ಚಿತ್ರದುರ್ಗ: ಬಿಸಿಲ ಝಳದಿಂದ (Summer) ಬಸವಳಿದ ಕೋತಿಗಳು (Monkeys) ಕೆರೆಯಲ್ಲಿ ಈಜಾಡುವ ಮೂಲಕ ದಣಿವಾರಿಸಿಕೊಂಡ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.
ಚಂದ್ರವಳ್ಳಿ ತೋಟ ಎಂದೇ ಹೆಸರಾಗಿರುವ ಈ ರಮಣೀಯ ಪ್ರವಾಸಿ ತಾಣದಲ್ಲೀಗ ಕೋತಿಗಳ ಕಲರವ ಶುರುವಾಗಿದೆ.ಬಿಸಿಲಿನ ಬೇಗೆ ತಾಳಲಾರದೇ ಹಿಂಡು ಹಿಂಡು ಕೋತಿಗಳು ಚಂದ್ರವಳ್ಳಿ ಕೆರೆಗೆ ಲಗ್ಗೆ ಇಟ್ಟಿವೆ. ಕದಂಬರ ಅರಸ ಮಯೂರ ವರ್ಮ ಕಟ್ಟಿಸಿರುವ ಕೆರೆಯಲ್ಲಿ ಈಜುತ್ತಾ, ನೀರಾಟ ಆಡುತ್ತಾ ಬಿಸಿಲಿನ ಧಗೆ ಕಡಿಮೆ ಮಾಡಿಕೊಳ್ಳುತ್ತಿವೆ. ಕೋತಿಗಳ ಈ ನೀರಾಟದ ದೃಶ್ಯ ಪ್ರವಾಸಿಗರಿಗೆ ಹೊಸ ಮನರಂಜನೆಯಾಗಿದೆ. ಥೇಟ್ ಮನುಷ್ಯರಂತೆಯೇ ನೀರಲ್ಲಿ ಈಜಾಡುವ ಕೋತಿಗಳ ಈ ದೃಶ್ಯವನ್ನು ಇಲ್ಲಿಗೆ ಬರುವ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕಾಶ್ಮೀರದ ಬುದ್ಗಾಮ್‌ನಲ್ಲಿ ಕಮರಿಗೆ ಉರುಳಿದ ಸೇನಾ ವಾಹನ – 10 ಮಂದಿಗೆ ಗಾಯ
ಅದರಲ್ಲೂ ಮನುಷ್ಯರಂತೆ ಕಲ್ಲ ಮೇಲಿಂದ ನೀರಿಗೆ ಡೈವ್ ಹೊಡೆಯುವ ಕೋತಿ ನೀರೊಳಗೆ ಕೀಟಲೆ ಮಾಡುತ್ತಾ ಒಂದು ಕಡೆ ಮುಳುಗಿ, ಮತ್ತೊಂದೆಡೆ ಎದ್ದು ಹೋಗುವ ಮಂಗಣ್ಣಗಳ ಕುಚೇಷ್ಟೆ ಹಾಗೂ ಥೇಟ್ ಮನುಷ್ಯರಂತೆ ನೀರಿಗೆ ಹಾರುವ ಸಾಹಸ ನೋಡಿ ಪುಳಕಿತರಾದರು. ಇದನ್ನೂ ಓದಿ: ಮೋದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ ಮೋಹನ್ ಭಾಗವತ್
ಚಿತ್ರದುರ್ಗದಲ್ಲಿ ಪ್ರಸ್ತುತ 40 ಡಿಗ್ರಿಗಿಂತ ಹೆಚ್ಚು ತಾಪಮಾನ ಇದೆ. ಹೀಗಾಗಿ ತಂಪಾದ ವಾತಾವರಣ ಇರುವ ಈ ಚಂದ್ರವಳ್ಳಿಗೆ ನಿತ್ಯವೂ ಬೆಳಗ್ಗೆ ಹಾಗೂ ಸಂಜೆ ನೂರಾರು ಜನ ವಾಕ್ ಬರುತ್ತಾರೆ. ವೀಕೆಂಡ್‌ನಲ್ಲಿ ಸಾವಿರಾರು ಜನ ಪ್ರವಾಸಿಗರು ಕೂಡಬರ್ತಾರೆ.ಆದರೆ ಕಳೆದ ಒಂದು ವಾರದಿಂದ ಬಿಸಿಲ ಝಳ ಹೆಚ್ಚಾಗಿದ್ದೂ,ಪ್ರವಾಸಿಗರ ಸಂಖ್ಯೆ ಸಹ ವಿರಳವಾಗಿದೆ. ಇದನ್ನೂ ಓದಿ: ಎರಡನೇ ವಿಮಾನ ನಿಲ್ದಾಣ – ಶಾಸಕ ಸ್ಥಾನ ಪಣಕ್ಕಿಟ್ಟು ರೈತರ ಪರ ನಿಲ್ತೀನಿ: ಎನ್.ಶ್ರೀನಿವಾಸ್
ಈ ಮೂಕಜೀವಿಗಳು ಆಹಾರವಿಲ್ಲದೇ ಪರದಾಡುತ್ತಿದ್ದು, ನೀರಾಟದಲ್ಲೇ ಕಾಲ ಕಳೆಯಿತ್ತಿವೆ. ಹೀಗಾಗಿ ಆದಷ್ಟು ನೀರಿನ ಮೂಲಗಳನ್ನು ಸಂರಕ್ಷಿಸುವ ಮೂಲಕ ಇಂತಹ ಮೂಕಜೀವಿಗಳು ಸಹ ಬೇಸಿಗೆ ವೇಳೆ ಬಿಂದಾಸ್ ಆಗಿ ಬದುಕಲು ಎಲ್ಲರು ಸಹಕರಿಸಬೇಕೆಂಬುದು ಪ್ರಾಣಿಪ್ರಿಯರ ಅಭಿಪ್ರಾಯ. ಇದನ್ನೂ ಓದಿ: 52ನೇ ಸಿಜೆಐ ಆಗಿ ನ್ಯಾ.ಬಿಆರ್ ಗವಾಯಿ ನೇಮಕ