ಮಂಗಳೂರು: ಸ್ವಂತ ಮನೆ ಹೊಂದುವ ಆಸೆಯನ್ನು ಈಡೇರಿಸದ ರಾಜ್ಯ ಸರ್ಕಾರದ ಬಗ್ಗೆ ಸಾಲುಮರದ ತಿಮ್ಮಕ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ವನ ಸಂರಕ್ಷಣಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂರಾರು ಮರಗಳನ್ನು ನೆಟ್ಟು ಬೆಳೆಸಿ ಸರ್ಕಾರಕ್ಕೆ ಬಿಟ್ಟು ಕೊಟ್ಟಿದ್ದೇನೆ. ಆದರೆ ನನ್ನ ಕಷ್ಟ ಮಾತ್ರ ಸರ್ಕಾರದ ಕಣ್ಣಿಗೆ ಬಿದ್ದೇ ಇಲ್ಲ. ಸಿದ್ದರಾಮಯ್ಯರಿಗೆ ಎಷ್ಟೋ ಬಾರಿ ತಿಳಿಸುವ ಪ್ರಯತ್ನ ಮಾಡಿದ್ರೂ ಸ್ಪಂದಿಸಿಲ್ಲ. ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದು ಕಷ್ಟ ಪಡುತ್ತಿದ್ದೇನೆ ಎಂದು ತಿಳಿಸಿದರು.
Advertisement
ಬಡವರ ಬಗ್ಗೆ ಸರ್ಕಾರಕ್ಕಿರುವ ಕಾಳಜಿ ಇದುವೇನಾ ಅಂತಾ ಪ್ರಶ್ನೆ ಮಾಡಿದರು. ಕಷ್ಟಕ್ಕೆ ಸ್ಪಂದಿಸುವಂತೆ ಸಿಎಂ ಕುಮಾರಸ್ವಾಮಿಯನ್ನು ತಿಮ್ಮಕ್ಕ ಬೇಡಿಕೊಂಡಿದ್ದಾರೆ. ಬಳಿಕ ಎರಡು ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.