ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ತಂದೆ ಮತ್ತು ತಾಯಿಯನ್ನು ಕಳೆದುಕೊಂಡಿದ್ದಾರೆ. ಒಂದೂವರೆ ತಿಂಗಳ ಹಿಂದೆಯಷ್ಟೇ ತಾಯಿ ಇಂದಿರಾ ದೇವಿಯನ್ನು ಮಹೇಶ್ ಬಾಬು ಕಳೆದುಕೊಂಡಿದ್ದರು. ಆ ದುಃಖದಲ್ಲೇ ಇನ್ನೂ ಇರುವಾಗ ಇದೀಗ ತಂದೆ ಕೃಷ್ಣ ಅವರನ್ನೂ ಕಳೆದುಕೊಂಡಿದ್ದಾರೆ. ನಿಜಕ್ಕೂ ಇದು ಆ ಕುಟುಂಬಕ್ಕೆ ಅರಗಿಸಿಕೊಳ್ಳಲಾಗದ ಸಂಗತಿ.
ಕೃಷ್ಣ ಅವರಿಗೆ ಇಂದಿರಾ ದೇವಿ ಎರಡನೇ ಹೆಂಡತಿ. ಈ ದಂಪತಿಯ ಪುತ್ರ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು. ತಂದೆಯ ನೆರಳಿನಲ್ಲೇ ಬೆಳೆದು ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಮಹೇಶ್ ಬಾಬು. ತಂದೆ ತಾಯಿಯ ನೆಚ್ಚಿನ ಮಗನಾಗಿದ್ದ ಮಹೇಶ್ ಬಾಬು, ಅಪ್ಪನನ್ನು ನೆನಪಿಸುವಂತಹ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಪ್ಪ ಅಮ್ಮನನ್ನು ಉಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟರು ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ಹಾಗಾಗಿ ಇಬ್ಬರನ್ನೂ ಒಂದೂವರೆ ತಿಂಗಳ ಅಂತರದಲ್ಲಿ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಮಗನ ಮುದ್ದಾದ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ
ಮಹೇಶ್ ಬಾಬು ಕುಟುಂಬದಲ್ಲಿ ಈ ವರ್ಷ ಸೂತಕದ ವರ್ಷವೆಂದೇ ಹೇಳಬಹುದು. ಜನವರಿಯಲ್ಲಿ ಕೃಷ್ಣ ಅವರ ಹಿರಿಯ ಮಗ ರಮೇಶ್ ಬಾಬು ನಿಧನಹೊಂದಿದ್ದರೆ, ಎರಡು ತಿಂಗಳ ಹಿಂದೆಯಷ್ಟೇ ಕೃಷ್ಣ ಅವರ ಎರಡನೇ ಪತ್ನಿ ಇಂದಿರಾ ದೇವಿ ಇಹಲೋಕ ತ್ಯಜಿಸಿದ್ದಾರೆ. ಮೊದಲನೇ ಹೆಂಡತಿ ವಿಜಯ ನಿರ್ಮಲಾ ನಾಲ್ಕು ವರ್ಷಗಳ ಹಿಂದೆ ಬಾರದ ಲೋಕಕ್ಕೆ ಹೋಗಿದ್ದಾರೆ. ಇದೀಗ ಕೃಷ್ಣ ಕೂಡ ಕಣ್ಮರೆಯಾಗಿದ್ದಾರೆ.