ಬಾಕ್ಸ್ ಆಫೀಸಿನಲ್ಲಿ ಕುಂಟುತ್ತಾ ಸಾಗುತ್ತಿದ್ದ ‘ದಿ ವ್ಯಾಕ್ಸಿನ್ ವಾರ್ ‘ ಸಿನಿಮಾದ ಕಲೆಕ್ಷನ್ ರವಿವಾರ ದಿಢೀರ್ ನೆ ಏರಿಕೆಯಾಗಿದೆ. ರವಿವಾರವಷ್ಟೇ 2.20 ಕೋಟಿ ರೂಪಾಯಿ ಮೊತ್ತ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ ಎಂದು ಅಂದಾಜಿಸಲಾಗಿದೆ. ಅಲ್ಲಿಗೆ ದಿ ವ್ಯಾಕ್ಸಿನ್ ವಾರ್ ಸಿನಿಮಾ ಒಟ್ಟು 5.70 ಕೋಟಿ ರೂಪಾಯಿಗೆ ಈವರೆಗೂ ಗಳಿಕೆ ಮಾಡಿದೆ.
ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನ ಮಾಡಿರುವ ದಿ ವ್ಯಾಕ್ಸಿನ್ ವಾರ್ (The Vaccine War) ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಬಾಕ್ಸ್ ಆಫೀಸಿನಲ್ಲಿ (Box Office) ಈ ಸಲವೂ ನಿರ್ದೇಶಕ ವಿವೇಕ್ ಭರ್ಜರಿ ಬ್ಯಾಟಿಂಗ್ ಮಾಡಲಿದ್ದಾರೆ ಎನ್ನುವ ನಿರೀಕ್ಷೆಯೂ ಇತ್ತು. ಸಾಲು ಸಾಲು ರಜೆಗಳು ಕೂಡ ಬಂದಿದ್ದರಿಂದ ಕೋಟಿ ಕೋಟಿ ಕಲೆಕ್ಷನ್ ಹರಿದು ಬರಲಿದೆ ಎಂದು ನಂಬಲಾಗಿತ್ತು. ಆದರೆ, ಈ ನಂಬಿಕೆಯೆಲ್ಲ ಹುಸಿಯಾಗಿತ್ತು.
ಸಿನಿ ಪಂಡಿತರ ಲೆಕ್ಕಾಚಾರದಂತೆ ಮೊದಲ ದಿನದ ಕಲೆಕ್ಷನ್ (Collection) 1.30 ಕೋಟಿ ರೂಪಾಯಿ ಮಾಡಿತ್ತು. ಎರಡನೇ ದಿನದಿಂದ ಕಲೆಕ್ಷನ್ ಏರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಆ ಮ್ಯಾಜಿಕ್ ನಡೆದಿಲ್ಲ. ಮೂರು ದಿನದ ಒಟ್ಟು ಕಲೆಕ್ಷನ್ 3.25 ಕೋಟಿಯಷ್ಟು ಕಲೆಕ್ಷನ್ ಆಗಿದೆ. ರವಿವಾರ ಮತ್ತು ಸೋಮವಾರ ರಜೆ ಇರುವುದರಿಂದ ಈ ದಿನದಂದು ಒಂದು ಟಿಕೆಟ್ ಕೊಂಡರೆ ಮತ್ತೊಂದು ಟಿಕೆಟ್ ಉಚಿತ ಎಂದು ಚಿತ್ರತಂಡ ಘೋಷಣೆ ಮಾಡಿತ್ತು. ಈ ಘೋಷಣೆಯೇ ಕೆಲಸ ಮಾಡಿದೆ. ಇದನ್ನೂ ಓದಿ:ಸಂಯುಕ್ತಾ ಬಟ್ಟೆಗೆ ನೆಗೆಟಿವ್ ಕಾಮೆಂಟ್ಸ್, ತಿರುಗೇಟು ನೀಡಿದ ಕಿಶನ್ ಬಿಳಗಲಿ
ದಿ ಕಾಶ್ಮೀರ್ ಫೈಲ್ಸ್ ಮೊದಲ ಚಿತ್ರದ ಕಲೆಕ್ಷನ್ 3.55 ಕೋಟಿ ರೂಪಾಯಿ ಆಗಿತ್ತು. ಈ ಸಿನಿಮಾಗೆ ದಿ ವ್ಯಾಕ್ಸಿನ್ ವಾರ್ ಹೋಲಿಸಿದರೆ ಗಳಿಕೆಯಲ್ಲಿ ತೀರಾ ಕಡಿಮೆ ಅನಿಸುತ್ತದೆ. ದಿ ಕಾಶ್ಮೀರ್ ಫೈಲ್ಸ್ ಒಟ್ಟಾರೆ ಗಳಿಕೆ 250 ಕೋಟಿ ರೂಪಾಯಿ ದಾಟಿತ್ತು. ದಿ ವ್ಯಾಕ್ಸಿನ್ ವಾರ್ ಎಷ್ಟು ಗಳಿಸುತ್ತದೆ ಎನ್ನುವ ಕುತೂಹಲ ಮೂಡಿದೆ.
ದಿ ಕಾಶ್ಮೀರ್ ಫೈಲ್ಸ್ ನಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾಗಿ ಕಥೆ ಹೇಳಿದ್ದ ನಿರ್ದೇಶಕರು ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಕ್ಯೂರಿಯಾಸಿಟಿ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರವೂ ಸಿಕ್ಕಿದೆ. ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ವಿವೇಕ್ ಅಗ್ನಿಹೋತ್ರಿ, ಕೋವಿಡ್ ದಿನಗಳ ಕಥೆ ಸಿನಿಮಾದಲ್ಲಿದೆ ಎಂದು ಹೇಳಲಾಗುತ್ತಿದ್ದು, ವ್ಯಾಕ್ಸಿನ್ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಅಲ್ಲದೇ, ನೂರಕ್ಕೂ ನೂರರಷ್ಟು ಸತ್ಯ ಘಟನೆಗಳನ್ನೇ ಆಧರಿಸಿ ತಯಾರಾದ ಚಿತ್ರವೆಂದಿದ್ದಾರೆ ಅಗ್ನಿಹೋತ್ರಿ. ಅಷ್ಟೂ ಕಥೆಯಲ್ಲಿ ನೈಜ ಘಟನೆಗಳನ್ನೇ ಆಧರಿಸಿ ಚಿತ್ರಕಥೆ ಹೆಣೆಲಾಗಿದೆ ಎನ್ನುವುದು ನಿರ್ದೇಶಕರ ಮಾತು.
Web Stories