ಲಕ್ನೋ: ಅಯೋಧ್ಯೆಗೆ (Ayodhya) ತೆರಳಿದ್ದ ಧಾರವಾಡದ 2 ಕುಟುಂಬಗಳ ಕಾರಿನ ಗ್ಲಾಸ್ ಒಡೆದು ಬ್ಯಾಗ್ (Bag), ಮೊಬೈಲ್ (Mobile) ಹಾಗೂ 20,000 ರೂ. ಕಳ್ಳತನ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ ನಡೆದಿದೆ.
ಧಾರವಾಡ ಶೆಟ್ಟರ್ ಕಾಲೋನಿಯ ಅರುಣಕುಮಾರ ಬಡಿಗೇರ ಹಾಗೂ ಮಾಳಮಡ್ಡಿಯ ಬಸವರಾಜ್ ಕೊಟ್ಯಾಳ್ ಎಂಬುವವರ ಕುಟುಂಬದವರು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳಿದ್ದರು. ಶಾಹಿ ಸ್ನಾನ ಮುಗಿಸಿ ಅಯೋಧ್ಯೆಗೆ ಹೋಗಿದ್ದರು. ಕುಟುಂಬಸ್ಥರು ಶನಿವಾರ ರಾತ್ರಿ ಅಯೋಧ್ಯೆಯಲ್ಲಿ ಕಾರು ಪಾರ್ಕಿಂಗ್ ಮಾಡಿ ದರ್ಶನಕ್ಕೆ ಹೋಗಿದ್ದರು. ಇದನ್ನೂ ಓದಿ : ಸ್ಥಳೀಯ ಚುನಾವಣೆಯಿಂದ ಲೋಕಸಭಾ ಚುನಾವಣೆವರೆಗೂ ಸಿದ್ದರಾಮಯ್ಯ ಬೇಕು: ಡಿಕೆಶಿ
ಈ ವೇಳೆ ಖದೀಮರು ಕಾರಿನ ಕಿಟಕಿ ಗಾಜು ಒಡೆದು ಬ್ಯಾಗ್, 10 ಮೊಬೈಲ್, 20,000 ರೂ., ಎಟಿಎಂ ಕಾರ್ಡ್ ಸೇರಿ ಬಟ್ಟೆ ಕಳ್ಳತನ ಮಾಡಿದ್ದಾರೆ. ಶ್ರೀರಾಮನ ದರ್ಶನ ಮುಗಿಸಿ ಬಂದು ನೋಡಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಇದರಿಂದ 2 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ. ಇದನ್ನೂ ಓದಿ : ಹುಟ್ಟುಹಬ್ಬದ ದಿನವೇ ನಟ ದರ್ಶನ್ ಬ್ಯಾನರ್ ತೆರವು – ಫ್ಯಾನ್ಸ್‌ಗೆ ಶಾಕ್
ನಮಗೆ ಆದಂತೆ ಬೇರೆ ಜನರಿಗೆ ಆಗದಿರಲಿ. ರಾಜ್ಯದಿಂದ ಹಲವು ಜನರು ಈಗಲೂ ಕುಂಭಮೇಳಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ಅವರ ಬ್ಯಾಗ್, ಮೊಬೈಲ್ ಹಾಗೂ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳಲಿ ಎಂದು ಎಚ್ಚರಿಕೆ ವಹಿಸುವಂತೆ ಕುಟುಂಬಗಳು ಮನವಿ ಮಾಡಿದ್ದಾರೆ.