ಧಾರವಾಡ: ತೆಲಂಗಾಣ ಸರ್ಕಾರ ಅಲ್ಲಿಯ ಮುಸ್ಲಿಮರ ಓಲೈಕೆಗಾಗಿ ಶೇ.12ರಷ್ಟು ಮೀಸಲಾತಿ ನೀಡಿದೆ. ತೆಲಂಗಾಣ ಸರ್ಕಾರ ಒಂದು ರೀತಿ ಪಾಕಿಸ್ತಾನ ಇದ್ದಂತೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ದೇಶದ ಮುಸ್ಲಿಮರು ದೇಶದಲ್ಲಿ ಸುರಕ್ಷಿತವಾಗಿ ಇದ್ದರೆ ಎಂದರೆ ಅದಕ್ಕೆ ನಮ್ಮ ಸೈನಿಕರು ಕಾರಣ. ಆದರೆ ಕಾಶ್ಮೀರಿ ಮುಸ್ಲಿಮರು ನಮ್ಮ ಸೈನಿಕರ ಮೇಲೆ ಕಲ್ಲು ಎಸೆಯುತಿದ್ದಾರೆ. ಇದಕ್ಕೆ ಇಲ್ಲಿಯ ಮುಸ್ಲಿಮರು ಬಾಯಿ ಬಿಡಬೇಕು. ಇಲ್ಲಿಯ ಮುಸ್ಲಿಮರು ಈ ಬಗ್ಗೆ ಫತ್ವಾ ಹೊರಡಿಸಲಿ, ನಿಮ್ಮ ಮೌನ ಸರಿಯಲ್ಲ, ನೀವು ಸುಮ್ಮನಿದ್ದರೆ ನೀವು ಅದಕ್ಕೆ ಸಮ್ಮತಿ ನೀಡಿದ ಹಾಗೆ ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದ್ರು.
Advertisement
Advertisement
ಇಲ್ಲಿಯ ಮುಸ್ಲಿಮರು ಬಾಯಿ ಬಿಡದಿದ್ದರೆ ಹಿಂದೂ ಸಂಘಟನೆಗಳು ಆ ಕಲ್ಲುಗಳನ್ನ ಈ ಕಡೆ ತಿರುಗಿಸಬೇಕಾಗುತ್ತೆ ಎಂದು ವಿವಾದಾತ್ಮಕ ಹೇಳಿಕೆಯನ್ನು ಮುತಾಲಿಕ್ ನೀಡಿದರು.
Advertisement
ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ತೆಲಂಗಾಣ ಸರ್ಕಾರದ ಬಗ್ಗೆ ಹೇಳಿಕೆ ನೀಡಿದ್ದು ಎಲ್ಲೊ ಒಂದು ಕಡೆ ನಿಜವಾಗಿರಬೇಕು. ಇದು ಕೇಂದ್ರ ಸರ್ಕಾರ ತನಿಖೆ ನಡೆಸಬೇಕು. ಜಗತ್ತಿನಲ್ಲಿ ಸಿಗದೇ ಇರುವ ಸವಲತ್ತು ತೆಲಂಗಾಣ ಸರ್ಕಾರ ಮುಸ್ಲಿಮರಿಗೆ ನೀಡುತ್ತಿದೆ. ಇದೇ ವೇಳೆ ದೇಶದ ಸೈನಿಕರ ಶಿರಚ್ಛೇದ ಮಾಡಿದ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಮುತಾಲಿಕ್ ಆಗ್ರಹಿಸಿದರು.
Advertisement