ಬೆಂಗಳೂರು: ಶಾಸ್ತ್ರದ ಪ್ರಕಾರ ವಿಶ್ವಕರ್ಮ ಜನಾಂಗದವರೇ ದೇವರ ಪ್ರತಿಮೆ ಕೆತ್ತಬೇಕು ಎಂದು ಸಾಂಪ್ರದಾಯಿಕ ಶಿಲ್ಪ ಕಲಾ ಕೇಂದ್ರ ಪ್ರಾಧ್ಯಾಪಕ ಡಾ. ಜ್ಞಾನನಂದ ಹೇಳಿದ್ದಾರೆ.
ರಾಜ್ಯದಲ್ಲಿ ಧರ್ಮ ದಂಗಲ್ ಜೋರಾಗಿ ಸದ್ದು ಮಾಡುತ್ತಿದೆ. ಮುಸ್ಲಿಮರು ತಯಾರಿಸಿದ ವಿಗ್ರಹವನ್ನು ಹಿಂದೂಗಳು ತೆಗೆದುಕೊಳ್ಳಬಾರದು ಅಂತಾ ಮೇಲುಕೋಟೆಯ ಸ್ಥಾನಿಕರ ಹೇಳಿಕೆ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಇದಕ್ಕೆ ಪರ ವಿರೋಧ ಚರ್ಚೆಗಳು ಜೋರಾಗಿದೆ. ಇದನ್ನೂ ಓದಿ: ಮುಸ್ಲಿಮರಿಂದ ಕೆತ್ತಿದ ಮೂರ್ತಿ ಪೂಜೆಗೆ ಯೋಗ್ಯವಲ್ಲ: ಆಂದೋಲಾ ಶ್ರೀ
Advertisement
Advertisement
ಈ ಮಧ್ಯೆ ಬೆಂಗಳೂರಿನ ಮಲತ್ತಹಳ್ಳಿಯಲ್ಲಿರುವ ಸಾಂಪ್ರಾದಾಯಿಕ ಶಿಲ್ಪ ಗುರುಕುಲದ ಪ್ರಾಧ್ಯಪಕ ಡಾ ಜ್ಞಾನನಂದ ಶಾಸ್ತ್ರ ದ ಪ್ರಕಾರ ವಿಶ್ವ ಕರ್ಮರೇ ವಿಗ್ರಹ ಕೆತ್ತನೆ ಮಾಡಬೇಕು ಅಂತಾ ಹೇಳುತ್ತೆ. ಆದರೆ ಈಗ ಎಲ್ಲವೂ ಬದಲಾಗಿದೆ. ವಿಗ್ರಹ ಕೆತ್ತನೆ ವ್ಯವಹಾರಿಕ ಮಾತ್ರವಲ್ಲ. ಅದೊಂದು ಅನುಷ್ಠಾನದ ರೀತಿ ಮಾಡಬೇಕು ಎಂದು ವಿವರಿಸಿದರು.
Advertisement
Advertisement
48 ದಿನಗಳ ಕಾಲ ನಿರಂತರ ಆಯಾಯ ದೇವರ ಶ್ಲೋಕ ಪಠಣೆ, ಸಂಧ್ಯಾವಂದನೆಯನ್ನು ಮಾಡಬೇಕು ಅಂತಾ ಹೇಳಿದ್ರು. ಆದ್ರೇ ಆದುನಿಕ ಕಾಲದಲ್ಲಿ ಇದೆಲ್ಲವೂ ಮಾಯವಾಗಿದೆ ಅಂತಾ ಅವರು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುತ್ತಿವೆ, ಇದಕ್ಕೆ ಸರ್ಕಾರ ಹೊಣೆ ಅಲ್ಲ: ಮುನಿರತ್ನ