ಏಪ್ರಿಲ್ ಕೊನೆಯ ವಾರದಲ್ಲಿ ‘ಫಾದರ್’ ಚಿತ್ರದ ಶೂಟಿಂಗ್ ಶುರು

Public TV
1 Min Read
Father

ನ್ನಡದ ಹೆಸರಾಂತ ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು (R. Chandru) ಕಳೆದ ತಿಂಗಳವಷ್ಟೇ ಐದು ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಮೊದಲ ಚಿತ್ರವಾಗಿ ಫಾದರ್ (Father) ಸೆಟ್ಟೇರಲಿದೆ. ಏಪ್ರಿಲ್ ತಿಂಗಳ ಕೊನೆಯಲ್ಲಿ ವಾರದಿಂದ ಚಿತ್ರೀಕರಣವನ್ನು (Shooting) ಆರಂಭಿಸುವುದಾಗಿ ಚಿತ್ರತಂಡ ಹೇಳಿದೆ. ಆರಂಭವಾಗಲಿರುವ ಈ ಚಿತ್ರದಲ್ಲಿ ಹೆಸರಾಂತ ತಾರಾ ಬಳಗವೇ ಇದೆ.

Father 1

ಡಾರ್ಲಿಂಗ್ ಕೃಷ್ಣ (Darling Krishna) ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದರೆ, ತಂದೆಯ ಪಾತ್ರದಲ್ಲಿ ಹೆಸರಾಂತ ನಟ ಪ್ರಕಾಶ್ ರೈ (Prakash Rai) ಅಭಿನಯಿಸುತ್ತಿದ್ದಾರೆ. ಅಪ್ಪ – ಮಗನ ಬಾಂಧವ್ಯದ ಚಿತ್ರವಿದು. ತೆಲುಗಿನ ಸುನೀಲ್ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಒಟ್ಟಿನಲ್ಲಿ ಇದೇ ವರ್ಷ ಐದು ಚಿತ್ರಗಳಿಗೂ ಚಾಲನೆ ಸಿಗಲಿದೆ ಎನ್ನುವುದು ಚಂದ್ರು ಮಾತು.

prakash raj 1

ಡಾರ್ಲಿಂಗ್ ಕೃಷ್ಣ ಮತ್ತು ಪ್ರಕಾಶ್ ರೈ ಕಾಂಬಿನೇಷನ್ ನ ಮೊದಲ ಸಿನಿಮಾವಿದು. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲಿ ಮೂಡಿ ಬರಲಿದೆ. ಸದ್ಯಕ್ಕೆ ಇಷ್ಟೇ ಮಾಹಿತಿಯನ್ನು ನೀಡಿರುವ ಚಂದ್ರು, ಮುಂದಿನ ದಿನಗಳಲ್ಲಿ ನಾಯಕಿ ಮತ್ತು ತಂತ್ರಜ್ಞರ ವಿವರನ್ನು ನೀಡಲಿದ್ದಾರಂತೆ.

 

ಈ ಸಿನಿಮಾದ ನಂತರ ಚಂದ್ರು ಮತ್ತೊಂದು ಮೆಗಾ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲಿದ್ದಾರೆ. ಅದು ಕೂಡ ಭಾರೀ ಬಜೆಟ್ ಅನ್ನು ಹೊಂದಿರುವ ಸಿನಿಮಾವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿ ಬರಲಿದೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಅವರು ತೊಡಗಿಕೊಳ್ಳಲಿದ್ದಾರೆ.

Share This Article