ಮಡಿಕೇರಿ: ಜಿಲ್ಲಾಸ್ಪತ್ರೆಯಲ್ಲಿ (Hospital) ಒಂದಲ್ಲ ಒಂದು ಕರ್ಮಕಾಂಡಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ಆಸ್ಪತ್ರೆಯ ಶವಗಾರದಲ್ಲಿ ಡಿ ದರ್ಜೆ ನೌಕರನೋಬ್ಬ ಶವಗಾರದಲ್ಲೇ ಮಹಿಳೆಯರು, ಯುವತಿಯರ ಜೊತೆ ಪಲ್ಲಂಘದಾಟ ನಡೆಸಿ ಜಿಲ್ಲೆಯಲ್ಲಿ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಇದೀಗ ಜಿಲ್ಲಾ ಆಸ್ಪತ್ರೆಯಲ್ಲೇ ಕಳ್ಳನೊಬ್ಬ 7 ವೈದ್ಯರ (Doctor) ಬ್ಯಾಗ್‌ಗಳನ್ನು ಎಸ್ಕೇಪ್ ಮಾಡಿರುವ ವೀಡಿಯೋವೊಂದು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ.
ಮಡಿಕೇರಿ (Madikeri) ನಗರದಲ್ಲಿ ಇರುವ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಕಳ್ಳನ್ನೋರ್ವ ಆಸ್ಪತ್ರೆಯಲ್ಲಿ ವೈದ್ಯರು ಇಟ್ಟಿದ್ದ ಬ್ಯಾಗ್‌ಗಳನ್ನು ಕಳವು ಮಾಡಿದ್ದಾನೆ. ಈತ ಸಂಜೆ ಸಮಯದಲ್ಲಿ ಆಸ್ಪತ್ರೆಗೆ ಎಂಟ್ರಿ ನೀಡಿದ್ದು, ಸುಮಾರು ಒಂದು ತಾಸು ಆಸ್ಪತ್ರೆ ಸುತ್ತ ಓಡಾಟ ನಡೆಸಿದ್ದಾನೆ. ಅದಾದ ಬಳಿಕ ವೈದ್ಯರ ಬ್ಯಾಗ್‌ಗಳನ್ನು ಎಗರಿಸಿದ ಭೂಪ ಆಸ್ಪತ್ರೆ ಹೊರಗೆ ಬಂದು ಬ್ಯಾಗ್‌ಗಳನ್ನು ಜಾಲಾಡಿದ್ದಾನೆ. ನಂತರ ಬ್ಯಾಗುಗಳಲ್ಲಿದ್ದ ವೈದ್ಯರ ಎಟಿಎಂ ಕಾರ್ಡ್‌ಗಳನ್ನು ಎಗರಿಸಿದ ಅತ್ತ ಆಸ್ಪತ್ರೆಗಳ ಮುಂಭಾಗದಲ್ಲಿದ್ದ ಒಂದು ಬೈಕನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ.
Advertisement
Advertisement
ಘಟನೆಗೆ ಸಂಬಂಧಿಸಿ ಕಳ್ಳನ ಕೈಚಳಕ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ವರ್ಷ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಫೋನ್ ಕಳವಾಗಿತ್ತು. ಇದೀಗ 7 ವೈದ್ಯರ ಬ್ಯಾಗುಗಳ ಕಳವಾಗಿದ್ದು, 7 ವೈದ್ಯರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರ ಠಾಣೆ ಎಸ್ಐ ಶ್ರೀನಿವಾಸ್ ಭೇಟಿ ನೀಡಿದ್ದಾರೆ. ಅಲ್ಲದೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ- ಬಿಜೆಪಿಗೆ ಸುಮಲತಾ ಆಪ್ತ ಸಚ್ಚಿದಾನಂದ ಸೇರ್ಪಡೆ
Advertisement
Advertisement
ಕಳೆದ ರಾತ್ರಿ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಹೆಚ್ಚಿನ ಸೆಕ್ಯುರಿಟಿ ಇಲ್ಲದ ಕಾರಣ ಕಳ್ಳತನವಾಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಪ್ರಕರಣವಾದ ಬಳಿಕ ಅಸ್ಪತ್ರೆಗೆ ಸೆಕ್ಯುರಿಟಿ ಇನ್ನಷ್ಟು ಹೆಚ್ಚಿಸುವುದಾಗಿ ಮೆಡಿಕಲ್ ಸೂಪರಿಂಟೆಂಡೆಂಟ್ ರೂಪೇಶ್ ತಿಳಿಸಿದ್ದಾರೆ. ಒಟ್ನಲ್ಲಿ ಇದೀಗಾ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ರಕ್ಷಣೆ ಇಲ್ವಾ ಅನ್ನೋ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಬಸ್ ಪಲ್ಟಿ – 9 ಜನರಿಗೆ ಗಾಯ