ಬೆಂಗಳೂರು: ಪಬ್ಲಿಕ್ ಟಿವಿ (Public Tv) ಪ್ರಸ್ತುತ ಪಡಿಸುತ್ತಿರುವ ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳವಾದ ವಿದ್ಯಾಪೀಠ (Vidyapeeta) 6ನೇ ಆವೃತ್ತಿಗೆ ಇಂದು (ಶನಿವಾರ) ಚಾಲನೆ ಸಿಗಲಿದೆ.
ಜೂನ್ 3 ಮತ್ತು 4ಕ್ಕೆ ಬೆಂಗಳೂರಿನ (Bengaluru) ಅರಮನೆ ಮೈದಾನದ (Palace Ground) ಗಾಯತ್ರಿ ವಿಹಾರ್‌ನಲ್ಲಿ (Gayathri Vihar) ಈ ಎಜುಕೇಶನ್ ಎಕ್ಸ್‌ಪೋ (Education Expo) ಆರಂಭಿಸಲಾಗಿದೆ. 105ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಈ ಮೇಳದಲ್ಲಿ ಭಾಗಿಯಾಗಲಿವೆ. ಶನಿವಾರ ಬೆಳಗ್ಗೆ 10 ಗಂಟೆಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಮತ್ತು ಅತಿಥಿಗಳಿಂದ ಶೈಕ್ಷಣಿಕ ಮೇಳ ಉದ್ಘಾಟನೆಗೊಳ್ಳಲಿದೆ. ಬಳಿಕ ಸ್ಟಾಲ್‌ಗಳ ವೀಕ್ಷಣೆ ನಡೆಯಲಿದ್ದು, ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: ಇಂದು, ನಾಳೆ 2 ದಿನ ಪಬ್ಲಿಕ್ ಟಿವಿ ‘ವಿದ್ಯಾಪೀಠʼ – ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ
ವೇದಿಕೆ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಮ್.ಸಿ ಸುಧಾಕರ್, ರೇವಾ ಯುನಿವರ್ಸಿಟಿ ಕುಲಪತಿಗಳಾದ ಶ್ಯಾಮರಾಜು, ಗಾರ್ಡನ್ ಸಿಟಿ ಯುನಿವರ್ಸಿಟಿ ಕುಲಪತಿಗಳಾದ ಡಾ. ವಿ.ಜಿ ಜೋಸೆಫ್, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್ಸ್ಟಿಟೂಷನ್ಸ್ ಅಧ್ಯಕ್ಷರಾದ ಡಿ.ಕೆ.ಮೋಹನ್, ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸ್ಟಿಟೂಷನ್ಸ್ ಅಧ್ಯಕ್ಷರಾದ ರಾಜೀವ್ ಗೌಡ ಉಪಸ್ಥಿತರಿರಲಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ, On Spot ಗಿಫ್ಟ್ ಪಡ್ಕೊಳ್ಳಿ..!