Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಭಾರತದಲ್ಲಿ ‘ಕಮಲ’ ಅರಳಿ ನಿಂತ ಕಥೆ

Public TV
Last updated: June 9, 2024 11:21 pm
Public TV
Share
9 Min Read
BJP
SHARE

ವೇದ-ಉಪನಿಷತ್‌, ರಾಮಾಯಣ-ಮಹಾಭಾರತ ಕಾಲದಲ್ಲಿ ಭರತಖಂಡಕ್ಕೆ ಸರಿಸಾಟಿಯಾದ ರಾಷ್ಟ್ರ ಉದಯಿಸಿರಲೇ ಇಲ್ಲ. ಕಾಲಾನಂತರ ಪರದೇಶಿಗಳ ದಾಳಿಗೆ ಭಾರತದ ಅಸ್ತಿತ್ವದ ಕುರುಹು ಮರೆಯಾಗಿತ್ತು. ಘಜ್ನಿ, ಘೋರಿ ಮಹಮ್ಮದ್‌, ಗ್ರೀಕರು, ಡಚ್ಚರು, ಫ್ರೆಂಚರು, ಪೋರ್ಚುಗೀರು, ಬ್ರಿಟಿಷರ ದಾಳಿಯಿಂದಾಗಿ ಈ ನೆಲದ ಅಸ್ತಿತ್ವ ಕಾಲಗರ್ಭದಲ್ಲಿ ಹೂತುಹೋಗಿತ್ತು. ಪರಕೀಯರ ಆಡಳಿತದಿಂದ ಭಾರತೀಯರು ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೆ ಬಲಿಯಾದರು. ತಾಯಿ ನೆಲದ ಸಂಸ್ಕೃತಿ ಮರೆತು ಸಾಗಿದರು. ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಆಂಗ್ಲರ ಆಡಳಿತದ ಶೈಲಿಯ ಬಿಗಿ ಹಿಡಿತದಿಂದ ಯಾವ ಪಕ್ಷಗಳೂ ಹೊರಬರಲು ಸಾಧ್ಯವಾಗಲಿಲ್ಲ. ಇಂತಹ ಹೊತ್ತಿನಲ್ಲಿ ಈ ನೆಲದ ಇತಿಹಾಸ, ಸಂಸ್ಕೃತಿ, ಅಸ್ತಿತ್ವವನ್ನು ಪುನಸ್ಥಾಪಿಸುವ ಪಕ್ಷವೊಂದು ಕೋಟ್ಯಂತರ ಭಾರತೀಯರಿಗೆ ಬೇಕಿತ್ತು. ಆ ಆಶಯದೊಂದಿಗೆ ಹುಟ್ಟಿದ ಪಕ್ಷ ಬಿಜೆಪಿ.

ಸ್ವತಂತ್ರ ಭಾರತದಲ್ಲಿ ದಶಕಗಳ ಕಾಲ ಏಕೈಕ ಪಕ್ಷವಾಗಿ ಆಡಳಿತ ನಡೆಸಿದ್ದ ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ಹಲವು ಪಕ್ಷಗಳು ಹುಟ್ಟಿಕೊಂಡವು. ಅದರಲ್ಲಿ ಬಿಜೆಪಿ ಕೂಡ ಒಂದು. ಪ್ರಖರ ಹಿಂದುತ್ವದ ಪ್ರತಿಪಾದನೆ, ಅಭಿವೃದ್ಧಿ ಚಿಂತನೆ, ವಂಶಪಾರಂಪರ್ಯ ವಿರೋಧಿ ನೆಲೆಯಲ್ಲಿ ಹುಟ್ಟಿದ ಬಿಜೆಪಿ ಭಾರತೀಯರಿಗೆ ಭರವಸೆಯ ಬೆಳಕಾಗಿ ಕಂಡಿತು. ಈಗಿನ ಬಿಜೆಪಿಯ ಮೂಲ ರೂಪ ಭಾರತೀಯ ಜನಸಂಘ. ಇವೆರಡನ್ನೂ ನಡೆಸಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS). ಜನಸಂಘವನ್ನು ಬಿಟ್ಟು ಬಿಜೆಪಿ (BJP) ಹುಟ್ಟು, ಬೆಳವಣಿಗೆ ಕುರಿತು ಮಾತನಾಡಲು ಸಾಧ್ಯವೇ ಇಲ್ಲ. ಇದನ್ನೂ ಓದಿ: ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೋದಿ

jana sangh bjp

ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಜನಪ್ರಿಯ ನಾಯಕತ್ವ, ಎಲ್.ಕೆ.ಅಡ್ವಾಣಿ (L.K.Advani) ಅವರ ಸಾಮೂಹಿಕ ಆಂದೋಲನದ ಹೆಜ್ಜೆ ಗುರುತು, ಪ್ರಖರ ರಾಷ್ಟ್ರವಾದ, ತೀಕ್ಷ್ಣ ಹಿಂದುತ್ವ, ಅಭಿವೃದ್ಧಿ, ಕಾಂಗ್ರೆಸ್ ಪಕ್ಷದ ದಶಕಗಳ ಆಡಳಿತ, ಪ್ರಾದೇಶಿಕ ಪಕ್ಷಗಳೊಂದಿಗಿನ ಬುದ್ದಿವಂತಿಕೆಯ ಮೈತ್ರಿಕೂಟ, ನರೇಂದ್ರ ಮೋದಿ ಅವರ ವರ್ಚಸ್ಸು.. ಎಲ್ಲದರ ಸಮ್ಮಿಶ್ರಣ ಬಿಜೆಪಿಯನ್ನು ತಳಮಟ್ಟದಿಂದ ಯಶಸ್ಸಿನ ತುತ್ತತುದಿಗೆ ತಲುಪಿಸಿದೆ. ಸ್ವತಂತ್ರ ಭಾರತದಲ್ಲಿ ಬಿಜೆಪಿ ಬೆಳೆದುಬಂದ ಹಾದಿಯೇ ರೋಚಕ.

ಆಡಳಿತ ವಿರೋಧಿ ಅಲೆಯಲ್ಲಿ ಹುಟ್ಟಿದ ಜನಸಂಘ
ಭಾರತೀಯ ಜನಸಂಘ ಹುಟ್ಟಿದ್ದು 1952 ರ ಅಕ್ಟೋಬರ್ 21 ರಂದು. ಕಾಂಗ್ರೆಸ್‌ನ ಜವಾಹರಲಾಲ್ ನೆಹರೂ ಸಂಪುಟದಿಂದ ಹೊರಬಿದ್ದ ನಂತರ ಪಂಡಿತ್ ಶ್ಯಾಮಪ್ರಸಾದ್ ಮುಖರ್ಜಿ, ಆರ್‌ಎಸ್‌ಎಸ್ ಹುಟ್ಟುಹಾಕಿದ ಜನಸಂಘದ ಸಂಸ್ಥಾಪನಾ ಅಧ್ಯಕ್ಷರಾದರು. 1953 ರಲ್ಲಿ ಮುಖರ್ಜಿ ಮರಣದ ವರೆಗೆ ಜನಸಂಘ ಸ್ವಾತಂತ್ರ್ಯವುಳ್ಳ ಸ್ವಾಯತ್ತ ಪಕ್ಷವೇ ಆಗಿತ್ತು. ಆದರೆ ಪಕ್ಷವನ್ನು ಆರ್‌ಎಸ್‌ಎಸ್ ಹಿಡಿತದಿಂದ ಬಿಡಿಸುವ ಹೋರಾಟ ನಡೆಸಿದವರು ಮುಖರ್ಜಿ ನಂತರ ಬಂದ ಹೊಸ ಅಧ್ಯಕ್ಷ ಮೌಳಿಚಂದ್ರ ಶರ್ಮ. ಕೊನೆಗೆ ಶರ್ಮ ಅವರೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು. ಇದನ್ನೂ ಓದಿ: 4 ಬಾರಿ ಸಿಎಂ, 6 ಬಾರಿ ಸಂಸದ – ಮಧ್ಯಪ್ರದೇಶದ ಮಾಮಾ ಈಗ ಕೇಂದ್ರ ಸಚಿವ

atal bihari vajpayee

ಜನಸಂಘದ ಸಾರಥಿಯಾದ ವಾಜಪೇಯಿ
ಜನಸಂಘ ಉತ್ತರ ಪ್ರದೇಶದಲ್ಲಿ ಪ್ರಬಲವಾಗಿ ಬೆಳೆಯುತ್ತಾ ಹೋಯಿತು. ಬ್ರಾಹ್ಮಣ-ಬನಿಯಾ ಪಕ್ಷ ಎಂದೇ ಆಗಿನ ಕಾಲದಲ್ಲಿ ಬಿಂಬಿತವಾಗಿತ್ತು. ಈ ವರ್ಚಸ್ಸಿನಿಂದ ಹೊರಬರಲು ಜನಸಂಘ ಸಾಕಷ್ಟು ದೂರ ಕ್ರಮಿಸಬೇಕಾಯಿತು. ಪಂಡಿತ ದೀನದಯಾಳ ಉಪಾಧ್ಯಾಯರ ಮರಣ ನಂತರ ಜನಸಂಘದ ಹೊಣೆಗಾರಿಕೆ 1968 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬಂತು. ಕಾಂಗ್ರೆಸ್ ವಿರುದ್ಧ ಪಕ್ಷದ ಪ್ರಾಬಲ್ಯ ಹೆಚ್ಚಿಸುವಲ್ಲಿ ನಾನಾಜಿ ದೇಶಮುಖ್, ಎಲ್.ಕೆ.ಅಡ್ವಾಣಿ, ಬಲರಾಜ್ ಮಧೋಕ್ ಅವರು ವಾಜಪೇಯಿ ಜೊತೆ ಸಾಥ್ ನೀಡಿದ್ದರು. ಇವರೆಲ್ಲರೂ ಪಕ್ಷವನ್ನು ಜನರ ಬಳಿ ಕೊಂಡೊಯ್ಯಲು ಅಕ್ಷರಶಃ ಹೆಣಗಾಡಿದ್ದರು.

ಜನಮನಗೆದ್ದ ಜನಸಂಘ
ಜನಸಂಘ (Bharatiya Jana Sangha) ಹುಟ್ಟಿದ ಒಂದೇ ವರ್ಷದಲ್ಲಿ (1952) ನಡೆದ ಲೋಕಸಭಾ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆದ್ದಿತ್ತು. 1957 ರಲ್ಲಿ 4 ಸ್ಥಾನ, 1962 ರಲ್ಲಿ 14 ಸ್ಥಾನಗಳು, 1967 ರಲ್ಲಿ 35 ಹಾಗೂ 1971 ರಲ್ಲಿ 22 ಸ್ಥಾನಗಳನ್ನು ಜಯಿಸಿತ್ತು.

Atal and Advani

ಉದಯ ಸೂರ್ಯ ಜನತಾ ಪಕ್ಷ
1975ರ ಸಂದರ್ಭದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿದ್ದರು. 1977ರ ವರೆಗೂ ಎಮರ್ಜೆನ್ಸಿಯ ಕರಾಳತೆಯಲ್ಲಿ ಜನ ಬದುಕು ನಡೆಸುವಂತಾಯಿತು. ಆಗ ಪ್ರತಿಪಕ್ಷಗಳು ಒಂದಾಗಿ ಜನತಾ ಪಕ್ಷ ಉದಯಿಸಿತು. ಭಾರತೀಯ ಜನಸಂಘ ಈ ಹೊಸ ಪಕ್ಷದಲ್ಲಿ ವಿಲೀನಗೊಂಡಿತು. ಆರ್‌ಎಸ್‌ಎಸ್ ಮತ್ತು ಜನತಾ ಪಕ್ಷದ ಸದಸ್ಯತ್ವವನ್ನು ಏಕಕಾಲಕ್ಕೆ ಹೊಂದುವಂತಿಲ್ಲ ಎಂಬ ದ್ವಿಸದಸ್ಯತ್ವ ವಿವಾದದಿಂದಾಗಿ ಜನಸಂಘ ಮತ್ತೆ ಜನತಾ ಪಕ್ಷದಿಂದ ಹೊರಬಂತು. ಇದನ್ನೂ ಓದಿ: ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪ್ರಲ್ಹಾದ್ ಜೋಶಿ

ಅರಳಿತು ಕಮಲ
ಹಳೆಯ ಜನಸಂಘವೇ 1980 ರ ಏಪ್ರಿಲ್ 5 ರಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಎಂದು ಬದಲಾಯಿತು. ರಾಷ್ಟ್ರವಾದ, ಜನತಂತ್ರ, ಮೌಲ್ಯಾಧಾರಿತ ರಾಜಕಾರಣವನ್ನು ಬಿಜೆಪಿ ಪ್ರತಿಪಾದಿಸಿತು. ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ದೇಶದಲ್ಲಿ ಕಾಂಗ್ರೆಸ್ ಪರವಾದ ಸಹಾನುಭೂತಿ ಬಿರುಗಾಳಿ ಬೀಸಿತ್ತು. 1984 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 404 ಸ್ಥಾನಗಳನ್ನು ಜಯಿಸಿ ಇತಿಹಾಸ ಬರೆಯಿತು. ಆಗ ಇಡೀ ದೇಶದಲ್ಲಿ ಬಿಜೆಪಿ ಗೆದ್ದಿದ್ದು ಕೇವಲ ಎರಡೇ ಎರಡು ಸ್ಥಾನ. ಎ.ಕೆ.ಪಟೇಲ್ ಮತ್ತು ಚೆಂದುಪಾಟ್ಲ ಜಂಗಾ ರೆಡ್ಡಿ ಹೆಸರಿನ ಇಬ್ಬರು ಸದಸ್ಯರು ಗೆಲುವು ಸಾಧಿಸಿದ್ದರು. ಬಿಜೆಪಿಯ ಎರಡು ಸ್ಥಾನಗಳ ಗೆಲುವನ್ನು ‘ನಾವಿಬ್ಬರು ನಮಗಿಬ್ಬರು’ ಎಂದು ಆಗಿನ ಪ್ರಧಾನಿ ರಾಜೀವ್‌ ಗಾಂಧಿ ಲೇವಡಿ ಮಾಡಿದ್ದೂ ಉಂಟು.

ram mandir babri mosque

ಬಾಬ್ರಿ ಮಸೀದಿ ರಾಜಕೀಯ ಅಸ್ತ್ರ
ಭಾರತದಲ್ಲಿ ಬಿಜೆಪಿ ರಾಜಕೀಯವಾಗಿ ಬೆಳೆಯಲು ಸಿಕ್ಕ ದಿವ್ಯಾಸ್ತ್ರ ಅಯೋಧ್ಯೆ (Ayodhya) ರಾಮಜನ್ಮಭೂಮಿ. 1986ರ ಜನವರಿ 31 ರಂದು ಬಾಬ್ರಿ ಮಸೀದಿ ಆವರಣದ ಗೇಟುಗಳ ಬೀಗ ತೆರೆಯಲಾಯಿತು. ಅದಾದ ಕೆಲ ತಿಂಗಳಲ್ಲೇ ಇತ್ತ ಎಲ್.ಕೆ.ಅಡ್ವಾಣಿ ಬಿಜೆಪಿ ಅಧ್ಯಕ್ಷರಾದರು. ಬಿಜೆಪಿಗೆ ರಾಜಕೀಯವಾಗಿ ಭದ್ರಬುನಾದಿ ಹಾಕುವ ಜವಾಬ್ದಾರಿ ಅಡ್ವಾಣಿ ಮೇಲಿತ್ತು. ಶತಮಾನಗಳ ಹಿಂದೆ ಆಕ್ರಮಣಕಾರಿ ದಾಳಿಗೆ ತುತ್ತಾಗಿ ಕಾಲಗರ್ಭದಲ್ಲಿ ಮರೆಯಾಗಿದ್ದ ಹಿಂದೂ ಪವಿತ್ರ ಸ್ಥಳಗಳನ್ನು ಮರಳಿ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಅದಾಗಲೇ ವಿಶ್ವ ಹಿಂದೂ ಪರಿಷತ್ ಆಂದೋಲನ ನಡೆಸುತ್ತಿತ್ತು. ಅದರ ಜೊತೆ ಬಿಜೆಪಿ ಕೂಡ ಸೇರಿಕೊಂಡಿತು.

ಮಂದಿರವಲ್ಲೇ ಕಟ್ಟುವೆವು ಆಂದೋಲನ
ಹಿಂದಿನ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಬಿಜೆಪಿ ತಲೆ ಎತ್ತಿ ನಿಲ್ಲಲು ‘ಹಿಂದುತ್ವ’ದ ಅಸ್ತ್ರ ಪ್ರಯೋಗಿಸಿತು. ನಿರೀಕ್ಷೆಯಂತೆ ಬಿಜೆಪಿ ಪ್ರಬಲವಾಗಿ ಬೆಳೆಯಲು ಇದು ಸಹಕಾರಿಯಾಯಿತು. ಬಾಬ್ರಿ ಮಸೀದಿ ಇರುವ ಜಾಗದಲ್ಲಿ ರಾಮಮಂದಿರ (Ram Mandir) ನಿರ್ಮಾಣದ ವಿಚಾರವನ್ನು ಚುನಾವಣೆ ವಿಷಯವಾಗಿ ಅಡ್ವಾಣಿ ಬಳಸಿಕೊಂಡರು. ಅದಾಗಲೇ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಹಗರಣಗಳ ಅಪವಾದದ ಸುಳಿಯಲ್ಲಿ ಸಿಲುಕಿದ್ದರು. ಇದು ಕೂಡ ಬಿಜೆಪಿಗೆ ವರದಾನವಾಯಿತು. ದೇಶದಲ್ಲಿ ಎರಡನೇ ಕಾಂಗ್ರೆಸ್ಸೇತರ ಸರ್ಕಾರ ತರಲು ಅಡ್ವಾಣಿ ಮತ್ತು ವಾಜಪೇಯಿ ಜೋಡೆತ್ತುಗಳಂತೆ ಶ್ರಮಿಸಿದರು. ಇದನ್ನೂ ಓದಿ: ನೆಹರೂ ದಾಖಲೆ ಸರಿಗಟ್ಟಿದ ಮೋದಿ – ಪ್ರಮಾಣವಚನದಲ್ಲಿ ʼನಮೋʼ ಧರಿಸಿದ್ದ ಉಡುಗೆ ವಿಶೇಷತೆ ಏನು?

Advani Rath yatra 5

2 ರಿಂದ 85.. ಬಿಜೆಪಿ ಮಹಾಜಿಗಿತ
1989ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ 85 ಸ್ಥಾನಗಳನ್ನು ಗೆದ್ದಿತು. 2 ರಿಂದ ದಿಢೀರ್ ಅಂತಾ 85 ಸ್ಥಾನಗಳಿಗೆ ಮಹಾಜಿಗಿತ ಕಂಡಿದ್ದು ನಿಜಕ್ಕೂ ಅಸಾಧಾರಣವೇ ಸರಿ. ಕಾಂಗ್ರೆಸ್ ಹಗರಣಗಳ ವಿರುದ್ಧ ಬಂಡಾಯವೆದ್ದು ವಿ.ಪಿ.ಸಿಂಗ್ ಗುಂಪು ಪಕ್ಷದಿಂದ ಚುನಾವಣೆ ಎದುರಿಸಿತ್ತು. ಬಳಿಕ ವಿ.ಪಿ.ಸಿಂಗ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ ಬಿಜೆಪಿ ಬಾಹ್ಯ ಬೆಂಬಲ ಘೋಷಿಸಿತ್ತು. ವಿ.ಪಿ.ಸಿಂಗ್ ಆಡಳಿತದಲ್ಲಿ ಜಾರಿಯಾದ ಹಿಂದುಳಿದ ವರ್ಗಗಳಿಗೆ 27% ಮೀಸಲಾತಿ ಕಲ್ಪಿಸುವ ಮಂಡಲ ಆಯೋಗದ ವರದಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿತು. ಇದೇ ಹೊತ್ತಿನಲ್ಲಿ ಬಿಜೆಪಿಯ ರಾಮರಥ ಯಾತ್ರೆಯನ್ನು ಬಿಹಾರ ಸಿಎಂ ಲಾಲು ಪ್ರಸಾದ್ ಸರ್ಕಾರ ತಡೆದು ಅಡ್ವಾಣಿ ಅವರನ್ನು ಬಂಧಿಸಿತು. ಆಗ ವಿ.ಪಿ.ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್ ತೆಗೆದುಕೊಂಡಿತು. ಈ ಸಂದರ್ಭದಲ್ಲಿ ರಚನೆಯಾದ ಚಂದ್ರಶೇಖರ್ ಅವರ ಸರ್ಕಾರ ಕೂಡ ಬಹುಬೇಗ ಪತನವಾಯಿತು. ನಂತರ 1991 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಸೀಟುಗಳ ಸಂಖ್ಯೆಯನ್ನು 85 ರಿಂದ 120 ಕ್ಕೆ ಹೆಚ್ಚಿಸಿಕೊಂಡಿತು.

1992ರ ಡಿಸೆಂಬರ್‌ನಲ್ಲಿ ಬಾಬ್ರಿ ಮಸೀದಿ ಧ್ವಂಸವಾಗಿದ್ದು ಬಿಜೆಪಿ ರಾಜಕೀಯ ದಿಕ್ಕನ್ನೇ ಬದಲಾಯಿಸಿತು. ಆಗಿನ ಸಂದರ್ಭದಲ್ಲಿ ‘ಮಂದಿರವಲ್ಲೇ ಕಟ್ಟುವೆವು’ ಆಂದೋಲನ ಮನೆ ಮಾತಾಗಿತ್ತು. 1996ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 161 ಸ್ಥಾನಗಳನ್ನು ಗೆದ್ದಿತು. 1998 ರಲ್ಲಿ 182 ಕ್ಕೆ ಏರಿತು. 1999 ರಲ್ಲಿ ಅಷ್ಟೇ ಸ್ಥಾನಗಳನ್ನು ಗೆದ್ದಿತು. ಆಗ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ರಚನೆಯಾಯಿತು. ತಮ್ಮ ಆಡಳಿತಾವಧಿಯಲ್ಲಿ ವಾಜಪೇಯಿ ಅವರು ದೇಶವನ್ನು ಯಶಸ್ವಿಯಾಗಿಯೇ ಮುನ್ನಡೆಸಿದರು. ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡು ಜನಪ್ರಿಯ ನಾಯಕನಾಗಿ ಗುರುತಿಸಿಕೊಂಡರು. ಇದನ್ನೂ ಓದಿ: ಮೋದಿ ಸಂಪುಟಕ್ಕೆ ಮೂರನೇ ಬಾರಿಗೆ ಆಯ್ಕೆಯಾದ ಏಕೈಕ ಮಹಿಳೆ ನಿರ್ಮಲಾ ಸೀತಾರಾಮನ್

Narendra Modi Oath Taking 2

ಭಾರತದಲ್ಲಿ ಮೋದಿ ಮೋಡಿ
2004 ರಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ ಒಂದು ದಶಕದ ಕಾಲ ಮೇಲೇಳಲೇ ಇಲ್ಲ. ಅಡ್ವಾಣಿ ಆಡಳಿತ ಅವಧಿಯಲ್ಲಿ ಗುಜರಾತ್‌ನಲ್ಲಿ ದುರ್ಘಟನೆಯೊಂದು ನಡೆಯಿತು. 2002ರ ಫೆಬ್ರವರಿಯಲ್ಲಿ ಅಯೋಧ್ಯೆಯಿಂದ ಮರಳುತ್ತಿದ್ದ ರೈಲುಗಾಡಿಗೆ ಗೋಧ್ರಾದಲ್ಲಿ ಬೆಂಕಿ ಬಿದ್ದು, 58 ಮಂದಿ ಕರಸೇವಕರು ಸುಟ್ಟು ಕರಕಲಾಗಿದ್ದರು. ಪರಿಣಾಮವಾಗಿ ಗುಜರಾತ್ ಹೊತ್ತಿ ಉರಿಯಿತು. ಗೋಧ್ರಾ ಹತ್ಯಾಕಂಡಕ್ಕೂ ಕಾರಣವಾಯಿತು. ಮುಸಲ್ಮಾನರ ಮೇಲೆ ನಡೆದ ದಾಳಿಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟರು. ಅಂದಿನ ನರೇಂದ್ರ ಮೋದಿ (Narendra Modi) ರಾಜ್ಯ ಸರ್ಕಾರ ಟೀಕೆಗೆ ಗುರಿಯಾಯಿತು. ನ್ಯಾಯಾಲಯದಲ್ಲಿ ಪ್ರಕರಣವನ್ನು ಎದುರಿಸಿದ ಮೋದಿ ಆಪಾದನೆಯಿಂದ ಮುಕ್ತರಾದರು. ಆ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು.

ಪ್ರಖರ ಹಿಂದುತ್ವವಾದ, ಅಭಿವೃದ್ಧಿ ಕಾರ್ಯ, ಗುಜರಾತ್‌ ಮಾದರಿ, ಜನರನ್ನು ಸೆಳೆಯುವ ವಾಕ್ಚಾತುರ್ಯ, ರಾಮರಥ ಯಾತ್ರೆಯು ಮೋದಿ ಅವರ ವರ್ಚಸ್ಸನ್ನು ಹೆಚ್ಚಿಸಿತು. ಬಿಜೆಪಿ ತನ್ನ ನೆಲೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಇದು ನೆರವಾಯಿತು. 2004-2014ರ ವರೆಗಿನ ಕಾಂಗ್ರೆಸ್ ಆಡಳಿತದಲ್ಲಿ ಭಾರತ ಆರ್ಥಿಕ ಕ್ರಾಂತಿ ಮಾಡಿತ್ತು. ಇದರ ಜೊತೆಗೆ ಹಗರಣಗಳ ಆರೋಪಗಳೂ ಕೇಳಿಬಂದವು. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿ ಅವರ ಕೈಗೊಂಬೆ ಎಂದು ಸಹ ಬಿಂಬಿಸಲಾಗಿತ್ತು. ಇದೆಲ್ಲದರ ನಡುವೆ ಹೊಸ ಭರವಸೆಯ ಆಶಾಕಿರಣದಂತೆ ಜನರ ಮುಂದೆ ಕಾಣಿಸಿಕೊಂಡವರು ಮೋದಿ. ಚುನಾವಣಾ ಚಾಣಕ್ಯ ಎಂದೇ ಹೆಸರಾದ ಅಮಿತ್ ಶಾ ಜೊತೆಗೂಡಿ ಸ್ವತಂತ್ರವಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಮೋದಿ ಯಶಸ್ವಿಯಾದರು.

Narendra Modi Amit Shah

ಬಿಜೆಪಿ ಆಡಳಿತ ಯಾತ್ರೆ
2014 ಬಿಜೆಪಿ ರಾಜಕೀಯ ಯಾತ್ರೆಗೆ ತಿರುವು ನೀಡಿದ ವರ್ಷ. ಆಗಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ದಿಲ್ಲಿ ಗದ್ದುಗೆ ಏರಿದರು. ತಳಮಟ್ಟದಲ್ಲೂ ಪಕ್ಷದ ನೆಲೆ ವಿಸ್ತರಿಸುವಲ್ಲೂ ಮೋದಿ ಯಶಸ್ವಿಯಾದರು. ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಕಾರಣರಾದರು. ಅಮಿತ್ ಶಾ ಜೊತೆಗೂಡಿ ದೇಶದ ಉದ್ದಗಲಕ್ಕೂ ಸಂಚರಿಸಿ ಬಿಜೆಪಿ ಹೆಜ್ಜೆ ಗುರುತನ್ನು ವಿಸ್ತರಿಸಿದರು. ರಾಜ್ಯಗಳಲ್ಲಿ ಸಾಲು ಸಾಲು ಗೆಲುವಿನ ಶ್ರೇಯ ಕೂಡ ಮೋದಿ ಅವರಿಗೇ ಸಲ್ಲಬೇಕು. 2014 ರಲ್ಲಿ ಕಮಲದ ಗುರುತು 282 ಸ್ಥಾನಗಳನ್ನು ಗೆದ್ದಿತು. 2019 ರಲ್ಲಿ ದಕ್ಕಿದ್ದು 303 ಸ್ಥಾನ. ಇಂದಿರಾ ಗಾಂಧಿ ಹತ್ಯೆ ಬಳಿಕ ಸಹಾನುಭೂತಿ ನೆಲೆಯಲ್ಲಿ 1984 ರಲ್ಲಿ ಕಾಂಗ್ರೆಸ್‌ಗೆ ಅತಿ ದೊಡ್ಡ ಜನಾದೇಶ ಸಿಕ್ಕಿತ್ತು. ರಾಜೀವ್ ಗಾಂಧಿ ನೇತೃತ್ವದಲ್ಲಿ ಹಸ್ತ 404 ಸ್ಥಾನಗಳನ್ನು ಗೆದ್ದಿತ್ತು. ಅದಾದ ಬಳಿಕ ಭಾರಿ ಅಂತರದ ಜನಾದೇಶ ಸಿಕ್ಕಿದ್ದು ಮೋದಿ ನೇತೃತ್ವದ ಬಿಜೆಪಿಗೆ. ಇದನ್ನೂ ಓದಿ: ಕೇಂದ್ರ ಸಚಿವರಾಗಿ ಕರ್ನಾಟಕದ ನಾಲ್ವರು ಪ್ರಮಾಣವಚನ ಸ್ವೀಕಾರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಒಂದು ದಶಕದ ಮೋದಿ ನೇತೃತ್ವದ ಬಿಜೆಪಿ ಏಕಚಕ್ರಾಧಿಪತ್ಯಕ್ಕೂ ಈಗ ಜನ ಬ್ರೇಕ್‌ ಹಾಕಿದ್ದಾರೆ. 2024ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಜನ ಬಹುಪರಾಕ್‌ ಹೇಳಿದ್ದಾರೆ. ‘ತೀಸ್ರಿ ಬಾರ್‌ ಮೋದಿ ಸರ್ಕಾರ್’ಗೆ ವೇದಿಕೆ ಸಜ್ಜಾಗಿದೆ. ಭಾರತದ ಆಡಳಿತದ ಇತಿಹಾಸದಲ್ಲಿ ಜವಾಹರಲಾಲ್‌ ನೆಹರೂ ಬಿಟ್ಟರೇ ಸತತ ಮೂರನೇ ಅವಧಿಗೆ ಆಡಳಿತ ನಡೆಸಿದ ಪ್ರಧಾನಿ ಎಂಬ ಖ್ಯಾತಿಗೆ ಮೋದಿ ಪಾತ್ರರಾಗಿದ್ದಾರೆ.

BS Yediyurappa 1

ಕರ್ನಾಟಕದಲ್ಲಿ ಬಿಜೆಪಿ ಹೆಜ್ಜೆ ಗುರುತು
ಕರುನಾಡಿನಲ್ಲಿ ಬಿಜೆಪಿಗೆ ರಾಜಕೀಯ ಅಸ್ತಿತ್ವ ಸಿಕ್ಕಿದ್ದು 1983ರಲ್ಲಿ. ಅದು ಜನತಾ ಪಕ್ಷ ಸರ್ಕಾರದ ದಿನಗಳಾಗಿದ್ದವು. ನಂತರ ಬಿಜೆಪಿ 1991 ರಲ್ಲಿ ರಾಜ್ಯದಲ್ಲಿ 4 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಬೇರುಗಳನ್ನು ವಿಸ್ತರಿಸಿಕೊಂಡಿತು.

ಈ ಅವಧಿಯಲ್ಲಿ ಜನತಾಪಕ್ಷ-ಜನತಾದಳವು ಪತನದ ಹಾದಿ ಹಿಡಿದವು. ಆ ಜಾಗವನ್ನು ಬಿಜೆಪಿ ತುಂಬಿತು. 1998 ರಲ್ಲಿ 13 ಸ್ಥಾನಗಳನ್ನು ಗೆದ್ದು ಬಿಜೆಪಿ ರಾಜ್ಯದಲ್ಲೂ ತನ್ನ ಪ್ರಾಬಲ್ಯ ಮೆರೆಯಿತು. 1999 ರಲ್ಲಿ ಕಮಲ ಮುದುರಿ ಮತ್ತೆ ಅರಳಿ ನಿಂತು ನಳನಳಿಸುತ್ತಿದೆ. 2004ರ ಬಳಿಕ ಬಿಜೆಪಿ ಆರ್ಭಟಕ್ಕೆ ಇತರೆ ಪಕ್ಷಗಳು ನೆಲಕಚ್ಚಿ ಹೋಗಿದ್ದು ರಾಜಕೀಯ ಚರಿತ್ರೆಯ ಪುಟ್ಟದಲ್ಲಿ ದಾಖಲಾಗಿದೆ. ಇದನ್ನೂ ಓದಿ: ಮೋದಿ ಸಂಪುಟಕ್ಕೆ ಜೆಪಿ ನಡ್ಡಾ

ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆಗೆ ಕರೆ ನೀಡಿದರೆ 200 ಜನ ಸೇರುವುದೂ ದುಸ್ತರವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿದ್ದ ಬಿಜೆಪಿಗೆ ರಾಜ್ಯದಲ್ಲಿ ಭದ್ರಬುನಾದಿ ಹಾಕಿದ ಶ್ರೇಯಸ್ಸು ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಬೇಕು.

ಬಿಜೆಪಿ ಬೆಳೆದು ಬಂದ ಹಾದಿ
1982 – 2
1989 – 85
1991 – 120
1996 – 161
1998 – 182
1999 – 182
2004 – 138
2009 – 116
2014 – 282
2019 – 303
2024 – 240

TAGGED:Bharatiya Jana SanghBharatiya Janata PartybjpModi cabinetnarendra modirssಆರ್‍ಎಸ್‍ಎಸ್ಜನಸಂಘನರೇಂದ್ರ ಮೋದಿಬಿಜೆಪಿ
Share This Article
Facebook Whatsapp Whatsapp Telegram

Cinema Updates

Harshika Poonacha Bhuvan Ponnanna toured 3 countries with Tridevi 1
ತ್ರೀದೇವಿ ಜೊತೆ 3 ದೇಶ ಸುತ್ತಿದ ಹರ್ಷಿಕಾ, ಭುವನ್
Cinema Latest Sandalwood
Darshan Thailand
ಥಾಯ್ಲೆಂಡ್‌ನಿಂದ ದರ್ಶನ್ ವಾಪಸ್ ಬರೋ ದಿನಾಂಕ ಫಿಕ್ಸ್
Cinema Latest Sandalwood Top Stories
B Saroja Devi
ಜು.25 ರಂದು 11ನೇ ದಿನದ ಕಾರ್ಯ – ಗಣ್ಯರಿಂದ ಸರೋಜಾದೇವಿ ಸ್ಮರಣೆ
Cinema Latest
Yash mother
ಪ್ರೊಡಕ್ಷನ್‌ಗೆ ನನ್ನ ಮಗನೇ ಸ್ಫೂರ್ತಿ – ಯಶ್‌ ತಾಯಿ ಮಾತು
Cinema Latest Sandalwood Top Stories
Vijay Devarakonda
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿಜಯ್ ದೇವರಕೊಂಡ
Cinema Latest Top Stories

You Might Also Like

India vs England 4th Test Day 1 India Suffer Huge Rishabh Pant Blow Reach 264 4
Cricket

ಜೈಸ್ವಾಲ್‌, ಸುದರ್ಶನ್‌ ಅರ್ಧಶತಕ – ಗಾಯಗೊಂಡು ಕಣ್ಣೀರು ಹಾಕುತ್ತಾ ಹೊರ ಹೋದ ಪಂತ್‌

Public TV
By Public TV
6 hours ago
Kadugodi andhra murder
Bengaluru City

ಆಂಧ್ರದಲ್ಲಿ ಬೆಂಗಳೂರಿನ ಉದ್ಯಮಿಗಳ ಅಪಹರಿಸಿ ಕೊಲೆ

Public TV
By Public TV
6 hours ago
ಸಾಂದರ್ಭಿಕ ಚಿತ್ರ
Latest

ಟೇಕಾಫ್ ವೇಳೆ ಅಹಮದಾಬಾದ್-ದಿಯು ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ಬೆಂಕಿ – ಹಾರಾಟ ಸ್ಥಗಿತ

Public TV
By Public TV
7 hours ago
IPS Soumyalatha
Bengaluru City

ಧರ್ಮಸ್ಥಳ ಹೂತಿಟ್ಟ ಶವ ಕೇಸ್‌- ಓರ್ವ ಐಪಿಎಸ್ ಅಧಿಕಾರಿಯನ್ನು ಕೈಬಿಡಲು ಸರ್ಕಾರಕ್ಕೆ ಶಿಫಾರಸು

Public TV
By Public TV
7 hours ago
AI ಚಿತ್ರ
Dakshina Kannada

ಉಡುಪಿ, ಮಂಗಳೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ

Public TV
By Public TV
7 hours ago
Narendra Modi and Chinese President Xi Jinping
Latest

5 ವರ್ಷದ ಬಳಿಕ ಚೀನಿಯರಿಗೆ ಭಾರತ ಪ್ರವಾಸಕ್ಕೆ ಅನುಮತಿ

Public TV
By Public TV
7 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?