ಗದಗ: ಕಾಂಗ್ರೆಸ್ (Congress) ಆಡಳಿತ ಪಕ್ಷದಲ್ಲಿ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿವೆ. ಕಳೆದ 1 ತಿಂಗಳಿಂದ ಹಿರಿಯ ಸಚಿವರ ಚಟುವಟಿಕೆ ಗಮನಿಸಿದಾಗ, ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರು ಮುಖ್ಯಮಂತ್ರಿಗಳ ಬದಲಾವಣೆ ಅವಸರದಲ್ಲಿದ್ದಾರೆ ಅಂತ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ನಗರದ ಸರಾಫ್ ಬಜಾರ್‌ನಲ್ಲಿರುವ ಅಂಬಾಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಿನ ಮುಖ್ಯಮಂತ್ರಿಯನ್ನು ತೆಗೆದರೆ ತಮಗೆ ಅವಕಾಶ ಇದೆ ಎಂದು ಅವರದ್ದೇ ಪಕ್ಷದ ಬಹಳ ಹಿರಿಯ ಸಚಿವರು ಅಂದುಕೊಂಡಿದ್ದಾರೆ. ಮುಂದೆ ನಮ್ಮ ಸರ್ಕಾರ ಬರೋದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಈ ನಿಟ್ಟಿನಲ್ಲಿ ಅವರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಇದರ ಒಟ್ಟು ಪರಿಣಾಮದಿಂದ ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಸ್ಥಗಿತವಾಗಿದೆ ಎಂದರು. ಇದನ್ನೂ ಓದಿ: Kolar | ಪತಿಯಿಂದ ವರದಕ್ಷಿಣೆ ಕಿರುಕುಳ – ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ
Advertisement
Advertisement
ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಯಾವುದಕ್ಕೂ ಹಣ ಬಿಡುಗಡೆ ಆಗುತ್ತಿಲ್ಲ. ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ನಿಂತು ಹೋಗಿವೆ. ಇದರಿಂದ ರಾಜ್ಯ ಇನ್ನಷ್ಟು ಹಿನ್ನಡೆ ಆಗುತ್ತಿದೆ. ಕಳೆದ 2-3 ತಿಂಗಳಿಂದ ಹಗರಣಗಳ ಸುರಿಮಳೆ ಆಗುತ್ತಿದೆ. ಮುಡಾ ಹಗರಣದಲ್ಲಿಯೇ (MUDA Scam) ಕಾಲ ಕಳೆದು ಹೊಯ್ತು. ಇಂತಹ ಒಂದು ಸರ್ಕಾರ ಪಡೆದುಕೊಂಡಿದ್ದು ಕರ್ನಾಟಕದ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕ್ಯಾಬಿನೆಟ್‌ನಲ್ಲಿ ಜಾತಿಗಣತಿ ವರದಿ ಬಗ್ಗೆ ಅಭಿಪ್ರಾಯ ಹೇಳ್ತೀನಿ – ಈಶ್ವರ್ ಖಂಡ್ರೆ
Advertisement
ವಿಜಯೇಂದ್ರವರು (B Y Vijayendra) ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿ, ಅವರ ಬೇರೆ ಕೆಲಸಗಳಿಗೆ ಭೇಟಿ ಆಗಿರಬಹುದು. ಈ ಸರ್ಕಾರವನ್ನು ಅಭದ್ರಗೊಳಿಸುವ ಪ್ರಯತ್ನ ನಾವು ಮಾಡುತ್ತಿಲ್ಲ. ತಾತ್ವಿಕವಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟವಿದೆ ವಿನಹ ಈ ಸರ್ಕಾರ ಅಭದ್ರಗೊಳಿಸುವಂತಹದ್ದು ಯಾವುದು ಇಲ್ಲ. ದಸರಾ (Dasara) ನಂತರ ಸಿಎಂ ಬದಲಾವಣೆ ಆಗ್ತಾರೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿ, ಅದು ಅವರ ಲೆಕ್ಕಾಚಾರ ಇರಬಹುದು. ಆದ್ರೆ ಸಿಎಂ ಆತ್ಮಸಾಕ್ಷಿಯ ಬಗ್ಗೆ ಮಾತನಾಡ್ತಾರೆ. ಅವರ ಮಾತುಗಳ ನೋಡಿದಾಗ ರಾಜೀನಾಮೆ ಕೊಡಲು ಮಾನಸಿಕವಾಗಿ ತಯಾರು ಆಗಿದ್ದಾರೆ ಅನಿಸುತ್ತೆ ಎಂದರು. ಇದನ್ನೂ ಓದಿ: ಸಿಎಂ ಹುದ್ದೆ ಕನಸು ಕಂಡರೆ ಹೇಳುವೆ, ಸದ್ಯಕ್ಕೆ ಬೇಡ – ಸಿಎಂ ರಾಜೀನಾಮೆ ಕೊಡುವ ಕಾಲ ಸನ್ನಿಹಿತ: ವಿಜಯೇಂದ್ರ
Advertisement
ಜಾತಿಗಣತಿ ಬಿಡುಗಡೆ ವಿಚಾರದಲ್ಲಿ ಬಿ.ಕೆ ಹರಿಪ್ರಸಾದ್ ಹೇಳಿಕೆ ನೋಡಿದ್ರೆ ಅವರ ಮನದಾಳದ ಮಾತು ಹೇಳಿದ್ದಾರೆ. ಜಾತಿಗಣತಿ ಬರುವುದು ಮುಖ್ಯನಾ? ಸರ್ಕಾರ ಬಿಳುವುದು ಮುಖ್ಯನಾ ಅನ್ನುವುದನ್ನು ಅವರೇ ಸ್ಪಷ್ಟೀಕರಣ ಕೊಡಬೇಕು ಎಂದರು. ನಿಖರವಾಗಿ ಜಾತಿಗಣತಿ ಆದೇಶ ಅದರಲ್ಲಿ ಇಲ್ಲ. ಕಾಂತರಾಜ್ ಕೊಟ್ಟ ವರದಿ ಆಗ ಸ್ವೀಕರಿಸಲಿಲ್ಲ. 2018 ರಲ್ಲಿ ವರದಿ ಕೊಟ್ಟಿದ್ರು ಆಗ ಯಾಕೆ ಮಾಡಲಿಲ್ಲ? ಯಾಕೆ ಪೆಂಡಿಂಗ್ ಇಟ್ರು? ಜಯಪ್ರಕಾಶ್ ಹೆಗ್ಡೆ 2-3 ತಿಂಗಳಲ್ಲಿ ಹೇಗೆ ವರದಿ ಕೊಡ್ತಾರೆ ಎಂದು ಪ್ರಶ್ನಿಸಿದರು. ಅವರು ಮೂರು ವರ್ಷ ಡೇಟಾ ತೆಗೆದುಕೊಂಡಿದ್ರು. ಇವರು ಏನಿಲ್ಲದೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ತೇಪೆ ಹಚ್ಚಿದ ಆ ವರದಿ ತೆಗೆದುಕೊಂಡು ಹಿಂದುಳಿದ ವರ್ಗ ಅಭಿವೃದ್ಧಿ ಮಾಡ್ತೆವಿ ಅಂತಿದ್ದಾರೆ. ಇದು ಬಹಳ ಗೊಂದಲವಿದೆ, ಈ ಗೊಂದಲ ಸ್ಪಷ್ಟವಾಗಬೇಕು. ಅದಕ್ಕಾಗಿ ಜಾತಿಗಣತಿ ಬಿಡುಗಡೆ ಮಾಡ್ರಿ ಅಂತ ನಾನು ಹೇಳಿದ್ದೆನೆ ಎಂದು ಹೇಳಿದರು. ಇದನ್ನೂ ಓದಿ: ಪಶ್ಚಿಮ ಬಂಗಾಳ| ಕಲ್ಲಿದ್ದಲು ಗಣಿಯಲ್ಲಿ ಸ್ಪೋಟ- 7 ಮಂದಿ ಸಾವು, ಹಲವರಿಗೆ ಗಾಯ
ಕಾಂಗ್ರೆಸ್ ಪಕ್ಷದಲ್ಲಿಯೇ ಮೊದಲಿಂದಲೂ ವಿರೋಧವಿದೆ. ಡಿಕೆ ಶಿವಕುಮಾರ್, ಶಾಮನೂರು ಶಿವಶಂಕ್ರಪ್ಪ, ಎಂ.ಬಿ ಪಾಟೀಲ ಎಲ್ಲರು ಮಾಹಿತಿ ಕೊಟ್ಟಿದ್ದಾರೆ. ಅವರಿಲ್ಲಿಯೇ ಹೊಂದಾಣಿಕೆ, ಸ್ಪಷ್ಟತೆ ಇಲ್ಲ. ಎಲ್ಲಾ ಗೊಂದಲ ನಿವಾರಣೆ ಮಾಡಿ ಜಾತಿಗಣತಿ ಆದಷ್ಟು ಬೇಗನೆ ಹೊರಗೆ ಬರಲಿ. ಇನ್ನು ಉಪಚುನಾವಣೆ ಕುರಿತು ಚನ್ನಪಟ್ಟಣದಲ್ಲಿ ಮೈತ್ರಿ ಗೊಂದಲ ನಿವಾರಣೆ ಆಗುತ್ತೆ. ಕಾಯ್ದು ನೋಡಿ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಕೇಳೋ ಮೊದಲು ವಿಜಯೇಂದ್ರ ರಾಜೀನಾಮೆ ನೀಡಲಿ: ಈಶ್ವರ್ ಖಂಡ್ರೆ
ಈ ವೇಳೆ ಬಿಜೆಪಿ (BJP) ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಅನಿಲ ಅಬ್ಬಿಗೇರಿ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿದ್ದರು. ಇದನ್ನೂ ಓದಿ: ವಿಜಯೇಂದ್ರ ಏನು ಹೈಕಮಾಂಡಾ? – ಸಿಎಂ ರಾಜೀನಾಮೆ ಹೇಳಿಕೆಗೆ ಜಮೀರ್ ತಿರುಗೇಟು