IndependenceDay: ಭಾಗ-3: ಕರ್ನಾಟಕ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರು ದುರಂತ ಸ್ಮರಣೀಯ

Public TV
4 Min Read
Thumbnail 2

ಕ್ವಿಟ್‌ ಇಂಡಿಯಾ ಚಳವಳಿ (1942): ಬ್ರಿಟಿಷ್ ಸರ್ಕಾರವು ಭಾರತೀಯ ನಾಯಕರೊಂದಿಗೆ ಸಂಧಾನಕ್ಕಾಗಿ ಕಳುಹಿಸಿದ್ದ ಸ್ಟಾಫರ್ಡ್ ಕ್ರಿಪ್ಸ್ ಆಯೋಗವು 1942ರಲ್ಲಿ ಕೆಲವು ಸಲಹೆಗಳನ್ನು ಭಾರತೀಯರ ಮುಂದಿಟ್ಟಿತು. ಈ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡುವುದು, ಅದಕ್ಕಾಗಿ ಸಂವಿಧಾನ ರಚಿಸಲು ಸಭೆ ಕರೆಯುವುದು, ಹೊಸ ಸಂವಿಧಾನದಲ್ಲಿ ಭಾರತ ಒಕ್ಕೂಟವನ್ನು ಸೇರುವ ಅಥವಾ ಬಿಡುವ ಸ್ವಾತಂತ್ರ್ಯವನ್ನು ಸಂಬಂಧಿಸಿದ ರಾಜ್ಯಗಳಿಗೆ ಬಿಡುವಂತಹ ಸಲಹೆಗಳನ್ನು ನೀಡಿತು. ಈ ಸಲಹೆಗಳನ್ನು ಕಾಂಗ್ರೆಸ್‌ ಒಪ್ಪದೆ ಕ್ವಿಟ್‌ ಇಂಡಿಯಾ ಚಳವಳಿಗೆ ಕರೆ ನೀಡಿತು. ಸಲಹೆಗಳನ್ನು ಕಾಂಗ್ರೆಸ್ ಒಪ್ಪದೆ ‘ಭಾರತ ಬಿಟ್ಟು ತೊಲಗಿ’ ಎನ್ನುವುದು ಕ್ವಿಟ್ ಇಂಡಿಯಾ ಚಳವಳಿಯ ಆಶಯವಾಗಿತ್ತು. 

Independence Day 10

ಈಸೂರು ದುರಂತ-1942: 

ಈಸೂರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕುಮುದಿನಿ ನದಿಯ ದಂಡೆಯ ಮೇಲಿರುವ ಒಂದು ಚಿಕ್ಕ ಗ್ರಾಮ. ಈ ಗ್ರಾಮವು ಭಾರತದಲ್ಲೇ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಮೊದಲ ಗ್ರಾಮವಾಯಿತು. ಈ ಗ್ರಾಮದ ಜನರು ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದರು. ಚಲೇಜಾವ್‌ ಚಳವಳಿಯಿಂದ ಪ್ರಭಾವಿತರಾದ ಈ ಗ್ರಾಮದ ಯುವಕರೆಲ್ಲರೂ ಗಾಂಧೀ ಟೋಪಿ ಧರಿಸಿ ರಾಷ್ಟ್ರಧ್ವಜ ಹಿಡಿದು ಸಭೆಗಳನ್ನ ನಡೆಸುತ್ತಿದ್ದರು. 1942ರ ಸೆಪ್ಟೆಂಬರ್‌ 25ರಂದು ಈ ಗ್ರಾಮದ ಜನರು ತಮ್ಮ ಗ್ರಾಮವು ಸ್ವತಂತ್ರವೆಂದು ಘೋಷಿಸಿ ವೀರಭದ್ರನ ದೇವಾಲಯದ ಮೇಲೆ ರಾಷ್ಟ್ರಧ್ವಜ ಹಾರಿಸಿದರು. ಪಟೇಲ ಮತ್ತು ಶಾನುಭೋಗರ ದಫ್ತರುಗಳನ್ನು ಕಿತ್ತುಕೊಂಡು ಸುಟ್ಟು ಹಾಕಿದರು. ಈ ಘಟನೆ ಘಟಿಸಿದ 3 ದಿನಗಳ ತರುವಾಯ ಒಬ್ಬ ಅಮಲ್ದಾರ್‌ ಮತ್ತು ಒಬ್ಬ ಪೊಲೀಸ್‌ ಅಧಿಕಾರಿಯು ಪೊಲೀಸರೊಂದಿಗೆ ಬಂದು ಪ್ರತಿಭಟನೆ ನಡೆಸಿದ ಗ್ರಾಮಸ್ಥರ ಮೇಲೆ ಗುಂಡು ಹಾರಿಸಿ 3 ಜನ ಗ್ರಾಮಸ್ಥರನ್ನು ಕೊಂದು ಹಾಕಿದರು. 

Independence Day 14

ಈ ಘಟನೆಯಿಂದ ಕ್ರೋಧಗೊಂಡ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ದಂಗೆಯೆದ್ದರು. ಈ ಗಲಭೆಯಲ್ಲಿ ಪೊಲೀಸ್‌ ಅಧಿಕಾರಿಗಳೂ ಮರಣ ಹೊಂದಿದರು. ಈ ಸುದ್ದಿ ತಿಳಿದ ತಕ್ಷಣ ಸರ್ಕಾರವು ಈಸೂರು ಗ್ರಾಮಕ್ಕೆ ಸೈನ್ಯ ಮತ್ತು ಪೊಲೀಸ್‌ ಪಡೆಯನ್ನ ಕಳಿಸಿತು. ಈ ಸೈನ್ಯವು ಮುಗ್ಧ ಜನರ ಮೇಲೆ ಚಿತ್ರಹಿಂಸೆಯನ್ನು ಕೈಗೊಂಡಿತು. ಗುಂಡು ಹಾರಿಸಿ 41 ಜನರನ್ನು ಬಂಧಿಸಿತು. ದಂಗೆಗೆ ಕಾರಣರಾದವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಹೂಡಿತು. 1943ರ ಜನವರಿ 9 ರಂದು ಅಂದು ರಾಜ್ಯವಾಗಿದ್ದ ಮೈಸೂರು ಉಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಗುರಪ್ಪ, ಮಲ್ಲಪ್ಪ, ಹಾಲಪ್ಪ, ಸೂರ್ಯನಾರಾಯಣಾಚಾರ್ಯ ಮತ್ತು ಶಂಕರಪ್ಪ ಎಂಬ 5 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಸಿದ್ಧಮ್ಮ, ಹಾಲಮ್ಮ ಮತ್ತು ಪಾರ್ವತಮ್ಮ ಎಂಬ ಐದು ಜನರಿಗೆ ಜೀವಾವಧಿ ಗಡಿಪಾರು ಶಿಕ್ಷೆ ನೀಡಿತು. 1946ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಮೂವರು ಮಹಿಳೆಯರನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರು ದುರಂತವು ಸ್ಮರಣೀಯವಾದುದಾಗಿದೆ. 

ಭಾರತದ ವಿಭಜನೆ: 

ಸ್ವಾತಂತ್ರ್ಯ ಚಳವಳಿಯ ಉದ್ದಕ್ಕೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಖಂಡ ರಾಷ್ಟ್ರದ ಕಲ್ಪನೆ ಹೊಂದಿತ್ತು. ಆದರೆ ಮಹಮ್ಮದ್‌ ಅಲಿ ಜಿನ್ನಾ ಅವರು ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮಂಡಿಸುತ್ತಲೇ ಇದ್ದರು. 1940ರಲ್ಲಿ ನಡೆದ ಮುಸ್ಲಿಂ ಲೀಗ್‌ನ ಲಾಹೋರ್ ಅಧಿವೇಶನದಲ್ಲಿ ಜಿನ್ನಾ ಹಿಂದೂ ಮತ್ತು ಮುಸ್ಲಿಮರು ಒಂದು ದೇಶವಾಗಲು ಸಾಧ್ಯವೇ? ಎಂದು ಘೋಷಿಸಿದರು. ಇದನ್ನೂ ಓದಿ: IndependenceDay: ಭಾಗ-1: ಸ್ವಾತಂತ್ರ್ಯ ಹೋರಾಟದ ಹಾದಿ ವಿಭಿನ್ನ… ತ್ಯಾಗ ಬಲಿದಾನಗಳ ಸಂಕೇತ

3 1

2ನೇ ಮಹಾಯುದ್ಧ ಮುಗಿದು ಬ್ರಿಟನ್‌ನಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿತು. ಇದು ಭಾರತದಲ್ಲಿನ ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸಲು ಕ್ರಮ ಕೈಗೊಂಡಿತು. ಇದು ಕ್ಯಾಬಿನೆಟ್‌ ನಿಯೋಗವನ್ನು ಭಾರತಕ್ಕೆ ಸ್ವಯಂ ಅಧಿಕಾರವನ್ನು ನೀಡುವ ಕುರಿತು ಚರ್ಚಿಸಲು ಕಳುಹಿಸಿತು. ಈ ನಿಯೋಗವು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ನೊಂದಿಗೆ ಚರ್ಚಿಸಿತು. ಭಾರತಕ್ಕೆ ಫೆಡರಲ್ ಮಾದರಿ ಸರ್ಕಾರವನ್ನು ಸೂಚಿಸಿತು. ಸಂವಿಧಾನ ರಚನಾ ಸಮಿತಿ ಕರೆಯುವುದಾಗಿ  ಮತ್ತು ಮಧ್ಯಂತರ ರಾಷ್ಟ್ರೀಯ ಸರ್ಕಾರವನ್ನು ಸ್ಥಾಪಿಸಲು ಶಿಫಾರಸು ಮಾಡಿತು. ಆದ್ರೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಭಿನ್ನತೆ ಉಂಟಾಯಿತು.

Independence Day 13

ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರಕ್ಕಾಗಿ 1946ರ ಆಗಸ್ಟ್ 16 ರಂದು ನೇರ ಕಾರ್ಯಾಚರಣೆ ದಿನಕ್ಕೆ ಕರೆ ನೀಡಿತು. ಇದರಿಂದ ದೇಶಾದ್ಯಂತ ಕೋಮುಗಲಭೆಗಳು ನಡೆದವು. ಬಂಗಾಳ ಒಂದರಲ್ಲೇ ಮುಸ್ಲಿಂ ಮೂಲಭೂತವಾದಿಗಳು ಕೇವಲ 48 ಗಂಟೆಗಳಲ್ಲಿ ಸಾವಿರಾರು ಹಿಂದೂಗಳನ್ನ ಕೊಂದರು. ಡಾ. ಬಾಬು ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ಸೇರಿದ ಸಂವಿಧಾನ ಸಭೆಯಲ್ಲಿ ಮುಸ್ಲಿಂ ಲೀಗ್ ಭಾಗವಹಿಸಲಿಲ್ಲ. ಇದನ್ನೂ ಓದಿ: ಭಾಗ-2: ಮರೆಯದ ದುರಂತ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ – ಗಾಂಧಿಯುಗದಲ್ಲಿ ಏನೆಲ್ಲಾ ಆಯ್ತು?

Independence Day 12

ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಸಂಬಂಧ ತೀರಾ ಹದಗೆಟ್ಟಿತ್ತು. ಈ ಸಮಯದಲ್ಲಿ ಬ್ರಿಟಿಷ್ ಸರ್ಕಾರ ಶೀಘ್ರವಾಗಿ ಅಧಿಕಾರವನ್ನ ಹಸ್ತಾಂತರಿಸುವುದಾಗಿ ತಿಳಿಸಿ, 1946ರ ಮಾರ್ಚ್‌ನಲ್ಲಿ ಲಾರ್ಡ್ ಮೌಂಟ್ ಬ್ಯಾಟನ್ ಅವರನ್ನು ಭಾರತಕ್ಕೆ ವೈಸ್‌ರಾಯ್ ಆಗಿ ಕಳುಹಿಸಿತು. ಬ್ಯಾಟನ್‌ ಅವರು ಗಾಂಧೀಜಿ, ಜಿನ್ನಾ ಮತ್ತಿತರ ನಾಯಕರೊಂದಿಗೆ ಮಾತುಕತೆ ನಡೆಸಿ ಭಾರತವನ್ನು ವಿಭಜಿಸುವ ಯೋಜನೆ ರೂಪಿಸಿದರು. 1947ರ ಜುಲೈನಲ್ಲಿ ಭಾರತ ಸ್ವಾತಂತ್ರ್ಯ ಮಸೂದೆಯು ಕಾಯ್ದೆಯ ರೂಪವನ್ನು ಪಡೆಯಿತು. ಕಾಯ್ದೆಯನ್ವಯ 1947ರ ಆಗಸ್ಟ್ 15ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಪ್ರತ್ಯೇಕ ರಾಷ್ಟ್ರಗಳು ಉದಯಿಸಿದವು. ರಾಡ್‌ ಕ್ಲಿಫ್‌ ಆಯೋಗವು ಈ ದೇಶಗಳ ಗಡಿಗಳನ್ನು ಗುರುತಿಸಿತು. ಪಂಡಿತ್ ಜವಾಹರಲಾಲ್ ನೆಹರೂರವರು ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article