ನವದೆಹಲಿ: ಅಜ್ಜಿಯೊಬ್ಬರು ತಮ್ಮ ಒಂದು ಸಣ್ಣ ಸಮಸ್ಯೆ ಪರಿಹಾರಕ್ಕಾಗಿ ದೆಹಲಿಗೆ ಹೋಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂದೆ ಗ್ರಾಮದ ಮುನಿಯಮ್ಮ ಎಂಬವರು ತಮ್ಮ ಸಮಸ್ಯೆಯನ್ನು ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದಾರೆ. ಮುನಿಯಮ್ಮ ಅವರಿಗೆ ಸರ್ಕಾರ ವಿವಾದಿತ ಭೂಮಿಯನ್ನು ಮಂಜೂರು ಮಾಡಿತ್ತು. ಇದರಿಂದ ಬೇಸತ್ತಿದ್ದ ಮುನಿಯಮ್ಮ ಸಾಕಷ್ಟು ಬಾರಿ ಸಮಸ್ಯೆಯನ್ನು ಬಗೆಹರಿಸುವಂತೆ ಸಿಎಂ ಬಳಿ ಹೋಗಲು ಪ್ರಯತ್ನ ಪಟ್ಟಿದ್ರು. ಆದರೆ ಸಿಎಂ ಮಾತ್ರ ಸಿಕ್ಕಿರಲಿಲ್ಲ.
Advertisement
ಮುನಿಯಮ್ಮ ಸಿಎಂ ದೆಹಲಿಗೆ ಹೋಗೋದನ್ನು ತಿಳಿದುಕೂಂಡು ತಾವು ದೆಹಲಿಯ ರೈಲು ಹತ್ತಿದ್ದಾರೆ. ಇವತ್ತು ದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ಸಿದ್ದಾರಾಮಯ್ಯರನ್ನು ಭೇಟಿ ಮಾಡಿ ಸಮಸ್ಯೆಯನ್ನು ತೋಡಿಕೂಂಡಿದ್ದಾರೆ. ತಕ್ಷಣ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗೆ ಫೋನ್ ಮಾಡಿ ಅಜ್ಜಿಯ ಸಮಸ್ಯೆಯನ್ನು ಬಗೆಹರಿಸುವಂತೆ ಹೇಳಿದ್ದಾರೆ. ಸಿಎಂ ಮಾತು ಕೇಳಿ ಅಜ್ಜಿಯ ಕಣ್ಣಲ್ಲಿ ನೀರು ಹರಿದು ಬಂತು.
Advertisement
ನಂತರ ಮುಖ್ಯಮಂತ್ರಿಗಳು ಖುದ್ದಾಗಿ ಅಜ್ಜಿಗೆ ಕರ್ನಾಟಕ ಭವನದಲ್ಲಿ ಊಟ ಮಾಡಿಸಿ. ಟ್ರೈನ್‍ಗೆ ಟಿಕೆಟ್‍ಗೆ ಹಣವನ್ನು ನೀಡಿದ್ದಾರೆ. ಅದ್ರೆ ಒಂದು ಸಣ್ಣ ಸಮಸ್ಯೆ ಬಗೆಹರಿಸಿಕೂಳ್ಳಲು ಬಡಪಾಯಿ ಜನ್ರು ದೆಹಲಿಗೆ ಹೋಗೋ ಕಾಲ ಬಂದಿದೆ.
Advertisement