– ಇದು ಹೇಡಿತನದ ಕೃತ್ಯ; ರಾಜನಾಥ್ ಸಿಂಗ್ ತೀವ್ರ ಖಂಡನೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam) ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಸಾವನ್ನಪ್ಪಿದ್ದು, ಸುಮಾರು 12 ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಟಿಆರ್‌ಎಫ್ (TRF) ಹೊತ್ತುಕೊಂಡಿದೆ.
Don’t trust Muslims when they say, terrorist don’t have religion.
Islamist terrorists killed tourists in #Pahalgam of South Kashmir after checking that they were not Muslims. Trousers of tourists pulled down, ID Cards checked. Listen to what the Hindu victim says. Tourist killed… pic.twitter.com/Tlf7J7Bgji
— Oxomiya Jiyori 🇮🇳 (@SouleFacts) April 22, 2025
ಅಮರನಾಥ ಯಾತ್ರೆ ಆರಂಭವಾಗುವ ಕೆಲವೇ ದಿನಗಳ ಮೊದಲು ದಾಳಿ ನಡೆದಿದ್ದು. ಭದ್ರತೆಯ ಬಗ್ಗೆ ಕಳವಳ ಹೆಚ್ಚಿಸಿದೆ. ಇನ್ನೂ ದಾಳಿಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಭೀಕರತೆಯನ್ನು ವಿವರಿಸಿದ್ದಾರೆ.
ಭಯೋತ್ಪಾದಕರು (Terrorists) ಗುಂಡಿನ ಮಳೆಗರೆಯುತ್ತಿದ್ದಂತೆ ಪ್ರವಾಸಿಗರು ಹಾಗೂ ಸ್ಥಳೀಯರು ದಿಕ್ಕಾಪಾಲಾಗಿ ಓಡಿದ್ದಾರೆ. ಈ ಕುರಿತ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ದಾಳಿ ಸಂದರ್ಭದಲ್ಲಿ ಭಯೋತ್ಪಾದಕ ಮೊದಲು ನನ್ನ ಪತಿಯ ಬಳಿಗೆ ಬಂದು ನೀನು ಮುಸಲ್ಮಾನನಾ? ಅಂತ ಕೇಳಿದ, ಬಳಿಕ ಗುಂಡು ಹಾರಿಸಿದ. ಅದೇ ರೀತಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿರುವುದಾಗಿ ಪ್ರತ್ಯಕ್ಷದರ್ಶಿ ಮಹಿಳೆ ಹೇಳಿದ್ದಾರೆ.
Deeply anguished by the news of terrorist attack in Pahalgam (Jammu & Kashmir). This dastardly attack on innocent civilians is an act of cowardice and highly reprehensible. My thoughts and prayers are with the innocent victims and their families.
— Rajnath Singh (@rajnathsingh) April 22, 2025
ಉಗ್ರ ಗುಂಡು ಹಾರಿಸುತ್ತಿದ್ದಂತೆ ಮಹಿಳೆ ಚೀರಾಡಿದ್ದಾರೆ. ಅಲ್ಲದೇ ಪತಿಯನ್ನು ಕೊಂದಾಯ್ತು ನನ್ನನ್ನೂ ಕೊಂದುಬಿಡಿ ಅಂತಾ ಗೋಳಾಡಿದ್ದಾರೆ. ಬಳಿಕ ಅಲ್ಲಿನ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ.
ರಾಜನಾಥ್ ಸಿಂಗ್ ಖಂಡನೆ:
ಇನ್ನೂ ಭಯೋತ್ಪಾದಕ ದಾಳಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡಿಸಿದ್ದಾರೆ. ಪಹಲ್ಗಾಮ್ (ಜಮ್ಮು ಮತ್ತು ಕಾಶ್ಮೀರ) ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿಯಿಂದ ತೀವ್ರ ದುಃಖಿತನಾಗಿದ್ದೇನೆ. ಮುಗ್ಧ ನಾಗರಿಕರ ಮೇಲೆ ನಡೆದ ಈ ಹೇಡಿತನದ ದಾಳಿ ಹೇಡಿತನದ ಕೃತ್ಯ ಮತ್ತು ಅತ್ಯಂತ ಖಂಡನೀಯ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಮುಗ್ಧ ಬಲಿಪಶುಗಳು ಮತ್ತು ಅವರ ಕುಟುಂಬಗಳೊಂದಿಗೆ ಇವೆ ಎಂದು ಭಾವುಕ ಪೋಸ್ಟ್‌ವೊಂದನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.