ ದಿನದ ಕಲೆಕ್ಷನ್ (Collection) 1.30 ಕೋಟಿ ರೂಪಾಯಿ ಮಾಡಿತ್ತು. ಎರಡನೇ ದಿನದಿಂದ ಕಲೆಕ್ಷನ್ ಏರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಆ ಮ್ಯಾಜಿಕ್ ನಡೆದಿಲ್ಲ. ಮೂರು ದಿನದ ಒಟ್ಟು ಕಲೆಕ್ಷನ್ 3.25 ಕೋಟಿಯಷ್ಟು ಕಲೆಕ್ಷನ್ ಆಗಿದೆ. ರವಿವಾರ ಮತ್ತು ಸೋಮವಾರ ರಜೆ ಇರುವುದರಿಂದ ಈ ದಿನದಂದು ಒಂದು ಟಿಕೆಟ್ ಕೊಂಡರೆ ಮತ್ತೊಂದು ಟಿಕೆಟ್ ಉಚಿತ ಎಂದು ಚಿತ್ರತಂಡ ಘೋಷಣೆ ಮಾಡಿದೆ.

the vaccine war

ದಿ ಕಾಶ್ಮೀರ್ ಫೈಲ್ಸ್ ಮೊದಲ ಚಿತ್ರದ ಕಲೆಕ್ಷನ್ 3.55 ಕೋಟಿ ರೂಪಾಯಿ ಆಗಿತ್ತು. ಈ ಸಿನಿಮಾಗೆ ದಿ ವ್ಯಾಕ್ಸಿನ್ ವಾರ್ ಹೋಲಿಸಿದರೆ ಗಳಿಕೆಯಲ್ಲಿ ತೀರಾ ಕಡಿಮೆ ಅನಿಸುತ್ತದೆ. ದಿ ಕಾಶ್ಮೀರ್ ಫೈಲ್ಸ್ ಒಟ್ಟಾರೆ ಗಳಿಕೆ 250 ಕೋಟಿ ರೂಪಾಯಿ ದಾಟಿತ್ತು. ದಿ ವ್ಯಾಕ್ಸಿನ್ ವಾರ್ ಎಷ್ಟು ಗಳಿಸುತ್ತದೆ ಎನ್ನುವ ಕುತೂಹಲ ಮೂಡಿದೆ.

Vaccine War 2

ದಿ ಕಾಶ್ಮೀರ್ ಫೈಲ್ಸ್ ನಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾಗಿ ಕಥೆ ಹೇಳಿದ್ದ ನಿರ್ದೇಶಕರು ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಕ್ಯೂರಿಯಾಸಿಟಿ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರವೂ ಸಿಕ್ಕಿದೆ.

 

ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ವಿವೇಕ್ ಅಗ್ನಿಹೋತ್ರಿ, ಕೋವಿಡ್‍ ದಿನಗಳ ಕಥೆ ಸಿನಿಮಾದಲ್ಲಿದೆ ಎಂದು ಹೇಳಲಾಗುತ್ತಿದ್ದು, ವ್ಯಾಕ್ಸಿನ್ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಅಲ್ಲದೇ, ನೂರಕ್ಕೂ ನೂರರಷ್ಟು ಸತ್ಯ ಘಟನೆಗಳನ್ನೇ ಆಧರಿಸಿ ತಯಾರಾದ ಚಿತ್ರವೆಂದಿದ್ದಾರೆ ಅಗ್ನಿಹೋತ್ರಿ. ಅಷ್ಟೂ ಕಥೆಯಲ್ಲಿ ನೈಜ ಘಟನೆಗಳನ್ನೇ ಆಧರಿಸಿ ಚಿತ್ರಕಥೆ ಹೆಣೆಲಾಗಿದೆ ಎನ್ನುವುದು ನಿರ್ದೇಶಕರ ಮಾತು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article