ಬೆಂಗಳೂರು: ಈಶಾನ್ಯ ರಾಜ್ಯಗಳ ಬಿಜೆಪಿ ಉಸ್ತುವಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮೇಲೆ ಸೆಕ್ಸ್ ಹಗರಣದ ಗಂಭೀರ ಆರೋಪ ಕೇಳಿ ಬಂದಿದೆ.
The News Joint ವೆಬ್‍ಸೈಟ್ ಒಂದು ನಾಗಾಲ್ಯಾಂಡ್ ಕನ್ಯೆಯರ ಜೊತೆ ಹೊಟೇಲ್‍ನಲ್ಲಿ ರೆಡ್ ಹ್ಯಾಂಡ್ ಆಗಿ ರಾಮ್ ಮಾಧವ್ ಸಿಕ್ಕಿ ಬಿದ್ದಿದ್ದಾರೆ ಎಂದು ಸುದ್ದಿಯನ್ನು ಪ್ರಕಟಿಸಿತ್ತು.
Advertisement
Advertisement
ರಾಮ್ ಮಾಧವ್ ಮೇಲೆ ಬಂದಿರುವ ಆರೋಪವನ್ನು ನಾಗಾಲ್ಯಾಂಡ್ ಬಿಜೆಪಿ ತಳ್ಳಿ ಹಾಕಿದೆ. ಇದೊಂದು ಸುಳ್ಳು ಆರೋಪವಾಗಿದ್ದು, ಪ್ರಕಟವಾಗಿದ್ದ ವೆಬ್‍ಸೈಟ್ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದು ಸೈಬರ್ ಕ್ರೈಂ ನಲ್ಲಿ ದೂರು ನೀಡಿದೆ. ಕಾನೂನು ಕ್ರಮದ ಎಚ್ಚರಿಕೆ ಬೆನ್ನಲ್ಲೇ ರಾಮ್ ಮಾಧವ್ ಮೇಲೆ ಬಂದಿರುವ ಸುದ್ದಿ ಈಗ ವೆಬ್‍ಸೈಟ್ ನಿಂದ ಡಿಲೀಟ್ ಆಗಿದೆ. ಅಷ್ಟೇ ಅಲ್ಲದೇ ಡೊಮೈನ್ ಈಗ 63.46 ರೂ. ಮಾರಾಟಕ್ಕಿದೆ.
Advertisement
ಸುದ್ದಿ ಡಿಲೀಟ್ ಆಗಿದ್ದರೂ ಈ ವೆಬ್‍ಸೈಟ್ ನಲ್ಲಿ ಪ್ರಕಟಗೊಂಡ ಸುದ್ದಿಯ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿದೆ. ಬಿಜೆಪಿ ವಿರೋಧಿಸುವ ಮಂದಿ ಈ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
Advertisement
ವಿಶೇಷ ಏನೆಂದರೆ ಈ ವೆಬ್‍ಸೈಟ್ ಆರಂಭಗೊಂಡು 9 ದಿನ ಆಗಿತ್ತು. ನಾಗಲ್ಯಾಂಡ್ ವಿಧಾನಸಭಾ ಚುನಾವಣೆ ಇದೇ 27 ರಂದು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈ ವೆಬ್‍ಸೈಟ್ ತೆರೆದು ರಾಮ್ ಮಾಧವ್ ಅವರ ತೇಜೋವಧೆ ಮಾಡಲು ಮುಂದಾಗಿದೆ ಎಂದು ಬಿಜೆಪಿ ಹೇಳಿದೆ.
https://twitter.com/raghavwrong/status/963020140236259329
Shocked at utter & shameless falsehood being spread about @rammadhavbjp ji. We challenge those behind this blatant lie to prove the claims. Meanwhile, we are moving to the cyber crime department to investigate this. We shall also sue all those involved in spreading rumours!
— Himanta Biswa Sarma (@himantabiswa) February 11, 2018
2019 will be very ugly if the slanderous work of fiction doing the rounds on Ram Madhav are a yardstick to go by. Dodgy website, registered a month ago, IP pinging from Singapore, 3 articles, no contact info. Russian style online disinformation comes to India.
— ishaan prakash (@ishaan_ANI) February 11, 2018