ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೊತ್ತಲ್ಲೇ ಪಾಕ್ ಸಂಸದರು ನಾಲಿಗೆ ಹರಿಬಿಟ್ಟಿದ್ದಾರೆ. ಒಂದಲ್ಲ ಒಂದು ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಭಾರತವನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ.
ಅಯೋಧ್ಯೆಯ ಹೊಸ ಬಾಬರಿ ಮಸೀದಿಗೆ ಮೊದಲ ಇಟ್ಟಿಗೆಯನ್ನು ಪಾಕಿಸ್ತಾನ ಸೇನಾ ಸೈನಿಕರು ಇಡುವ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮೊದಲ ಅಜಾನ್ ನೀಡುವ ಸಮಯ ದೂರವಿಲ್ಲ ಎಂದು ಹೇಳಿಕೆ ಮೂಲಕ ಪಾಕಿಸ್ತಾನ ಸಂಸದೆ ಪಲ್ವಾಶಾ ಮೊಹಮ್ಮದ್ ಜೈ ಖಾನ್ ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಉಗ್ರರ ವಿರುದ್ಧ ಹೋರಾಡಿ ಹುತಾತ್ಮನಾಗಿದ್ದ ಕಾನ್ಸ್‌ಟೇಬಲ್ ತಾಯಿ ಗಡೀಪಾರಿಲ್ಲ
Pakistani Senator Palwasha Mohammad Zai Khan on Tuesday.
‘The First brick at the new Babri Mosque in Ayodhya will be put by Pak Army soldiers, & first azan by Pakistan Army chief Munir’
‘We are not wearing bangles’
Lauds India listed Khalistani terrorist Pannun https://t.co/XCWFQ8j7rI pic.twitter.com/rWpFwqaevz
— Sidhant Sibal (@sidhant) April 30, 2025
ಭಾರತದ ಯಾವುದೇ ದುಸ್ಸಾಹಸಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕು ಎಂದು ಪಾಕಿಸ್ತಾನಿ ಶಾಸಕರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.
26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಪಾಕಿಸ್ತಾನ ಸಂಸತ್ತಿನ ಮೇಲ್ಮನೆಯಲ್ಲಿ ಪಲ್ವಾಶಾ ಮತ್ತು ಇತರ ಸೆನೆಟರ್‌ಗಳ ಹೇಳಿಕೆಗಳು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಬಹುದು.
ನೆರೆಯ ದೇಶವು (ಭಾರತ) ತಮ್ಮ ಚಲನಚಿತ್ರಗಳಲ್ಲಿ ನಡೆಯುವ ಘಟನೆಗಳು ಮತ್ತು ಯುದ್ಧಭೂಮಿಯಲ್ಲಿ ನಡೆಯುವ ಘಟನೆಗಳ ನಡುವೆ ದೊಡ್ಡ ವ್ಯತ್ಯಾಸವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಪಲ್ವಾಶಾ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ನೇತೃತ್ವದಲ್ಲಿಂದು 4 ಹೈವೋಲ್ಟೇಜ್ ಸರಣಿ ಸಭೆ – ಪಾಕ್ ಬಗ್ಗುಬಡಿಯೋಕೆ ಮಾಸ್ಟರ್ ಪ್ಲ್ಯಾನ್!