ಹಾಸನ: ಕುಡಿಯಲು ಹಣ ನೀಡದ ಕಾರಣಕ್ಕೆ ಮನಬಂದಂತೆ ಥಳಿಸಿ ತಾಯಿಯನ್ನೇ ಮಗ ಕೊಂದಿರುವ ಘಟನೆ ಹಾಸನ (Hassan) ಜಿಲ್ಲೆ, ಅರಕಲಗೂಡು ತಾಲ್ಲೂಕಿನ, ಮಧುರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮ್ಮ (61) ಪುತ್ರನಿಂದಲೇ ಕೊಲೆಯಾದ ದುರ್ದೈವಿ ತಾಯಿ. ಭರತ್ (26) ತಾಯಿಯನ್ನು ಕೊಂದ ಮಗ. ಇದನ್ನೂ ಓದಿ: ಸಿಎಂರನ್ನು ಜಿಲ್ಲಾ ಮಟ್ಟದ ಅಧಿಕಾರಿ ವಿಚಾರಣೆ ಮಾಡಲು ಸಾಧ್ಯನಾ?: ಬಿಜೆಪಿ ಶಾಸಕ ಶ್ರೀವತ್ಸ
ಕುಡಿತದ ದಾಸನಾಗಿದ್ದ ಭರತ್ ಪೈಂಟ್ ಕೆಲಸ ಮಾಡುತ್ತಿದ್ದ. ಈತ ಅ.29ರಂದು ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದು, ತಾಯಿ ಚಿಕ್ಕಮ್ಮ ಬಳಿ ಕುಡಿಯಲು ಹಣ ನೀಡುವಂತೆ ಒತ್ತಾಯಿಸಿದ್ದನು. ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಭರತ್ ಕೋಪಗೊಂಡು ಚಿಕ್ಕಮ್ಮನಿಗೆ ದೊಣ್ಣೆಯಿಂದ ಹೊಡೆದು, ತಲೆಯನ್ನು ಗೋಡೆಗೆ ಬಡಿದು ಪರಾರಿಯಾಗಿದ್ದಾನೆ. ಹಲ್ಲೆಗೊಳಗಾಗಿ ಚಿಕ್ಕಮ್ಮ ಕುಸಿದು ಬಿದ್ದಿರುವುದನ್ನು ಗ್ರಾಮಸ್ಥರು ಕಂಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ (Mysuru) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಚಿಕ್ಕಮ್ಮ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ; 10 ರಾಜ್ಯಗಳಲ್ಲಿ ಟ್ರಂಪ್ ಮುನ್ನಡೆ
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರಾಜ್ಯಕ್ಕೆ ಎಂಟ್ರಿಯಾಗ್ತಿದೆ ಕೇರಳ ತ್ಯಾಜ್ಯ – ವಾಹನಗಳನ್ನು ಹಿಡಿದ ಗಡಿಜಿಲ್ಲೆಯ ಜನರು