ಅಬುಧಾಬಿ: ಪವಿತ್ರ ಕುರಾನ್ (Quran) ಬೋಧನೆಗೆ ಪರವಾನಗಿ ಪಡೆಯದ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳನ್ನು ಯುಎಇ (UAE) ನಿಷೇಧಿಸಿದೆ. ಅಧಿಕಾರಿಗಳಿಂದ ಅಗತ್ಯ ಪರವಾನಗಿಯನ್ನು ಪಡೆಯದ ಹೊರತು ಯಾವುದೇ ಕೇಂದ್ರವನ್ನು ಸ್ಥಾಪಿಸುವುದು, ನಿರ್ವಹಿಸುವುದು ಅಥವಾ ಕುರಾನ್ ಬೋಧಿಸುವುದನ್ನು ನಿಷೇಧಿಸಲಾಗಿದೆ.
ಇಸ್ಲಾಮಿಕ್ ವ್ಯವಹಾರಗಳು, ದತ್ತಿಗಳು ಮತ್ತು ಝಕಾತ್‍ನ ಜನರಲ್ ಪ್ರಾಧಿಕಾರ (The General Authority for Islamic Affairs, Endowments, and Zakat) ಯುಎಇ ನಾಗರಿಕರು ಮತ್ತು ನಿವಾಸಿಗಳಿಗೆ ಜೂನ್ 2 ರಂದು ಈ ಬಗ್ಗೆ ಸಲಹೆ ನೀಡಿದೆ. ಸಲಹೆಯಲ್ಲಿ ಕುರಾನ್-ಬೋಧನಾ ಸೇವೆಗಳನ್ನು ನೀಡುವ ಪರವಾನಗಿರಹಿತ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳಿಂದ ಉಂಟಾಗುವ ಅಪಾಯಗಳನ್ನು ಒತ್ತಿ ಹೇಳಿದೆ. ಯುವ ಪೀಳಿಗೆಯನ್ನು ರಕ್ಷಿಸಲು ಧಾರ್ಮಿಕ ಶಿಕ್ಷಣದ ನಿಖರತೆ ಮತ್ತು ಸೂಕ್ತತೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಇಸ್ಲಾಮಿಕ್ ವ್ಯವಹಾರಗಳ ಸಂಸ್ಥೆ ಹೇಳಿದೆ.
Advertisement
Advertisement
ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳ ಮೂಲಕ ಖುರಾನ್ ಬೋಧನಾ ಸೇವೆಗಳನ್ನು ನೀಡುತ್ತಿರುವ ಅನೇಕ ವ್ಯಕ್ತಿಗಳು ಅನರ್ಹರಾಗಿದ್ದಾರೆ. ಅವರು ಧಾರ್ಮಿಕ ಶಿಕ್ಷಣದ ಅರ್ಹತೆ ಹೊಂದಿರುವುದಿಲ್ಲ. ಇದು ತಪ್ಪಾದ ಬೋಧನೆ, ಪವಿತ್ರ ಪುಸ್ತಕದ ತಪ್ಪಾದ ವ್ಯಾಖ್ಯಾನ, ಇಸ್ಲಾಮಿಕ್ ಬೋಧನೆಗಳು ಮತ್ತು ತತ್ವಗಳ ಬಗ್ಗೆ ಸಂಭಾವ್ಯ ತಪ್ಪುಗ್ರಹಿಕೆಗೆ ಕಾರಣವಾಗಬಹುದು ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಅಲ್ಲದೇ ಪ್ರಾಧಿಕಾರವು ಅನೇಕ ಪರವಾನಗಿ ಪಡೆಯದ ಜನರು ತರಗತಿಗಳನ್ನು ತೆಗೆದುಕೊಳ್ಳುವುದನ್ನು ಮೇಲ್ವಿಚಾರಣೆ ಮಾಡಿದೆ. ಪ್ರಚಾರದ ಜಾಹೀರಾತುಗಳೊಂದಿಗೆ ಜನರನ್ನು ಆಮಿಷವೊಡ್ಡುತ್ತದೆ. ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಪ್ರಾಧಿಕಾರ ಹೇಳಿದೆ.
Advertisement
Advertisement
ಅನರ್ಹರು ಧಾರ್ಮಿಕ ಶಿಕ್ಷಣ ನೀಡುವುದನ್ನು ತಡೆಯಲು ಅನುಮಾನಾಸ್ಪದ ಅಥವಾ ಪರವಾನಗಿ ಇಲ್ಲದ ಬೋಧನಾ ಚಟುವಟಿಕೆಗಳ ಬಗ್ಗೆ ಮಾಹಿತಿ ಸಿಕ್ಕರೆ ಅಧಿಕಾರಿಗಳಿಗೆ ವರದಿ ಮಾಡಲು ತಿಳಿಸಲಾಗಿದೆ.
ಕಾನೂನಿನ (UAE law) ಪ್ರಕಾರ, ಪರವಾನಗಿಯನ್ನು ಪಡೆಯದೆ ಕುರಾನ್‍ನ್ನು ಬೋಧಿಸುವುದು ಕಂಡು ಬಂದಲ್ಲಿ, ಎರಡು ತಿಂಗಳಿಗಿಂತ ಕಡಿಮೆಯಿಲ್ಲದ ಅವಧಿಯವರೆಗೆ ಜೈಲು ಶಿಕ್ಷೆ ಮತ್ತು 50,000 ಡಿಹೆಚ್‍ಗಿಂತ ಹೆಚ್ಚಿನ ದಂಡವನ್ನು ಅಥವಾ ಈ ಎರಡರಲ್ಲಿ ಒಂದು ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಯಾರು ಕುರಾನ್ ಕಲಿಸಬಹುದು?
ಕುರಾನ್ ಬೋಧಕನ ವಯಸ್ಸು 21 ವರ್ಷಕ್ಕಿಂತ ಕಡಿಮೆಯಿರಬಾರದು. ಆತನಿಗೆ ಒಳ್ಳೆಯ ನಡತೆ ಇರಬೇಕು. ಯಾವುದೇ ಅಪರಾಧ ಕೃತ್ಯ ಮಾಡಿರಬಾರದು, ಶಿಕ್ಷೆಗೆ ಗುರಿಯಾಗಿರಬಾರದು. ಆರೋಗ್ಯದ ಫಿಟ್ನೆಸ್‍ನ್ನು ನೀಡಬೇಕು. ಅಗತ್ಯ ಅನುಭವ, ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದಲ್ಲಿ ಉತ್ತೀರ್ಣರಾಗಿರಬೇಕು. ಸಮರ್ಥ ಅಧಿಕಾರಿಗಳ ಅನುಮೋದನೆಯನ್ನು ಪಡೆಯಬೇಕು.
ಕುರಾನ್ ಕಲಿಸುವ ಉದ್ದೇಶಕ್ಕಾಗಿ ಕೇಂದ್ರ ಸ್ಥಾಪನೆಗೆ, ಕಾನೂನಿನ ಪ್ರಕಾರ ಪರವಾನಗಿ ಪಡೆಯಬೇಕು. ಕಟ್ಟಡವು ಕಾನೂನಿನ ಕಾರ್ಯನಿರ್ವಾಹಕ ನಿಯಮಗಳು ನಿರ್ದಿಷ್ಟಪಡಿಸಿದ ತಾಂತ್ರಿಕ ಮತ್ತು ಆರೋಗ್ಯ ಅಗತ್ಯತೆಗಳನ್ನು ಹೊಂದಿರಬೇಕು. ಸಂಪೂರ್ಣವಾಗಿ ಪ್ರತ್ಯೇಕವಾದ ಲಿಂಗ ತರಗತಿಗಳನ್ನು ಸ್ಥಾಪಿಸಬೇಕು. ಈ ಕಾನೂನಿನ ಕಾರ್ಯನಿರ್ವಾಹಕ ನಿಯಮಗಳಿಂದ ನಿರ್ದಿಷ್ಟಪಡಿಸಿದ ಚಟುವಟಿಕೆಗಳನ್ನು ಅಭ್ಯಾಸ ಮಾಡಲು ಸಭಾಂಗಣಗಳಿರಬೇಕು.