ದಿ ಕಾಶ್ಮೀರ್ ಫೈಲ್ಸ್ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನಿನ್ನೆಯಷ್ಟೇ ರಿಲೀಸ್ ಆಗಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ನಿರೀಕ್ಷೆ ಮಾಡಿದಷ್ಟು ಪ್ರತಿಕ್ರಿಯೆ ಸಿಕ್ಕಿಲ್ಲ. ಹಾಗಾಗಿ ಸಿನಿ ಪಂಡಿತರ ಲೆಕ್ಕಾಚಾರದಂತೆ ಒಂದು ದಿನದ ಕಲೆಕ್ಷನ್ (Collection) 1.30 ಕೋಟಿ ರೂಪಾಯಿ ಮಾಡಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುತ್ತದಾ ಕಾದು ನೋಡಬೇಕಿದೆ.
ದಿ ಕಾಶ್ಮೀರ್ ಫೈಲ್ಸ್ ಮೊದಲ ಚಿತ್ರದ ಕಲೆಕ್ಷನ್ 3.55 ಕೋಟಿ ರೂಪಾಯಿ ಆಗಿತ್ತು. ಈ ಸಿನಿಮಾಗೆ ದಿ ವ್ಯಾಕ್ಸಿನ್ ವಾರ್ ಹೋಲಿಸಿದರೆ ಗಳಿಕೆಯಲ್ಲಿ ತೀರಾ ಕಡಿಮೆ ಅನಿಸುತ್ತದೆ. ದಿ ಕಾಶ್ಮೀರ್ ಫೈಲ್ಸ್ ಒಟ್ಟಾರೆ ಗಳಿಕೆ 250 ಕೋಟಿ ರೂಪಾಯಿ ದಾಟಿತ್ತು. ದಿ ವ್ಯಾಕ್ಸಿನ್ ವಾರ್ ಎಷ್ಟು ಗಳಿಸುತ್ತದೆ ಎನ್ನುವ ಕುತೂಹಲ ಮೂಡಿದೆ.
ನೈಜ ಘಟನೆ ಆಧರಿಸಿದ ಸಿನಿಮಾ
ದಿ ಕಾಶ್ಮೀರ್ ಫೈಲ್ಸ್ ನಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾಗಿ ಕಥೆ ಹೇಳಿದ್ದ ನಿರ್ದೇಶಕರು ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಕ್ಯೂರಿಯಾಟಿಸಿ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರವೂ ಸಿಕ್ಕಿದೆ.
ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ವಿವೇಕ್ ಅಗ್ನಿಹೋತ್ರಿ, ಕೋವಿಡ್ ದಿನಗಳ ಕಥೆ ಸಿನಿಮಾದಲ್ಲಿದೆ ಎಂದು ಹೇಳಲಾಗುತ್ತಿದ್ದು, ವ್ಯಾಕ್ಸಿನ್ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಅಲ್ಲದೇ, ನೂರಕ್ಕೂ ನೂರರಷ್ಟು ಸತ್ಯ ಘಟನೆಗಳನ್ನೇ ಆಧರಿಸಿ ತಯಾರಾದ ಚಿತ್ರವೆಂದಿದ್ದಾರೆ ಅಗ್ನಿಹೋತ್ರಿ. ಅಷ್ಟೂ ಕಥೆಯಲ್ಲಿ ನೈಜ ಘಟನೆಗಳನ್ನೇ ಆಧರಿಸಿ ಚಿತ್ರಕಥೆ ಹೆಣೆಲಾಗಿದೆ ಎನ್ನುವುದು ನಿರ್ದೇಶಕರ ಮಾತು.
ಮೊನ್ನೆಯಷ್ಟೇ ತಮ್ಮ ಹೊಸ ಸಿನಿಮಾ ‘ದಿ ವ್ಯಾಕ್ಸಿನ್ ವಾರ್’ (The Vaccine War) ಅನ್ನು ಕನ್ನಡದ ಸಿಲೆಬ್ರಿಟಿಗಳಿಗೆ ಪ್ರದರ್ಶನ ಏರ್ಪಡಿಸಿದ್ದರು ವಿವೇಕ್ ಅಗ್ನಿಹೋತ್ರಿ. ಈ ಸಂದರ್ಭದಲ್ಲಿ ಸಹಜವಾಗಿಯೇ ಅವರಿಗೊಂದು ಪ್ರಶ್ನೆ ತೂರಿ ಬಂತು. ನೀವು ವಿವಾದಕ್ಕಾಗಿ (Controversy) ಸಿನಿಮಾ ಮಾಡುತ್ತೀರಿ ಎಂದು ಪ್ರಶ್ನೆ ಮುಂದಿಡಲಾಗಿತ್ತು.
ಈ ಪ್ರಶ್ನೆಗೆ ಉತ್ತರಿಸಿದ ವಿವೇಕ್ ಅಗ್ನಿಹೋತ್ರಿ. ‘ನಾನು ವಿವಾದಕ್ಕಾಗಿ ಸಿನಿಮಾ ಮಾಡುವುದಿಲ್ಲ. ಹಾಗೆ ಮಾಡುವುದೇ ಆಗಿದ್ದರೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಪಾರ್ಟ್ 2 ಮಾಡುತ್ತಿದ್ದೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಸಿನಿಮಾ ಮಾಡುವೆ. ಅದನ್ನು ವಿವಾದ ಮಾಡಲಾಗುತ್ತಿದೆ. ನನ್ನ ಉದ್ದೇಶ ನಿಜ ಸಂಗತಿಯನ್ನು ಹೇಳುವುದು ಅಷ್ಟೇ ಆಗಿದೆ’ ಎಂದರು.
Web Stories