ಸಂಯುಕ್ತ ಹೆಗಡೆ ನಟನೆಯ ‘ಕ್ರೀಮ್’ ಸಿನಿಮಾದ ಶೂಟಿಂಗ್ ಮುಕ್ತಾಯ

ಅಗ್ನಿ ಶ್ರೀಧರ್ ಅವರು ಕಥೆ ಹಾಗೂ ಸಂಭಾಷಣೆ ಬರೆದಿರುವ, ದೇವೇಂದ್ರ ಡಿ.ಕೆ ನಿರ್ಮಿಸಿರುವ ಹಾಗೂ ಅಭಿಷೇಕ್ ಬಸಂತ್ (Abhishek Basant) ನಿರ್ದೇಶನದ ‘ಕ್ರೀಮ್’ (Cream) ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಬಹು ನಿರೀಕ್ಷಿತ ಈ ಚಿತ್ರದ ನಾಯಕಿಯಾಗಿ ಸಂಯುಕ್ತ ಹೆಗಡೆ (Samyukta Hegde) ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್ (Achyut Kumar), ಅರುಣ್ ಸಾಗರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಕಳೆದವರ್ಷ ಈ ಚಿತ್ರ ಆರಂಭವಾಗಿದ್ದು, ಶೀರ್ಷಿಕೆ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಆನಂತರ ಚಿತ್ರತಂಡದಿಂದ ಈ ಚಿತ್ರದ ಕುರಿತು ಯಾವುದೇ ವಿಷಯ ಹೊರಬಂದಿರಲಿಲ್ಲ. ಅಂತಹ ವಿಷಯ ಚಿತ್ರದಲ್ಲಿ ಏನಿರಬಹುದು? ಎಂಬ ಕೌತುಕ ಎಲ್ಲರಲ್ಲೂ ಇದೆ. ಬೆಂಗಳೂರಿನಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರವೆಂಬ ಮಾಹಿತಿ ಇದೆ. ಇದನ್ನೂ ಓದಿ: ಕೊಡವ ಶೈಲಿಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ- ವಿಶಾಲ್ ಜೋಡಿ
ಚಿತ್ರೀಕರಣದ ವೇಳೆ ನಾಯಕಿ ಸಂಯುಕ್ತ ಹೆಗಡೆ ಅವರಿಗೆ ಭಾರಿ ಪೆಟ್ಟು ಬಿದ್ದ ವಿಷಯ ಮಾತ್ರ ತಿಳಿದಿತ್ತು. ಸಂಯುಕ್ತ ಅವರು ಚೇತರಿಸಿಕೊಂಡ ನಂತರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈಗ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭವಾಗಲಿದೆ. ಸುನೋಜ್ ವೇಲಾಯುಧನ್ ಛಾಯಾಗ್ರಹಣ, ಶಿವು (ಕೆಜಿಎಫ್) ಕಲಾ ನಿರ್ದೇಶನ, ಆರ್ಯನ್ ಸಂಕಲನ ಹಾಗೂ ಪ್ರಭು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k