ಬಾಗ್ದಾದ್: ಅಮೆರಿಕ ಏರ್ ಸ್ಟ್ರೈಕ್ ನಡೆಸಿ ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸೀಂ ಸುಲೈಮನಿಯನ್ನು ಶುಕ್ರವಾರ ಕೊಲೆಗೈದಿತ್ತು. ಈ ದಾಳಿಯ ಬಳಿಕ ಇಡೀ ವಿಶ್ವವೇ ಬೆಚ್ಚಿ ಬಿದ್ದಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ದಾಳಿಗೆ ಅಮೆರಿಕ ಸೇನೆ ಬಳಿಸಿದ ಮಾನವ ರಹಿತ ಡ್ರೋನ್ ವಿಶ್ವದ ಗಮನ ಸೆಳೆದಿದೆ.
ಅಮೆರಿಕ ಸೇನೆ ತನ್ನ ವಿರೋಧಿಗಳ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ ಎಂಕ್ಯೂ-9 ಹೆಸರಿನ ರೀಪರ್ ಡ್ರೋನ್ ಬಳಕೆ ಮಾಡುತ್ತದೆ. ಇದು ಪ್ರಿಡೇಟರ್ ಡ್ರೋನ್ ಎಂದೇ ಖ್ಯಾತವಾಗಿದ್ದು, ಪ್ರಿಡೇಟರ್ ಎಂದರೇ ಬೇಟೆಗಾರ ಎಂಬರ್ಥವನ್ನು ಹೊಂದಿದೆ. ಎದುರಾಳಿನ ನೆಲದಲ್ಲಿ ಗೂಢಾಚಾರ ಮತ್ತು ನಿಖರ ದಾಳಿ ನಡೆಸುವ 2 ಸಾಮರ್ಥ್ಯಗಳನ್ನು ಹೊಂದಿರುವುದು ಎಂಕ್ಯೂ-9 ಡ್ರೋನ್‍ನ ವಿಶೇಷತೆಯಾಗಿದೆ.
Advertisement
Advertisement
ಎಂಕ್ಯೂ-9 ರೀಪರ್ ಡ್ರೋನ್ ನಲ್ಲಿ ‘ಎಂ’ ಅಕ್ಷರ ಅಮೆರಿಕ ರಕ್ಷಣಾ ಪಡೆಗಳ ಬಹುಪಾತ್ರವನ್ನು(Multi Role)ಪ್ರತಿನಿಧಿಸಿದರೆ, ‘ಕ್ಯೂ’ ಅಕ್ಷರವೂ ಮಾನವ ರಹಿತ ಹಾಗೂ 9 ಸಂಖ್ಯೆಯೂ ಈ ಮಾದರಿಯ ಡ್ರೋನ್ ವಿಮಾನಗಳ 9ನೇ ಸರಣಿಯನ್ನು ಪ್ರತಿನಿಧಿಸುತ್ತದೆ. ಎಂಕ್ಯೂ-9 ರೀಪರ್ ಡ್ರೋನ್ ಸುಧಾರಿತ ಕ್ಯಾಮೆರಾ ಮತ್ತು ಕ್ಷಿಪಣಿಗಳನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನವನು ಹೊಂದಿರುವ ಡ್ರೋನ್ ನಿರ್ಧಿಷ್ಟ ಗುರಿಯನ್ನು ತಲುಪಲು ವಿಷ್ಯುವಲ್ ಸೆನ್ಸರ್ ಹೊಂದಿದೆ. ದೂರದಲ್ಲಿದ್ದುಕೊಂಡೇ ಇಬ್ಬರ (ಒಬ್ಬರು ಪೈಲಟ್, ಸೆನ್ಸರ್ ಆಪರೇಟರ್) ಮೂಲಕ ಈ ಡ್ರೋನ್ ನಿಯಂತ್ರಿಸಬಹುದಾಗಿದೆ. ಇದನ್ನು ಓದಿ: ದೆಹಲಿ ದಾಳಿಗೆ ನೆರವು ನೀಡಿದ್ದ ಸುಲೈಮನಿಯನ್ನು ಹತ್ಯೆ ಮಾಡಿದ್ದೇವೆ – ಡೊನಾಲ್ಡ್ ಟ್ರಂಪ್
Advertisement
ಡ್ರೋನ್ ವಿಶೇಷತೆಗಳು: ಎಂಕ್ಯೂ-9 ರೀಪರ್ ಡ್ರೋನ್ 2,200 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಟೇಕ್ ಆಫ್ ವೇಳೆ ಗರಿಷ್ಠ 4,760 ಕೆಜಿ ತೂಕ ಆಗಿದ್ದು, 1,701 ಕೆಜಿ ತೂಕ ಶಸ್ತ್ರಾಸ್ತ್ರಗಳನ್ನು ಒತ್ತು ಸಾಗುವ ಸಾಮರ್ಥ್ಯವನ್ನು ಹೊಂದಿದೆ. ಭೂಮಿಯಿಂದ 50 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, 1,150 ಮೈಲಿ (1,850 ಕಿ.ಮೀ) ದೂರದ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಡ್ರೋನ್ 66 ಅಡಿ ಅಗಲ, 36 ಅಡಿ ಉದ್ದ ಹಾಗೂ 12.5 ಅಡಿ ಎತ್ತರವನ್ನು ಹೊಂದಿದೆ.
Advertisement
ಜನರಲ್ ಆಟೋವಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್ ಐಎನ್‍ಸಿ ಸಂಸ್ಥೆಯೂ ಎಂಕ್ಯೂ-9 ರೀಪರ್ ಡ್ರೋನ್‍ಗಳನ್ನು ಉತ್ಪಾದಿಸುತ್ತಿದೆ. ಒಂದು ಡ್ರೋನ್ ಯ್ಯೂನಿಟ್‍ಗೆ 2016 ರಂತೆ 64.2 ಮಿಲಿಯನ್ ಡಾಲರ್(ಅಂದಾಜು 460.70 ಕೋಟಿ) ವೆಚ್ಚವಾಗಲಿದ್ದು, ಒಂದು ಯ್ಯೂನಿಟ್ ಏರ್ ಕ್ರಾಫ್ಟ್ ಹಾಗೂ ಸೆನ್ಸರ್ ಗಳನ್ನು ಹೊಂದಿರುತ್ತದೆ. ಇದನ್ನು ಓದಿ: ಅಮೆರಿಕದಿಂದ ಏರ್ ಸ್ಟ್ರೈಕ್ – ಕಚ್ಚಾ ತೈಲ ಬೆಲೆ ಏರಿಕೆ
ಎಂಕ್ಯೂ-9 ರೀಪರ್ ಡ್ರೋನ್ ಮೂಲಕ ಲೇಸರ್ ಗೈಡೆಡ್ ಕ್ಷಿಪಣಿಗಳನ್ನು ಉಡಾಯಿಸಬಹುದಾಗಿದೆ. ಈ ಕ್ಷಿಪಣಿಗಳು ನಿಖರ ಹಾಗೂ ಕಡಿಮೆ ಹಾನಿಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಗಂಟೆಗೆ 400 ಕಿಮೀ ವೇಗದಲ್ಲಿ ಹಾರುವ ಹಾಗೂ ಸತತ 27 ಗಂಟೆ ಹಾರಬಲ್ಲದು. ಅಮೆರಿಕ ನೌಕಾ ಪಡೆಯಲ್ಲಿ ಎಂಕ್ಯೂ-9 ರೀಪರ್ ಡ್ರೋನ್ ಗಳನ್ನು ಬಳಕೆ ಮಾಡಲಾಗುತ್ತಿದೆ. ವಿಶ್ವದ ಅತಿಹೆಚ್ಚು ಶಕ್ತಿಶಾಲಿ ಡ್ರೋನ್‍ಗಳಲ್ಲಿ ಎಂಕ್ಯೂ-9 ಸ್ಥಾನ ಪಡೆದಿದೆ.