– ಹಾವೇರಿ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆ ಸ್ಪಷ್ಟನೆ
– ಜೀವ ಭಯವಿದ್ದರೂ ಮನೆ ಬಳಿ ಪೊಲೀಸರನ್ನ ನಿಯೋಜಿಸಿಲ್ಲ ಎಂದು ಆರೋಪ
ಕಾರವಾರ: ಹಾನಗಲ್ (Hanagal) ಗ್ಯಾಂಗ್ ರೇಪ್ (Gang Rape) ಪ್ರಕರಣಕ್ಕೆ ಇದೀಗ ಟ್ಟಿಸ್ಟ್ ಸಿಕ್ಕಿದ್ದು, ಬಿಜೆಪಿಗರು (BJP) ಸಂತ್ರಸ್ತೆಯನ್ನು ಭೇಟಿಯಾಗಲು ಬರುತ್ತಿದ್ದಂತೆ ಆಕೆಯನ್ನು ಹಾವೇರಿ (Haveri) ಪೊಲೀಸರು ಶಿರಸಿ ನಿವಾಸಕ್ಕೆ ಕರೆತಂದು ಬಿಟ್ಟಿದ್ದಾರೆ.
Advertisement
ಇನ್ನು ಇದೇ ಮೊದಲಬಾರಿಗೆ ಮಾತನಾಡಿದ ಸಂತ್ರಸ್ತೆ (Victim), ಅತ್ಯಾಚಾರ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು. ನನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದವರಲ್ಲಿ ಇಬ್ಬರು ಈ ಪ್ರಕರಣದಲ್ಲಿ ಇಲ್ಲದವರು. ಪೊಲೀಸರು ಬೇರೆಯವರನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂಬುದು ಹಲವು ನಾಯಕರ ಒತ್ತಾಸೆ: ಶೆಟ್ಟರ್
Advertisement
Advertisement
ಪೊಲೀಸರು ಇಬ್ಬರ ಫೋಟೋ ತೋರಿಸಿದ್ದರು. ಆ ಇಬ್ಬರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಲ್ಲ. ಆರು ಮಂದಿ ಬಂಧಿಸಿದವರಲ್ಲಿ ಇಬ್ಬರು ಈ ಪ್ರಕರಣದಲ್ಲಿ ಇಲ್ಲದವರು. ವಿಡಿಯೋದಲ್ಲಿ ಇದ್ದವರು ಆ ಇಬ್ಬರಲ್ಲ. ಸ್ಥಳ ಪರಿಶೀಲನೆ ಎಂದು ಹೇಳಿ ಇದೀಗ ಮನೆಗೆ ತಂದು ಬಿಟ್ಟಿದ್ದಾರೆ. ನನ್ನ ಕುಟುಂಬಸ್ಥರಿಗೂ ಮಾಹಿತಿ ನೀಡದೇ ಮನೆಗೆ ಬಿಟ್ಟು ಹೋಗಿದ್ದಾರೆ. ಜೀವ ಭಯವಿದ್ದರೂ ಪೊಲೀಸರನ್ನು ಮನೆ ಬಳಿ ನಿಯೋಜಿಸಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಾಸಾಶನಕ್ಕಾಗಿ 5 ಕಿ.ಮೀ. ದೂರ ತೆವಳಿಕೊಂಡೇ ಬಂದ ವೃದ್ಧೆ; ಸರ್ಕಾರಕ್ಕೆ ಹೆಚ್‍ಡಿಕೆ ತರಾಟೆ
Advertisement