ಕಾಲಿವುಡ್ ನ ಜನಪ್ರಿಯ ನಟ ವಿಜಯ್ ಅಭಿನಯದ ‘ಲಿಯೋ’ (Leo) ಚಿತ್ರವು ಅಕ್ಟೋಬರ್ 19ರಂದು ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ’ಪ್ರೀತಿಯ ಆಯುಧ’ ಎಂಬ ಚಿತ್ರದ ಮೂರನೇ ಹಾಡನ್ನು (Song) ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿರುವ ಈ ಹಾಡಿನಲ್ಲಿ ವಿಜಯ್, ತ್ರಿಷಾ ಮುಂತಾದವರು ಕಾಣಿಸಿಕೊಂಡಿದ್ದು, ಜೆ.ವಿ. ಸುಧಾನ್ಶು ಮತ್ತು ಪ್ರಿಯಾ ಮಾಲಿ ಹಾಡಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ರಚಿಸಿದ್ದಾರೆ. ಇದನ್ನೂ ಓದಿ:ಮಗಳ ಮದುವೆ ಖಚಿತ ಪಡಿಸಿದ ಆಮೀರ್ ಖಾನ್: ಇರಾ ಮ್ಯಾರೇಜ್ ಡೇಟ್ ಫಿಕ್ಸ್
‘ಲಿಯೋ’ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಲಲಿತ್ ಕುಮಾರ್ ನಿರ್ಮಿಸಿದ್ದು, ಲೋಕೇಶ್ ಕನಕರಾಜ್ (Lokesh Kanakaraj) ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಮಾಸ್ಟರ್’ ನಂತರ ಲೋಕೇಶ್ ಕನಕರಾಜ್ ಮತ್ತು ವಿಜಯ್ ಜೊತೆಯಾಗಿ ಕೆಲಸ ಮಾಡಿರುವ ಎರಡನೇ ಚಿತ್ರ ಇದು.
ಬಾಲಿವುಡ್ ನಟ ಸಂಜಯ್ ದತ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದು, ವಿಜಯ್ ಮತ್ತು ಸಂಜಯ್ ದತ್ ಜೊತೆಗೆ ತ್ರಿಷಾ, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್, ಗೌತಮ್ ಮೆನನ್, ಮಿಸ್ಕಿನ್ ಮುಂತದವರು ಈ ಚಿತ್ರದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.
Web Stories