ಬೆಂಗಳೂರು: ಶುಕ್ರವಾರ ಸುರಿದ ಧಾರಾಕಾರ ಮಳೆ ಹಿನ್ನಲೆಯಲ್ಲಿ ಕಾರಿನ ಮೇಲೆ ಮರ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ನಗರದ ಮಿನರ್ವ ಸರ್ಕಲ್ ನಲ್ಲಿ ನಡೆದಿದೆ.
ಹೋಂ ಗಾರ್ಡ್ ಆಗಿದ್ದ ಭಾರತಿ ಕಾರು ಕೆಟ್ಟೋಗಿದೆ ಎಂದು ಹೋಗಿದ್ದರು. ಭಾರತಿಯವರಿಗೆ ಕ್ಯಾನ್ಸರ್ ಇತ್ತು ಹಾಗೂ ಅವರು ಕ್ಯಾನ್ಸರ್ ಗೆದ್ದು ಬಂದಿದ್ದರು. ರಾಚೇನಹಳ್ಳಿಯ ಕೆರೆ ಬಳಿ ಹೋಂ ಗಾರ್ಡ್ ಡ್ಯೂಟಿ ಮಾಡುತ್ತಿದ್ದರು. ಮೂಲತಃ ತುಮಕೂರಿನವರಾಗಿರುವ ಇವರು ಹತ್ತು ವರ್ಷಗಳಿಂದ ಇಲ್ಲೇ ವಾಸಿಸುತ್ತಿದ್ದರು.
ನನ್ನ ಸೊಸೆ ಕಾರು ರಿಪೇರಿಗೆ ಬಿಟ್ಟಿದ್ದರು. ಆ ಸಂದರ್ಭದಲ್ಲಿ ಈ ಘಟನೆ ನಡೆದು ಹೋಗಿದೆ. ಮೊದಲನೇ ಮಗ ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿದ್ದಾನೆ. ಎರಡನೇ ಮಗ ಸುಂಕದಕಟ್ಟೆಯಲ್ಲಿ ಓದುತ್ತಿದ್ದಾನೆ. ನಮ್ಮವರ ಸಾವಿಗೆ ಬಿಬಿಎಂಪಿಯವರೇ ಕಾರಣ. ಐದು ಲಕ್ಷ ರೂ. ಕೊಟ್ಟು ಕೈ ತೊಳೆದುಕೊಂಡರೆ ಹೇಗೆ? ಬಿಬಿಎಂಪಿ ಮೊದಲೇ ಮರಗಳ ಬಗ್ಗೆ ಗಮನ ಕೊಡಬೇಕಿತ್ತು. ಕುಟುಂಬದ ಉದ್ಧಾರಕ್ಕಾಗಿ ಹೋಂ ಗಾರ್ಡ್ ಕೆಲಸ ಮಾಡುತ್ತಿದ್ದರು. ಸರ್ಕಾರ ದೊಡ್ಡ ಮಗನಿಗೆ ಸರ್ಕಾರಿ ಕೆಲಸ ಕೊಡಬೇಕು ಮತ್ತು ಚಿಕ್ಕ ಮಗನಿಗೆ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಮೃತರ ಸಂಬಂಧಿ ರಾಧಾ ಹೇಳಿದ್ರು.