ದಾವಣಗೆರೆ: ಕೆಲವೊಂದು ಘಟನೆಗಳು ವಿಜ್ಞಾನಕ್ಕೆ ಸವಾಲೆಸೆಯುವಂತಿರುತ್ತವೆ. ಅಂತಹದ್ದೇ ಒಂದು ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರ (Harihara) ಪಟ್ಟಣದ ರಾಜಾರಾಮ್ ಕಾಲೋನಿಯಲ್ಲಿ ನಡೆದಿದೆ.
ನಗರದ ಶಿಕ್ಷಕ ಮಾರುತೇಶ್ ಅವರ ಮನೆಯಲ್ಲಿ ಹಾಲ್‌ನ ಟೈಲ್ಸ್ ಕಾದ ಕಾವಲಿಯಂತಾಗುತ್ತಿದೆ. ಇದರಿಂದ ಇಡೀ ಮನೆಯವರು ಅತಂಕದಲ್ಲಿ ಕಾಲ ಕಳೆಯುವಂತಾಗಿದೆ. ಟೈಲ್ಸ್‌ನ್ನು ಒದ್ದೆ ಬಟ್ಟೆಯಿಂದ ಒರೆಸಿದರೂ ಕೂಡ ಕಾವು ಹೆಚ್ಚಾಗುತ್ತಿದ್ದು, ಯಾವ ಕಾರಣಕ್ಕೆ ಟೈಲ್ಸ್ ಗಳು ಬಿಸಿಯಾಗುತ್ತಿವೆ ಎಂಬ ಪ್ರಶ್ನೆ ಕಾಡುತ್ತಿದೆ. ಇದನ್ನ ಓದಿ: ಒಂದು ವಾರದಲ್ಲಿ ಡಬಲ್ ಹಣ ಆಮಿಷ – ಕೋಟ್ಯಂತರ ರೂ. ವಂಚಿಸಿ ಆಂಧ್ರ ದಂಪತಿ ಪರಾರಿ
ಸ್ಥಳಕ್ಕೆ ಖಗೋಳಶಾಸ್ತ್ರಜ್ಞರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೌಚಾಲಯದ ಪಿಟ್‌ನಿಂದ ಈ ರೀತಿ ಆಗಿರಬಹುದು ಎಂದು ಖಗೋಳಶಾಸ್ತ್ರಜ್ಞರು ಶಂಕೆ ವ್ಯಕ್ತಪಡಿಸಿದ್ದಾರೆ. ಇದರಿಂದ ಪುರಸಭೆ ಸಿಬ್ಬಂದಿ ಶೌಚಾಲಯದ ಪಿಟ್ ಸ್ವಚ್ಚಗೊಳಿಸಿದರು ಬಿಸಿ ಕಮ್ಮಿಯಾಗುತ್ತಿಲ್ಲ. ಇಡೀ ಮನೆ ತಣ್ಣಗಿದ್ದರೂ ಹಾಲ್‌ನಲ್ಲಿ ಮಾತ್ರ ಬಿಸಿ ಹೆಚ್ಚಾಗುತ್ತಿದೆ.
ಬಿಸಿ ಹೆಚ್ಚಾಗುತ್ತಿರುವುದಕ್ಕೆ ಕಾರಣ ತಿಳಿಯದೇ ಇಡೀ ಕುಟುಂಬ ಕಂಗಾಲಾಗುತ್ತಿದೆ. ವಿಸ್ಮಯ ನೋಡಲು ಮಾರುತೇಶ್ ಮನೆಗೆ ಏರಿಯಾದ ಜನರು ದೌಡಾಯಿಸುತ್ತಿದ್ದಾರೆ. ಅಲ್ಲದೆ ಖಗೋಳಶಾಸ್ತ್ರಜ್ಞರು ಇದಕ್ಕೆ ಪರಿಹಾರ ಹುಡುಕುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ. ಇದನ್ನ ಓದಿ: ದಾವಣಗೆರೆ | 150 ಕೋಟಿ ವಂಚನೆ ಪ್ರಕರಣ – ದೂರುದಾರನೇ ಸೈಬರ್ ವಂಚಕರ ಗ್ಯಾಂಗ್ ಸದಸ್ಯ!

