ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾದಲ್ಲಿ ‘ನಿಮಗೆ ಅತೀ ಮೈ ಜುಮ್ಮೆನಿಸಿದ ದೃಶ್ಯ ಯಾವುದು?’ ಎಂದು ಕೇಳಿದರೆ, ಸಡನ್ನಾಗಿ ತಾಯಿ ಸಮಾಧಿಯನ್ನು ಶಿಫ್ಟ್ ಮಾಡುವ ದೃಶ್ಯ ಕಣ್ಮುಂದೆ ಬರದೇ ಇರದು. ಹುಟ್ಟೂರಿನಲ್ಲಿದ್ದ ತಾಯಿ ಸಮಾಧಿಯನ್ನು ರಾಕಿಭಾಯ್ ಭಾರದ ಮನಸ್ಸಿನಿಂದಲೇ ಕೆಜಿಎಫ್ ಗೆ ಶಿಫ್ಟ್ ಮಾಡುತ್ತಾನೆ. ಇಂಥದ್ದೊಂದು ಕಲ್ಪನೆ ನಿಜಕ್ಕೂ ಸಿನಿಮಾವನ್ನು ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತದೆ. ಈ ದೃಶ್ಯದ ಹಿಂದಿದೆ ಅಸಲಿ ಕಹಾನಿ. ಇದನ್ನೂ ಓದಿ : ವಿಜಯ್ ದುನಿಯಾದಲ್ಲಿ ‘ಭೀಮ’ ಎಂಟ್ರಿ : ನಟಿ ಮಾಲಾಶ್ರೀ ಬಳಿ ಇತ್ತು ಭೀಮ ಟೈಟಲ್
Advertisement
ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಇಂಥದ್ದೊಂದು ದೃಶ್ಯ ಹೆಣೆಯಲು ಕಾರಣವೇನು ಎಂಬ ಪ್ರಶ್ನೆಗೆ ಅವರೊಂದು ಕಥೆ ಬಿಚ್ಚಿಟ್ಟಿದ್ದಾರೆ. ಅದು ಕೇವಲ ಕಥೆಯಲ್ಲ, ಕಾಲ್ಪನಿಕ ದೃಶ್ಯವೂ ಅಲ್ಲ. ತನ್ನದೇ ಕುಟುಂಬದಲ್ಲಿ ನಡೆದ ಒಂದು ಘಟನೆಯನ್ನು ಅವರು ಭಾವುಕರಾಗಿಯೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಕನ್ನಡದಲ್ಲೂ ಬಂತು ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ
Advertisement
Advertisement
ಪ್ರಶಾಂತ್ ನೀಲ್ ಇವತ್ತು ಈ ಮಟ್ಟಿಗೆ ಬೆಳೆದಿದ್ದಾರೆ ಅಂರೆ, ಅದಕ್ಕೆ ತಂದೆ ತಾಯಿಯ ಪರಿಶ್ರಮದ ಜತೆಗೆ ಅಜ್ಜಿಯ ಆರೈಕೆಯೂ ಇದೆ. ಪ್ರಶಾಂತ್ ಅವರನ್ನು ಮುದ್ದಿನಿಂದ ಬೆಳೆಸಿದ್ದು ಅವರ ಅಜ್ಜಿ. ಆ ಅಜ್ಜಿ ಇದ್ದದ್ದು ಆಂಧ್ರ ಪ್ರದೇಶದ ಹುಟ್ಟೂರಲ್ಲಿ. ಈ ಅಜ್ಜಿ ನಿಧನರಾದಾಗ ಅಲ್ಲಿಯೇ ಅವರನ್ನು ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ತಮ್ಮ ಸ್ವಂತ ಜಾಗದಲ್ಲಿ ಅಂತ್ಯಕ್ರಿಯೆ ಮಾಡಲು ಪ್ರಶಾಂತ್ ಅವರ ಬಳಿ ಏನೂ ಇರಲಿಲ್ಲವಂತೆ. ಇದನ್ನೂ ಓದಿ : ಮಗನೊಂದಿಗೆ ನಿಖಿಲ್ ಕುಮಾರ್ ಸ್ವಾಮಿ ಜಾಲಿ ಟ್ರೀಪ್
Advertisement
ಈ ಕುರಿತು ಮಾತನಾಡಿರುವ ಅವರು, ‘ಅಜ್ಜಿ ನಿಧನರಾದಾಗ ನಮ್ಮ ಬಳಿ ಏನೂ ಇರಲಿಲ್ಲ. ಹಾಗಾಗಿ ಸ್ಮಶಾನದಲ್ಲೇ ಅವರ ಅಂತ್ಯಕ್ರಿಯೆ ಮಾಡಲಾಯಿತು. ಈಗ ನನ್ನ ಬಳಿ ಎಲ್ಲವೂ ಇದೆ. ಒಂದೊಂದ ಸಲ ಅನಿಸುತ್ತದೆ. ಅಜ್ಜಿ ಸಮಾಧಿಯನ್ನು ಸ್ಥಳಾಂತರಿಸಿ ನನ್ನ ಮನೆಯ ಹತ್ತಿರದಲ್ಲೇ ಇಟ್ಟುಕೊಳ್ಳೋಣ ಅಂತ. ನನಗೆ ಅನಿಸಿದ್ದನ್ನು ಕೆಜಿಎಫ್ 2 ಸಿನಿಮಾದಲ್ಲಿ ಬಳಸಿದೆ. ಹಾಗಾಗಿ ತಾಯಿಯ ಸಮಾಧಿಯನ್ನು ಶಿಫ್ಟ್ ಮಾಡುವ ದೃಶ್ಯವನ್ನು ಎಲ್ಲರನ್ನೂ ಕಾಡಿದೆ’ ಎಂದಿದ್ದಾರೆ ಪ್ರಶಾಂತ್ ನೀಲ್.