ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಬೃಂದಾವನದಲ್ಲಿ ಮಳೆ-ಗಾಳಿಗೆ ಮರ ಉರುಳಿಬಿದ್ದ ಪರಿಣಾಮ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೇರಳ ಮೂಲದ ವಿನೋದ್, ಹಿಲರ್ ಮತ್ತು ತಮಿಳುನಾಡು ಮೂಲದ ರಾಜಶೇಖರ್ ಮೃತ ದುರ್ದೈವಿಗಳು. ಬಿರುಗಾಳಿಗೆ ಮೂವತ್ತಕ್ಕೂ ಹೆಚ್ಚು ಮರಗಳು ಉಳಿಬಿದ್ದಿವೆ. ಮಂಗಳವಾರ ರಾತ್ರಿ ಸುಮಾರು ಏಳೂವರೆ ಸುಮಾರಿಗೆ ವಿಶ್ವವಿಖ್ಯಾತ ಕೆಆರ್‍ಎಸ್ ಬೃಂದಾವನ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಬೃಂದಾವನದ ಎಂಡಿಎಫ್ ಮತ್ತು ಬೋಟಿಂಗ್ ಪಾಯಿಂಟ್ ಬಳಿ ಎರಡು ಮರಗಳು ಉರುಳಿಬಿದ್ದಿವೆ.
ಮರದ ಕೆಳಗೆ ನಾಲ್ವರು ಸಿಲುಕಿಕೊಂಡಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ತಕ್ಷಣ ಮರದಡಿ ಸಿಲುಕಿದವರನ್ನು ರಕ್ಷಿಸುವ ಯತ್ನ ನಡೆದಿದೆ. ಆದ್ರೆ ಅವರಲ್ಲಿ ಮೂವರು ಪ್ರವಾಸಿಗರು ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಉಳಿದ ಓರ್ವನಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆಆರ್‍ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.