ವಿಶ್ವದಲ್ಲಿ ಅತ್ಯಂತ ದುಬಾರಿ ಮನೆಗಳನ್ನು ಸಾಕಷ್ಟು ನೋಡಿದ್ದೇವೆ. ಆದ್ರೆ ಅತ್ಯಂತ ಚಿಕ್ಕದಾದ, ಕಡಿಮೆ ವೆಚ್ಚದಲ್ಲಿ ಚಿತ್ತ-ವಿಚಿತ್ರವಾಗಿ ನಿರ್ಮಾಣಗೊಂಡಿರುವ ಮನೆಗಳ ಬಗ್ಗೆ ನೀವು ಕೇಳಿದ್ದೀರಾ? ಗುಡ್ಡದ ಮೇಲೆ, ಹಳೆಯ ವಿಮಾನಗಳ ಒಳಗೆ, ನೆಲದೊಳಗೆ, ಗುಹೆಗಳ ಒಳಗೆ ನಿರ್ಮಾಣವಾಗುವ ಮನೆಗಳನ್ನ ನೋಡಿದ್ದೀರಾ? ಅಂಕುಡೊಂಕಾಗಿ, ತಲೆಕೆಳಗಾಗಿ, ಭೂತ-ಪ್ರೇತಗಳ ವಾಸಸ್ಥಾನಗಳಂತೆ ಕಾಣುವ ಮನೆಗಳನ್ನ ಕಂಡಿದ್ದೀರಾ? ಹೌದು ಅಂತಹ ಮನೆಗಳೂ ವಿಶ್ವದಲ್ಲಿ ಅಲ್ಲಿಲ್ಲಿ ಇವೆ. ಅವುಗಳಲ್ಲಿ ದಕ್ಷಿಣ ವಿಯೇಟ್ನಾಮ್‌ನ ದಲಾತ್ ಪರ್ವತ ವಿಹಾರಧಾಮದಲ್ಲಿರುವ ವಿಚಿತ್ರ ಮನೆಯ (Dalat’s Crazy House) ಬಗ್ಗೆ ಇಲ್ಲಿ ನೋಡೋಣ…
ಹೌದು. ದಕ್ಷಿಣ ವಿಯೆಟ್ನಾಂನ (South Vietnam) ದಲಾತ್ ಎಂಬ ಪರ್ವತೀಯ ವಿಹಾರಧಾಮದಲ್ಲಿ ಒಂದು ವಿಚಿತ್ರ, ಅಷ್ಟಾವಕ್ರ ಮನೆ ನಿರ್ಮಾಣಗೊಂಡಿದೆ. ನೋಡೋದಕ್ಕೆ ಇದು ಪ್ರವಾಸಿ ಮಂದಿರದಂತೆ ಕಂಡರೂ ಅಲ್ಲಿನ ಜನ ಇದನ್ನು ʻಹುಚ್ಚು ಮನೆʼ ಎಂದೇ ಕರೆಯುತ್ತಾರೆ.
Advertisement
Advertisement
ಈ ಮನೆಯನ್ನು ನಿರ್ಮಿಸಿದ್ದು ವಿಯೆಟ್ನಾಂ ಕಮ್ಯುನಿಸ್ಟ್ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಟ್ರೂಂಗ್ ಚಿನ್ಹ್ ಅವರ ಮಗಳು ಡ್ಯಾಂಗ್ ವಿಯೆಟ್ ನ್ಗಾ. ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಈಕೆಗೆ ಎಲ್ಲಿಲ್ಲದ ಆಸಕ್ತಿ. ಪ್ರಸ್ತುತ 79 ವರ್ಷದ ಡ್ಯಾಂಗ್ ವಿಯೆಟ್ ನ್ಗಾ ರಷ್ಯಾದ ಮಾಸ್ಕೋದಲ್ಲಿ ವಾಸ್ತುಶಿಲ್ಪ ಶಾಸ್ತ್ರದಲ್ಲಿ ಪಿಹೆಚ್‌ಡಿ ಪದವಿ ಪಡೆದು ರಷ್ಯಾದಲ್ಲಿ ಕೆಲಸ ಮಾಡಿದ್ದರು. ನಂತರ ಹಾನೋಯ್‌ಗೆ ಬಂದು ಸರ್ಕಾರಿ ಯೋಜನೆಗಳಲ್ಲಿ ಕೆಲಸ ಮಾಡಿದ್ದರು.
Advertisement
ಒಮ್ಮೆ ದಲಾತ್ ಗೆ ಹೋಗಿದ್ದಾಗ ಅಲ್ಲಿನ ವಾಸ್ತು ಸೌಂದರ್ಯಕ್ಕೆ ಮಾರುಹೋಗಿ, ಅಲ್ಲೊಂದು ಮನೆ ಕಟ್ಟಲೇಬೇಕು ಎಂದು ನಿರ್ಧರಿಸಿದರು. ಡ್ಯಾಂಗ್ ವಿಯೆಟ್ ನ್ಗಾ ಚಿಕ್ಕವಯಸ್ಸಿನಿಂದಲೇ ರಾಜಕುಮಾರ-ರಾಜಕುಮಾರಿಯರ ಅಜ್ಜಿ ಕಥೆಗಳನ್ನು ಕೇಳಿ ಅದಕ್ಕೆ ತಕ್ಕಂತೆ ಒಂದು ಮನೆ ಕಟ್ಟಬೇಕೆಂದು ಬಯಸಿದ್ದರು. ಎಲ್ಲ ಕಟ್ಟಡಗಳಂತೆ ಇದಕ್ಕೊಂದು ವಿನ್ಯಾಸ ರಚಿಸುವ ಬದಲು ತನ್ನ ಕಲ್ಪನೆಯ ಮನೆಯ ಕಲಾಕೃತಿಗಳನ್ನು ರಚಿಸಲು ಮುಂದಾದರು. ಕೊನೆಗೆ ಅದಕ್ಕೊಂದು ರೂಪಕೊಟ್ಟು ಕಾಂಕ್ರೀಟ್ ಕಟ್ಟಡದೊಂದಿಗೆ ಸಹಕಾರಗೊಳಿಸಿದರು.
Advertisement
ಅಷ್ಟಾವಕ್ರ ಮನೆ ಹೇಗಿದೆ?
ವಿಯೇಟ್ನಾಂನಲ್ಲಿ ನಿರ್ಮಾಣಗೊಂಡಿರುವ ಈ ಮನೆ ಯಾವುದೋ ಭಯಾನಕ ಸ್ವಪ್ನದ ಕಲ್ಪನೆಯಂತೆ ಕಾಣಿಸಿಸುತ್ತದೆ. ಈ ಮನೆಯಲ್ಲಿ ಯಾವುದೇ ನೇರ ಗೆರೆಗಳಿಲ್ಲ. ಅಣಬೆ, ಚಿಪ್ಪು, ಶಂಖ, ಗುಹೆ ಮತ್ತು ಜೇಡರ ಬಲೆಗಳ ವಿನ್ಯಾಸವನ್ನು ಬಳಸಲಾಗಿದೆ.
ಮನೆಯ ಸುತ್ತ ಕಾಂಕ್ರೀಟಿನ ಗೆಲ್ಲುಗಳು (ಹುಲ್ಲಿನಂತೆ ಕಾಣುವ ವಿನ್ಯಾಸ) ಹರಡಿವೆ. ಈ ಗೆಲ್ಲುಗಳ ಸುತ್ತ ಯದ್ವಾತದ್ವಾ ನಿರ್ಮಾಣವಾಗಿದ್ದ ಈ ಮನೆಯನ್ನು ಖರೀದಿಸಲಾಗಲಿ, ವಾಸಕ್ಕಾಗಲಿ ಯಾರೂ ಬರಲಿಲ್ಲ. ಹಾಗಾಗಿ ಡ್ಯಾಂಗ್ ವಿಯೆಟ್ ನ್ಗಾ ಇದನ್ನೊಂದು ಗೆಸ್ಟ್ ಹೌಸ್‌ನಂತೆ ನಡೆಸುತ್ತಿದ್ದಾರೆ. ಈ ವಿಚಿತ್ರ ಮನೆಯನ್ನು ನೋಡಲು ಸಾಕಷ್ಟು ಪ್ರವಾಸಿಗಳು ಬರುತ್ತಾರೆ.
ಗೂಡು ಸೇರುತ್ತಲೇ ಇದೇ:
ಡ್ಯಾಂಗ್ ವಿಯೆಟ್ ನ್ಗಾ ಇಂದಿಗೂ ಈ ಮನೆಗೆ ಹೊಸ ಹೊಸ ಕೋಣೆಗಳನ್ನು ವಿನ್ಯಾಸ ಮತ್ತು ಕಾಂಕ್ರೀಟು ಕಟ್ಟಡಗಳನ್ನು ಸೇರಿಸುತ್ತಲೇ ಇದ್ದಾರೆ. ನನ್ನ ಮನೆ ಯಾವತ್ತೂ ಮುಗಿಯುವುದಿಲ್ಲ. ಇದೊಂದು ಜೀವಂತ ವಸ್ತುವಿನಂತೆ. ಇದರ ಸ್ವರೂಪ ಬದಲಾಗುತ್ತಲೇ ಇರುತ್ತದೆ ಅಂತಲೂ ಹೇಳಿಕೊಂಡಿದ್ದಾರೆ. ಅಲ್ಲದೇ ಮನೆಯ ಸುತ್ತ ಪ್ರಾಕೃತಿಕ ಸೌಂದರ್ಯ ಹೆಚ್ಚಿಸಲು ಎರಡು ಉದ್ಯಾನಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.