ದರ್ಶನ್ (Darshan) ನಟನೆಯ ‘ಡೆವಿಲ್’ (Devil) ಸಿನಿಮಾದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ‘ಡೆವಿಲ್’ ಚಿತ್ರದ ಟೀಸರ್ ರಿಲೀಸ್ ಆಗಲಿದೆ ಎಂದು ಸ್ವತಃ ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:ರಕ್ಷಿತಾ ಸಹೋದರನ ಆರತಕ್ಷತೆ: ಕಪ್ಪು ಸೀರೆಯಲ್ಲಿ ಕಂಗೊಳಿಸಿದ ರಮ್ಯಾ
ಇದೇ ಫೆ.16ರಂದು ದರ್ಶನ್ 47ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ‘ಡೆವಿಲ್’ ಚಿತ್ರದ ಟೀಸರ್ ಆಗಲಿದೆ. ನಮ್ಮ ಹೊಸ ಪ್ರಯತ್ನದ ಹಾರಿವು ಶೀಘ್ರದಲ್ಲೇ ನಿಮ್ಮ ಮುಂದೆ ಎಂದು ‘ಡೆವಿಲ್’ ಪೋಸ್ಟರ್ ಶೇರ್ ಮಾಡಿ ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಇನ್ನೂ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆಗುವ ಮುನ್ನ ‘ಡೆವಿಲ್’ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಆ ವೇಳೆ, ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆ ಆಗಿತ್ತು. ಬೇಲ್ ಮೇಲೆ ಹೊರಬಂದ ಬಳಿಕ ಸಿನಿಮಾದ ಡಬ್ಬಿಂಗ್ ಕೆಲಸದಲ್ಲಿ ದರ್ಶನ್ ಭಾಗಿಯಾಗಿದ್ದರು. ಒಟ್ನಲ್ಲಿ ನಾನಾ ಕಾರಣಗಳಿಂದ ಡೆವಿಲ್ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.