ಮೈಸೂರು: ಜಿಲ್ಲೆಯ ಚುಂಚನಕಟ್ಟೆ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರಲ್ಲಿ ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಸಿಎಫ್‍ಟಿಆರ್‍ಐ ಸೀನಿಯರ್ ಸೈಂಟಿಸ್ಟ್ ಸೋಮಶೇಖರ್ (40) ಸಾವನ್ನಪ್ಪಿದ ದುರ್ದೈವಿ. ಸೋಮಶೇಖರ್ ಇಂದು ಮಡದಿ ಪ್ರತೀಮಾ ಮತ್ತು ಮಕ್ಕಳಾದ ರಿಷಾನಿ, ವಿನಯ್ ಜೊತೆ ವೀಕೆಂಡ್ ಕಳೆಯಲು ಚುಂಚನಕಟ್ಟೆ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದರು.
Advertisement
Advertisement
ಚುಂಚನಕಟ್ಟೆ ಜಲಪಾತದಲ್ಲಿ ಮಕ್ಕಳೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದಾಗ ನೀರಿನ ಮಟ್ಟ ಹೆಚ್ಚಾಗಿದೆ. ಕೂಡಲೇ ಸ್ಥಳೀಯರು ನೀರಿನಲ್ಲಿ ಸಿಲುಕಿದ್ದ ಪ್ರತೀಮಾ ಮತ್ತು ಮಕ್ಕಳಾದ ರಿಷಾನಿ, ವಿನಯ್ ಮೂವರನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಸೋಮಶೇಖರ್ ಅವರನ್ನು ಕಾಪಾಡುವ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
Advertisement
ಚುಂಚನ ಕಟ್ಟೆ ಜಲಪಾತದ ಪಕ್ಕದಲ್ಲಿದ್ದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಹೋಗುತ್ತಿದ್ದ ನೀರಿನ ಗೇಟ್ ಬಂದ್ ಮಾಡಿದ ಕಾರಣ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಗೇಟ್ ಕ್ಲೋಸ್ ಮಾಡುವ ಮುನ್ನ ವಿದ್ಯುತ್ ಘಟಕ ಒಂದು ಗಂಟೆ ಸೈರನ್ ಬಾರಿಸುತ್ತದೆ.