ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಹತ್ಯೆಗೆ ಕಳೆದ ವರ್ಷವೇ ಸ್ಕೆಚ್ ಹಾಕಲಾಗಿತ್ತು, ಅದೊಂದು ದೊಡ್ಡ ಮಟ್ಟದ ಪ್ರಯತ್ನವೂ ಆಗಿತ್ತು ಎಂದು ಸಿಧು ಮೂಸೆವಾಲಾ ಕೊಲೆ ಪ್ರಕರಣದ ಆರೋಪಿ, ಸದ್ಯ ಬಂಧಿತನಾಗಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಪೊಲೀಸ್ ವಿಚಾರಣೆ ವೇಳೆ ಲಾರೆನ್ಸ್, ‘ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು 2021ರಲ್ಲಿ ವಿಫಲ ಪ್ರಯತ್ನವಾಗಿದೆ’ ಎಂದು ಸ್ಫೋಟಕ ಮಾಹಿತಿ ನೀಡಿದ್ದಾನೆ.
Advertisement
ಲಾರೆನ್ಸ್ ಈ ಹಿಂದೆ ಜೈಲಿನಲ್ಲಿದ್ದಾಗಲೂ ತನ್ನ ಗ್ಯಾಂಗ್ ಮೂಲಕ ಕೊಲೆ ಮಾಡಿಸುವ ಪ್ರಯತ್ನ ಮಾಡಿದ್ದರಂತೆ. ಸಲ್ಮಾನ್ ಕೊಲ್ಲಲು ಇವರಿಗೆ ರಾಜಸ್ಥಾನದ ದರೋಡೆಕೋರ ಸಂಪತ್ ನೆಹ್ರಾ ಎನ್ನುವವರು ಸುಫಾರಿ ಕೊಟ್ಟಿದ್ದರಂತೆ. ಹಾಗಾಗಿ ಲಾರೆನ್ಸ್ ಗಾಗಿ ಸಲ್ಮಾನ್ ಮನೆ ಸುತ್ತಮುತ್ತ ಸೂಕ್ತ ಸ್ಥಳದ ಹುಡುಕಾಟ ಕೂಡ ಮಾಡಿದ್ದರಂತೆ. ಇದನ್ನು ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ
Advertisement
Advertisement
ಆಗ ಸಂಪತ್ ಬಳಿ ಪಿಸ್ತೂಲ್ ಮಾತ್ರ ಇತ್ತು. ದೂರದಿಂದ ಗುರಿಯಿಟ್ಟು ಹೊಡೆಯುವುದು ಅಸಾಧ್ಯವಾಗಿತ್ತು. ಹಾಗಾಗಿ ಅನಿಲ್ ಪಾಂಡ್ಯ ಎನ್ನುವ ವ್ಯಕ್ತಿಯಿಂದ ನಾಲ್ಕು ಲಕ್ಷ ರೂಪಾಯಿ ಕೊಟ್ಟು ಆರ್.ಕೆ ಸ್ಟ್ರಿಂಗ್ ರೈಫಲ್ ಅನ್ನು ಖರೀದಿಸಿ ಕೊಟ್ಟಿದ್ದರಂತೆ ಸಂಪತ್ ನೆಹ್ರಾ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ
Advertisement
ಇವೆಲ್ಲ ವಿಚಾರಗಳು ಹೊರಬೀಳುತ್ತಿದ್ದಂತೆಯೇ ಮತ್ತು ನಿನ್ನೆ ಸಲ್ಮಾನ್ ಖಾನ್ ಮತ್ತು ಅವರ ತಂದೆಗೆ ಬೆದರಿಕೆಯ ಪತ್ರಗಳು ಬಂದು ಹಿನ್ನೆಲೆಯಲ್ಲಿ ಖಾನ್ ಕುಟುಂಬಕ್ಕೆ ಭಾರೀ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆಯಂತೆ. ಸಲ್ಮಾನ್ ಖಾನ್ ಮನೆ ಮತ್ತು ಅವರಿಗೆ ಸೂಕ್ತ ಭದ್ರತೆ ನೀಡಿರುವುದಾಗಿ ಮಹಾರಾಷ್ಟ್ರ ಸರಕಾರ ಹೇಳಿದೆ.