ತುಮಕೂರು: ನಾಗಾ ಸಾಧುಗಳ (Naga sadhu) ಸೋಗಿನಲ್ಲಿ ಬಂದ ಇಬ್ಬರು ಆಸಾಮಿಗಳು ಫೋಟೋ ಸ್ಟುಡಿಯೋ (Studio) ಮಾಲೀಕನ ಕೈ ಬೆರಳಲ್ಲಿದ್ದ ಉಂಗುರವನ್ನು(Ring) ಸಿನಿಮೀಯ ಸ್ಟೈಲ್‌ನಲ್ಲಿ ದೋಚಿ ಪರಾರಿಯಾದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.
ಎಮ್‌ಜಿ ರಸ್ತೆಯಲ್ಲಿ ಇರುವ ಫೋಟೋ ಸ್ಟುಡಿಯೊವೊಂದರ ಮಾಲೀಕನಿಗೆ ನಕಲಿ ಸಾಧುಗಳು ಮಂಕುಬೂದಿ ಎರಚಿದ್ದು, ಸ್ಟುಡಿಯೋ ಮಾಲೀಕನ ಬೆರಳಲ್ಲಿದ್ದ ಉಂಗುರ ದೋಚಿದ್ದಾರೆ. ನಾಗಾ ಸಾಧುಗಳು ಎಂದು ಹೇಳಿಕೊಂಡು ಬಂದಿದ್ದ ಇಬ್ಬರಿಗೂ ಸ್ಟುಡಿಯೋ ಮಾಲೀಕ ಬಾಳೆ ಹಣ್ಣು, ನೀರು ಕೊಟ್ಟು ಸತ್ಕಾರ ಮಾಡಿದ್ದಾರೆ. ಆ ಬಳಿಕ ನಕಲಿ ಸಾಧುಗಳು ಮಾಲೀಕನ ಕೈಯಲ್ಲಿ ರುದ್ರಾಕ್ಷಿ ಕೊಟ್ಟು ಕಣ್ಣು ಮುಚ್ಚಿಸಿ ಜಪ ಮಾಡಿಸಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತ- ಒಂದೇ ಕುಟುಂಬದ ನಾಲ್ವರ ದುರ್ಮರಣ
Advertisement
Advertisement
ಮಾಲೀಕನ ಎರಡೂ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಧಾನವಾಗಿ ಬೆರಳಿನ ಉಂಗುರವನ್ನು ಎಗರಿಸಿದ್ದಾರೆ. ಇನ್ನೂ ಎರಡು ನಿಮಿಷ ಧ್ಯಾನ ಮಾಡಿ ಎಂದು ಹೇಳಿ ನಾಗಾಸಾಧುಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಧ್ಯಾನದಿಂದ ಹೊರ ಬಂದು ನೋಡಿದಾಗ ಸ್ಟುಡಿಯೋ ಮಾಲೀಕನ ಕೈಯಲ್ಲಿದ್ದ ಉಂಗುರ ಮಾಯವಾಗಿರುವುದು ಕಂಡುಬಂದಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧರ್ಮಸ್ಥಳದಿಂದ ವಾಪಾಸ್ ಆಗುತ್ತಿದ್ದಾಗ ಅಪಘಾತ – ತಾಯಿ, ಮಗ ಸ್ಥಳದಲ್ಲೇ ಸಾವು
Advertisement
Web Stories