ನಟ ಚೇತನ್ ಬಂಧನ ಹಿಂದಿನ ರೋಚಕ ಸ್ಟೋರಿ : ಜೈಲಿನಲ್ಲಿ ಚೇತನ್ 4ನೇ ದಿನ

Public TV
2 Min Read
chetan 13 2

ಟ ಚೇತನ್ ನ್ಯಾಯಾಧೀಶರ ಕುರಿತಾಗಿ ಮಾನಹಾನಿ ಮಾಡುವಂತಹ ಟ್ವಿಟ್ ಹಾಕಿದರು ಎನ್ನುವ ಕಾರಣಕ್ಕಾಗಿ ಶೇಷಾದ್ರಿಪುರಂ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು. ನಂತರ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನವಿಧಿಸಿ ಕೋರ್ಟ್ ಆದೇಶಿಸಿತ್ತು. ನಾಲ್ಕು ದಿನಗಳಿಂದ ಚೇತನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜಾಮೀನಿಗಾಗಿ ಚೇತನ್ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಕೂಡ ಸಲ್ಲಿಸಿದೆ. ಈ ಸಂದರ್ಭದಲ್ಲಿ ಬಂಧನ ದಿನದಿಂದ ಈವರೆಗೂ ಏನೆಲ್ಲ ಬೆಳವಣಿಗೆ ಆಯಿತು ಎನ್ನುವ ಕುರಿತು ಚೇತನ್ ಪತ್ನಿ ಮೇಘಾ ಸುದೀರ್ಘವಾಗಿ ಫೇಸ್ ಬುಕ್ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ಅನೌನ್ಸ್

chetan 13 4

ನಟ ಚೇತನ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ನಾವು ಒಂದು ಪೊಲೀಸ್ ಠಾಣೆಯಿಂದ ಮತ್ತೊಂದು ಪೊಲೀಸ್ ಠಾಣೆಗೆ ಸತತ 8 ಗಂಟೆಗಳ ಕಾಲ ಅಲೆದಾಡಿದ ನಂತರವಷ್ಟೇ ನಮಗೆ ಚೇತನ್ ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ತಿಳಿದುಬರುತ್ತದೆ ಮತ್ತು FIR ಪ್ರತಿ ನಮ್ಮ ಕೈಗೆ ಸಿಕ್ಕಿರುತ್ತದೆ‌. ನಮಗೆ ಯಾವುದೇ ಮಾಹಿತಿ ನೀಡದೆ ಚೇತನ್ ಅವರನ್ನು ಮನೆಯಿಂದ ಏಕಾಏಕಿ ಕರೆದುಕೊಂಡು ಹೋಗಿದ್ದಾರೆ. ನಾನು ಪೊಲೀಸ್ ಠಾಣೆಗೆ ಹೋಗುವವರೆಗೂ ಚೇತನ್ ಬಂಧನವಾಗಿದ್ದಾರೆ ಎಂಬ ಮಾಹಿತಿಯನ್ನೇ ಪೊಲೀಸರು ನನಗೆ ನೀಡಿಲ್ಲ. ಅಕಸ್ಮಾತ್ ನಾನು ಪೊಲೀಸ್ ಠಾಣೆಗೆ ಹೋಗದೇ ಇದಿದ್ದರೆ ಬಂಧನ ವಿಷಯ ನನಗೆ ತಿಳಿಯುತ್ತಿರಲಿಲ್ಲ ಮತ್ತು ತಿಳಿಸುವ ಉದ್ದೇಶವು ಪೊಲೀಸರಿಗೆ ಇಲ್ಲ ಅನ್ನುವುದು ಇದರಿಂದ ಸ್ಪಷ್ಟವಾಗಿ ಕಾಣುತ್ತದೆ. ಇದನ್ನೂ ಓದಿ : ರಾಮ್ ಗೋಪಾಲ್ ವರ್ಮಾ ಭೇಟಿ ಮಾಡಿ ಕುತೂಹಲ ಮೂಡಿಸಿದ ಉಪ್ಪಿ

chetan 13 3

ಚೇತನ್ ಇರುವಿಕೆಯ ಬಹಿರಂಗಪಡಿಸಲು ನಾನು ಅರ್ಜಿ ಸಲ್ಲಿಸಿದ ನಂತರವಷ್ಟೇ ಅವರನ್ನು ಸೂಮೋಟೊ ದೂರಿನ ಮೇರೆಗೆ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ತಿಳಿದುಬರುತ್ತದೆ. ಆದರೆ ಚೇತನ್ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಮಾತ್ರ ಬಹಿರಂಗಪಡಿಸಲಿಲ್ಲ. ಅಂತಿಮವಾಗಿ, ರಾತ್ರಿ 10 ಗಂಟೆಗೆ ನಮಗೆ ಎಫ್‌ಐಆರ್ ಪ್ರತಿ ಸಿಗುತ್ತದೆ. ನ್ಯಾಯಮೂರ್ತಿಯ ಬಗ್ಗೆ ಮಾಡಿದ ಟ್ವೀಟ್‌ಗಾಗಿ ಚೇತನ್ ವಿರುದ್ಧ ಸೆಕ್ಷನ್ 504 ಮತ್ತು 505(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ : ಉಕ್ರೇನ್ ನಲ್ಲಿ ಸಿಲುಕಿಕೊಂಡ ನಟಿ ಶ್ವೇತಾ ಚೆಂಗಪ್ಪ ಗೆಳತಿ

chetan 13 5

ಅತ್ಯಾಚಾರದಿಂದ ಸುಸ್ತಾಗಿ ಮಲಗಿಬಿಟ್ಟೆ ಎಂದು ಹೇಳುವುದು ಭಾರತೀಯ ನಾರಿಯ ಲಕ್ಷಣವಲ್ಲ. ನಮ್ಮ ನಾಡಿನ ಮಹಿಳೆಯರು ಅವರ ಮೇಲೆ ಆಕ್ರಮಣವಾದಾಗ ನಡೆದುಕೊಳ್ಳುವ ರೀತಿಯೂ ಇದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅತ್ಯಾಚಾರ ಪ್ರಕರಣದ ಆರೋಪಿಗೆ  2020 ಜೂನ್ 22ರಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.  ನಂತರ ಸರ್ಕಾರದಿಂದ ಮನವಿ ಸ್ವೀಕರಿಸಿದ ಬಳಿಕ ಈ ಆದೇಶ ಪತ್ರದಲ್ಲಿದ್ದ ಈ ಹೇಳಿಕೆಯನ್ನು ತೆಗೆಯಲಾಗಿತ್ತು. ಈ ಒಂದು ಅಸೂಕ್ಷ್ಮ ಹೇಳಿಕೆಗೆ ಚೇತನ್ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ಇದನ್ನೂ ಓದಿ : ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್

chetan 13 1

ಫೆಬ್ರವರಿ 22ರಂದು ಚೇತನ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಾವು ಇಂದು ಜಾಮೀನಿನ ನಿರೀಕ್ಷಣೆಯಲಿದ್ದೆವು, ಆದರೆ ಜಾಮೀನಿಗೆ ಸಂಬಂಧಿಸಿದ ಆದೇಶವನ್ನು ಫೆಬ್ರವರಿ 25 ರವರಗೆ ಕಾಯ್ದಿರಿಸಿದೆ. ಹಾಗಾಗಿ ಚೇತನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ನಿಮ್ಮ ಬೆಂಬಲಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನ್ಯಾಯಾಲಯವು ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಜಾಸತ್ತಾತ್ಮಕ ಹಕ್ಕನ್ನು ಎತ್ತಿಹಿಡಿಯುತ್ತದೆ ಮತ್ತು ವಿಳಂಬವಿಲ್ಲದೆ ನಮಗೆ ನ್ಯಾಯವನ್ನು ನೀಡುತ್ತದೆ ಎಂದು ಆಶಿಸೋಣ

ಎಂದು ಮೇಘಾ ಸ್ವತಃ ಚೇತನ್ ಅವರ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಪತ್ರಬರೆದು ಅಭಿಮಾನಿಗಳಿಗೆ ಅಪ್ ಡೇಟ್ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *