ವಾಷಿಂಗ್ಟನ್: ಬುಧವಾರ ರಾತ್ರಿ ಅಮೆರಿಕದ (America) ಮೈನೆಯಲ್ಲಿ (Maine) ಗುಂಡಿನ ದಾಳಿ ನಡೆಸಿ 18 ಜನರನ್ನು ಹತ್ಯೆಗೈದಿದ್ದ ಶೂಟರ್ (Shooter) 2 ದಿನಗಳ ಬಳಿಕ ಸ್ವಯಂ ಪ್ರೇರಿತನಾಗಿ ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ.
ರಾಬರ್ಟ್ ಕಾರ್ಡ್ (Robert Card) (40) ಮೃತ ಶೂಟರ್. ಕಳೆದ 2 ದಿನಗಳಿಂದ ಪೊಲೀಸರು ಆರೋಪಿ ರಾಬರ್ಟ್ ಪತ್ತೆಗಾಗಿ ತನಿಖೆ ನಡೆಸುತ್ತಿದ್ದರು. ಆದರೆ ಆತನ ಮೃತದೇಹ ಲೆವಿಸ್ಟನ್ ನಗರದಿಂದ 8 ಕಿಲೋ ಮೀಟರ್ ದೂರದ ಕಾಡಿನಲ್ಲಿ ಪತ್ತೆಯಾಗಿದೆ ಎಂದು ಮೈನೆ ಸಾರ್ವಜನಿಕ ಸುರಕ್ಷತಾ ಆಯುಕ್ತ ಮೈಕ್ ಸೌಶುಕ್ ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದ ಮೈನೆಯಲ್ಲಿ ಗುಂಡಿನ ದಾಳಿ – 22 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ
Advertisement
Advertisement
ಈಶಾನ್ಯ ರಾಜ್ಯವಾದ ಮೈನೆಯಲ್ಲಿರುವ ಈ ಹಾರ್ಡ್-ಸ್ಕ್ರಬಲ್ ನಗರದಲ್ಲಿನ ಬೌಲಿಂಗ್ ಅಲ್ಲೆ ಮತ್ತು ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಬುಧವಾರ ಸಂಜೆ ರಾಬರ್ಟ್ ಕಾರ್ಡ್ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, 18 ಜನರು ಸಾವನ್ನಪ್ಪಿ 13 ಮಂದಿ ಗಾಯಗೊಂಡಿದ್ದರು. ಇದನ್ನೂ ಓದಿ: ರಾತ್ರೋರಾತ್ರಿ ದಾಳಿ ನಡೆಸಿ ಹಮಾಸ್ ಕಮಾಂಡರ್ ಹತ್ಯೆ; 36 ಮಂದಿ ಬಂಧಿಸಿದ ಇಸ್ರೇಲ್ ರಕ್ಷಣಾ ಪಡೆ
Advertisement
ಈ ಘಟನೆಯ ಬಳಿಕ ಸ್ಥಳೀಯರು ಆತಂಕಗೊಂಡಿದ್ದು, ಮನೆಯಿಂದ ಹೊರಬರದಂತೆ ಪೊಲೀಸರು ಸೂಚನೆ ನೀಡಿದ್ದರು. ರಾಬರ್ಟ್ ಸೇನಾ ಮೀಸಲು ಪಡೆಯಲ್ಲಿ ಬಂದೂಕು ತರಬೇತುದಾರನಾಗಿದ್ದು, ಮೈನೆ ರಾಜ್ಯದ ಸಾಕೊದಲ್ಲಿ ತರಬೇತಿ ನೀಡಲು ನಿಯೋಜಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕತಾರ್ನಲ್ಲಿ ಬಂಧಿತರಾಗಿದ್ದ 8 ಮಾಜಿ ನೌಕಾಪಡೆ ಸಿಬ್ಬಂದಿಗೆ ಮರಣದಂಡನೆ! – ಭಾರತಕ್ಕೆ ಆಘಾತ
Advertisement
ಅಲ್ಲದೇ ರಾಬರ್ಟ್ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ 2023ರಲ್ಲಿ ಎರಡು ವಾರಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಕಾನೂನು ಉಲ್ಲಂಘನೆ – ಇರಾನ್ನಲ್ಲಿ 12 ನಟಿಯರಿಗೆ ನಿಷೇಧ
Web Stories